ಸ್ವಾವಲಂಬಿ ಬದುಕಿಗೆ ತಾಂತ್ರಿಕ ಶಿಕ್ಷಣ ಅತ್ಯವಶ್ಯ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ 

ನಾಬಾರ್ಡ ಯೋಜನೆ ಅಡಿಯಲ್ಲಿ ರೂ. ೪ ಕೋಟಿಯ ಜಿಟಿಟಿಸಿ ಕಾರ್ಯಗಾರರ ಭೂಮಿ ಪೂಜೆ ಹಾಗೂ ಭಾಗ್ಯನಗರ ಪಟ್ಟಣದಲ್ಲಿ ಹೆಚ್.ಕೆ.ಆರ್.ಡಿ.ಬಿ ಮತ್ತು ಲೋಕೋಪಯೋಗಿ ಯೋಜನೆ ಅಡಿಯಲ್ಲಿ ರೂ. ೩ ಕೋಟಿ ೪೦ ಲಕ್ಷದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ರಾಜ್ಯದ ಸಿದ್ದರಾಮಯ್ಯನವರ ಕಾಂಗ್ರೇಸ ಸರ್ಕಾರವು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಿರುವುದರಿಂದ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ. ಶಿಕ್ಷಣದ ಜೊತೆಗೆ ಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ಈಡೇರಿಸಲಾಗಿದೆ. ಕೊಪ್ಪಳ ನಗರದಲ್ಲಿ ಈಗಾಗಲೇ ವೈಧ್ಯಕೀಯ ಕಾಲೇಜು ಪ್ರಾರಂಭಗೊಂಡಿದ್ದು, ಹಾಗೂ ಸ್ನಾತಕೊತ್ತರ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸುಮಾರು ೬೦೦ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಗುಣಮಟ್ಟದ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬರುವ ದಿನಗಳಲ್ಲಿ ಇನ್ನು ಹೆಚ್ಚು ಅನುದಾನ ಮಂಜೂರು ಮಾಡಿಸಿ ಬಾಕಿ ಉಳಿದಿರುವ ಎಲ್ಲಾ ಕಾರ್ಯಗಳನ್ನು ಚುನಾವಣಾ ಪೂರ್ವದಲ್ಲಿ ಮುಕ್ತಾಯಗೊಳಿಸುತ್ತೇನೆ ಎಂದು ಹೇಳಿದರು.  ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಬಾಲಚಂದ್ರನ ಗ್ರಾ.ಪಂ.ಅಧ್ಯಕ್ಷೆ ಶಿವಮ್ಮ ಪೂಜಾರ, ಬ್ಲಾಕ ಕಾಂಗ್ರೇಸ ಅಧ್ಯಕ್ಷ ಸುರೇಶ ಬೂಮರೆಡ್ಡಿ ನಗರಸಭಾ ಸದಸ್ಯ ಮುತ್ತುರಾಜ ಕುಷ್ಟಗಿ ಮುಖಂಡರುಗಳಾದ ಯಮನಪ್ಪ ಕಬ್ಬೇರ, ಪ್ರಸನ್ನ ಗಡಾದ, ಶ್ರೀನಿವಾಸ ಗುಪ್ತಾ, ಗಾಳೆಪ್ಪ ಪೂಜಾರ, ಕಾಟನ ಪಾಷಾ, ಹೊನ್ನುರಸಾಬ, ರಾಮಣ್ಣ ಕಲ್ಲಣ್ಣನವರ,  ಮಾನ್ವಿ ಪಾಷಾ,  ಶಿವಾನಂದ ಹೊದ್ಲುರ, ಚನ್ನಪ್ಪ ತಟ್ಟಿ, ತುಕಾರಾಮಪ್ಪ ಗಡಾದ, ಮಂಜುನಾಥ ಸಾಲಿಮಠ, ಅಶೋಕ ಗೋರಂಟ್ಲಿ, ರಮೇಶ ಹ್ಯಾಟಿ, ಯಶೋಧಾ ಮುರಡಿ, ಹುಲಿಗೆಮ್ಮ ತಟ್ಟಿ, ಗಂಗಾಧರ ಕಬ್ಬೇರ, ಸವಿತಾ ಗೋರಂಟ್ಲಿ, ಹನುಮಂತ ಕಡೆಮನಿ, ಚಿದಾನಂದ ಅಡ್ಡೇದಾರ, ವೆಂಕಟೇಶ ಇಟ್ಟಂಗಿ, ಸುರೇಶ ಮುಂಡರಗಿ, ಶ್ರೀನಿವಾಸ ವರ್ಮಾ, ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.

Please follow and like us:
error