ಸ್ವದೇಶಿ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ

ಹೊಸದಿಲ್ಲಿ, : ಭಾರತದಲ್ಲಿ ಅಭಿವೃದ್ಧಿಪಡಿಸಿರುವ ಭಾರತ್‌ ಬಯೋಟೆಕ್‌ ಮತ್ತು ಸೆರಮ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಇಂಡಿಯಾ ತಯಾರಿಸಿರುವ ಕೋವಿಡ್‌ ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ಬಳಸಲು ಡಿಸಿಜಿಐ ಅನುಮತಿ ನೀಡಿದೆ  ವರದಿ ತಿಳಿಸಿದೆ. ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಎಂಬ ಎರಡು ಲಸಿಕೆಗಳನ್ನು ಇಂದು ʼನಿರ್ಬಂಧಿತ ಬಳಕೆʼಗೆ ಅನುಮೋದನೆ ಮಾಡಲಾಗಿದೆ.

ಈ ಕುರಿತು ಟ್ವೀಟ್‌ ಮಾಡಿದ ಪ್ರಧಾನಿ ನರೇಂದ್ರ ಮೋದಿ, ” ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳು ಅನುಮೋದನೆಯನ್ನು ಪಡೆದುಕೊಂಡಿದೆ. ಇದು ನಮ್ಮ ಹೋರಾಟವನ್ನು ಗಟ್ಟಿಗೊಳಿಸುತ್ತಿದೆ. ಭಾರತ ದೇಶಕ್ಕೆ ಮತ್ತು ನಮ್ಮ ಎಲ್ಲಾ ವಿಜ್ಞಾನಿಗಳಿಗೆ ಮತ್ತು ತಜ್ಞ ಮೈದ್ಯರುಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಮ್ಮ ಆತ್ಮನಿರ್ಭರ್‌ ಭಾರತದ ಬೇರನ್ನು ಇದು ಗಟ್ಟಿಗೊಳಿಸುತ್ತಿದೆ. ಎಲ್ಲ ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ, ವಿಜ್ಞಾನಿಗಳಿಗೆ, ಪೊಲೀಸ್‌ ಅಧಿಕಾರಿಗಳಿಗೆ, ಸ್ವಚ್ಛತಾ ಕರ್ಮಿಗಳಿಗೆ ಮತ್ತು ಕೋವಿಡ್‌ ವಾರಿಯರ್ಸ್‌ ಗೆ ನಾನು ಶುಭಾಶಯ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Please follow and like us:
error