ಸೌದಿ ಅರೇಬಿಯಾದ ಮೆಕ್ಕಾ ಬಳಿ ಬೀಕರ ಬಸ್ ಅಪಘಾತ :  35  ವಿದೇಶಿಗರ ಸಾವು

ರಿಯಾದ್ : ಮುಸ್ಲಿಂ ಪವಿತ್ರ ನಗರವಾದ ಮದೀನಾ ಬಳಿ ಬಸ್ ಮತ್ತೊಂದು ಭಾರೀ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವತ್ತೈದು ವಿದೇಶಿಯರು ಸಾವನ್ನಪ್ಪಿದ್ದಾರೆ .

ಪಶ್ಚಿಮ ಸೌದಿ ಅರೇಬಿಯನ್ ನಗರದ ಬಳಿ ಖಾಸಗಿ ಚಾರ್ಟರ್ಡ್ ಬಸ್  ಭಾರೀ ವಾಹನ (ಲೋಡರ್) ನಡುವೆ ಘರ್ಷಣೆ ಸಂಭವಿಸಿದೆ ಎಂದು ಮದೀನಾ ಪೊಲೀಸರ ವಕ್ತಾರರು ತಿಳಿಸಿದ್ದಾರೆ. ಸಾವನ್ನಪ್ಪಿದವರಲ್ಲಿ ಬಹುತೇಕರು ಅರಬ್ ಮತ್ತು ಏಷ್ಯನ್ ಯಾತ್ರಿಕರು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಅಪಘಾತದ ರಭಸಕ್ಕೆ ಬಸ್ ಸಂಪೂರ್ಣವಾಗಿ ಭಸ್ಮವಾಗಿದೆ ಗಾಯಾಳುಗಳನ್ನು ಅಲ್-ಹಮ್ನಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ,

 

Please follow and like us:
error