fbpx

ಸ್ವಯಂ ಉದ್ಯೋಗ ತರಬೇತಿಯ ಯೋಜನೆ ಮಾಹಿತಿ ನೀಡಿ : ರಘುನಂದನ್ ಮೂರ್ತಿ

ಜಿಲ್ಲಾ ಮಟ್ಟದ ಆರ್‌ಸೆಟಿ ಮಾರ್ಗದರ್ಶಿ ಸಮಿತಿ ಸಭೆ

ಕೊಪ್ಪಳ, : ಕೋವಿಡ್-19ರ ಹಿನ್ನೆಲೆ ಜಿಲ್ಲೆಯಲ್ಲಿ ಹೆಚ್ಚು ನಿರುದ್ಯೋಗಿಗಳಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಉದ್ಯೋಗ ತರಬೇತಿಯನ್ನು ಹಮ್ಮಿಕೊಂಡು ಅದರ ಬಗ್ಗೆ ಯೋಜನೆಯನ್ನು ತಯಾರಿಸಿ ಮಾಹಿತಿಯನ್ನು ಶೀಘ್ರದಲ್ಲಿ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಜಿಲ್ಲಾಮಟ್ಟದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ಆರ್‌ಸೆಟಿ) ವತಿಯಿಂದ ಜಿಲ್ಲಾ ಪಂಚಾಯತ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಶುಕ್ರವಾರದಂದು (ಜು.24) ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಆರ್‌ಸೆಟಿ ಮಾರ್ಗದರ್ಶಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19 ರ ಪ್ರಯುಕ್ತ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದ್ದು, ಸ್ವಯಂ ಉದ್ಯೋಗ ತರಬೇತಿಯನ್ನು ಹಮ್ಮಿಕೊಂಡು ನಿರುದ್ಯೋಗಿಗಳು ಉದ್ಯೋಗ ಸ್ಥಾಪಿಸಿಕೊಳ್ಳುವಂತೆ ಪ್ರೇರೆಪಿಸಬೇಕು.  ಈ ನಿಟ್ಟಿನಲ್ಲಿ ಯೋಜನೆಯನ್ನು ತಯಾರಿಸಿ, ಸ್ವಯಂ ಉದ್ಯೋಗ ತರಬೇತಿಯ ಸಂಪೂರ್ಣ ವಿವರವನ್ನು ಮೂರು ದಿನಗಳ ಒಳಗಡೆ ನೀಡಬೇಕು.  ಈ ನಿಟ್ಟಿನಲ್ಲಿ ಎಸ್‌ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಬೋಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರೇವಣಸಿದ್ದಪ್ಪ, ಜಿಲ್ಲಾ ಕೈಗಾರಿಕ ಕೇಂದ್ರದ ಸಹಾಯಕ ನಿರ್ದೇಶಕ ಎಸ್.ಎಮ್ ಚವ್ಹಾಣ, ಕೆ.ವಿ.ಐ.ಬಿಯ ಜಿಲ್ಲಾ ಅಧಿಕಾರಿ ಕೆ.ವಿರೇಶ, ಎಸ್.ಬಿ.ಐ ಆರ್‌ಸೆಟಿ  ನಿರ್ದೇಶಕ ವಿರುಪಾಕ್ಷ.ಎಸ್. ಪಲ್ಲಾಪೂರ  ಸೇರಿದಂತೆ ಇತರರು  ಉಪಸ್ಥಿತರಿದ್ದರು.

Please follow and like us:
error
error: Content is protected !!