ಸ್ವತಂತ್ರ ಸೇನಾನಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ – ಶಿವರಾಜ್ ತಂಗಡಗಿ


ಕೊಪ್ಪಳ : ೧೫ ನಗರದ ಜಿಲ್ಲಾ ಕಾಂಗ್ರೆಸ ಕಾರ್ಯಲಯದಲ್ಲಿ ೭೪ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದ್ವಜಾರೋಹಣ ನೇರವೆರಿಸಿ ಬಳಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ ಅಧ್ಯಕ್ಷ ಶಿವರಾಜ ತಂಗಡಗಿಯವರು ತ್ಯಾಗ ಬಲಿದಾನದ ಸಂಕೇತವಾದ ನಮ್ಮ ಸ್ವತಂತ್ರವು ದೇಶಕ್ಕಾಗಿ ಅನೇಕ ಮಹನೀಯರು ನೀಡಿದ ಜೀವ ಬಲಿದಾನದಿಂದ ಬ್ರೀಟಿಷರನ್ನು ನಮ್ಮ ದೇಶದಿಂದ ಹೊರದೂಡಿ ಅಗಷ್ಟ ೧೫ ೧೯೪೭ ರಂದು ಭಾರತ ದೇಶಕ್ಕೆ ಸ್ವತಂತ್ರ ತದ್ದು ಕೊಟ್ಟ ವೀರ ಸೇನಾನಿಗಳ ಆದರ್ಶವನ್ನು ಪ್ರತಿಯೊಬ್ಬ ಭಾರತೀಯನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಐಕ್ಯತೆಗೆ ಹಗಲಿರುಳು ಶ್ರಮಿಸಬೇಕು ರಾಷ್ಟ್ರ ಪ್ರೇಮವನ್ನು ಪ್ರತಿಯೊಬ್ಬರು ತಮ್ಮ ಜೀವನದ ಆದ್ಯ ಗುರಿಯಾಗಿ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದಂರ್ಭದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಮಾತನಾಡಿ ದೇಶದ ಸ್ವತಂತ್ರ ಅಹಿಂಸ ಮಾರ್ಗದ ತತ್ವದ ಅಡಿಯಲ್ಲಿ ಮಾಹತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಅನೇಕ ಸ್ವತಂತ್ರ ಸೇನಾನಿಗಳ ಅನುಪಮ ಕೊಡುಗೆಯಾಗಿದೆ ಅವರು ನೀಡಿದ ಈ ಮಹಾನ ಬಲಿದಾನಕ್ಕೆ ಚುತಿ ಬರದಹಾಗೆ ನೋಡಿಕೊಳ್ಳುವುದೆ ನಮ್ಮ ಆದ್ಯ ಕರ್ತವ್ಯಯಾಗಬೇಕೆಂದು ಎಂದು ಹೇಳಿದರು.
ಈ ಸಂದಂರ್ಭದಲ್ಲಿ ಮಾಜಿ ಜಿ.ಪಂ. ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ. ರಾಜಶೇಖರ ಹಿಟ್ನಾಳ, ಜಿ.ಪಂ ಸದಸ್ಯ ಹನುಮಂತಗೌಡ್ರ ಚಂಡೂರು, ಜಿಲ್ಲಾ ಮಹಿಳಾ ಕಾಂಗ್ರೆಸ ಅಧ್ಯಕ್ಷೆ ಮಾಲತಿ ನಾಯಕ್, ನಗರಸಭಾ ಸದಸ್ಯ ಅಜಿಮ್ ಅತ್ತಾರ, ವೀರುಪಾಕ್ಷಪ್ಪ, ಅಕ್ಬರ ಪಾಷ ಪಲ್ಟನ್, ಲತಾ ಗವಿಸಿದ್ದಪ್ಪ ಚಿನ್ನೂರು, ಉಮಾ ಗವಿಸಿದ್ದಪ್ಪ ಪಾಟೀಲ್, ಜಿಲ್ಲಾ ಯುವ ಕಾಂಗ್ರೆಸ ಅಧ್ಯಕ್ಷ ಶರಣ ಬಸುವರಾಜ ರೆಡ್ಡಿ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷರುಗಳಾದ ಕಾಟನ್ ಪಾಷ, ಅಂಬಣ್ಣ ನಾಯಕ,ಮುಂಖಡರುಗಳಾದ ದ್ಯಾಮಣ್ಣ ಚಿಲವಾಡಗಿ, ಕೃಷ್ಣ ಇಟ್ಟಂಗಿ, ಮಂಜುನಾಥ ಗಾಳಿ, ಮಾನ್ವಿಪಾಷ, ಗವಿಸಿದ್ದಪ್ಪ ಚಿನ್ನೂರು, ಆಯುಶಾಖಾನ್ಮ, ಪರಶುರಾಮ ಕೇರೆಹಳ್ಳಿ, ಪ್ರಭು ಕಲಾಲ್, ವಕ್ತಾರ ಕುರಗೋಡ ರವಿ ಯಾದವ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Please follow and like us:
error