ಸೋಮಶೇಖರ್ ರೆಡ್ಡಿ ಪ್ರಚೋದನಾಕಾರಿ ಭಾಷಣದ ವಿರುದ್ದ ತೀವ್ರ ಆಕ್ರೋಶ, ಪ್ರತಿಭಟನೆ

ಬಳ್ಳಾರಿ :    ಬಿಜೆಪಿ ಪಕ್ಷ & ದೇಶಭಕ್ತ ಸಂಘಟನೆ ವತಿಯಿಂದ ಆಯೋಜಿಸಿದ್ದ ಸಿಎಎ ಪರ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದವರ ಬಗ್ಗೆ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಅವಹೇಳನ‌ಮಾಡಿ ಕೋಮು ಭಾವನೆ ಕದಡುವಂತೆ ಪ್ರಚೋದನಾಕಾರಿ ಬಾಷಣ ಮಾಡಿದ್ದ ಶಾಸಕ ಸೋಮಶೇಖರ ರೆಡ್ಡಿ ವಿರುದ್ದ ಗಣಿನಾಡು ಬಳ್ಳಾರಿಯಲ್ಲಿ  ಭಾರಿ ಅಕ್ರೋಶ ವ್ಯಕ್ತವಾಗಿದೆ. ಏಕಾ ಏಕಿ ಸೇರಿದ ಸಾವಿರಾರು ಜನರನ್ನು ನಿಯಂತ್ರಿಸಲು ಪೊಲಿಸರು ಪಟ್ಟ ಹರಸಾಹಸ ಪಟ್ಟರೆ, ಧಿಡೀರ್ ಪ್ರತಿಭಟನೆಗೆ ಕಾಂಗ್ರೆಸ್ ನಾಯಕರು ಕೂಡ ಸಾಥ್ ನೀಡಿದ್ರು. ನಿನ್ನೆ ಬಿಜೆಪಿಯಿಂದ ಆಯೋಜಿಸಿದ್ದ NRC ಬೆಂಬಲಿತ ಸಮಾವೇಶದಲ್ಲಿ,  ಬಳ್ಳಾರಿ ನಗರ ಶಾಸಕ ಸೋಮಶೇಖರ್  ರೆಡ್ಡಿ ಸಿಎಎಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಹಾಗೂ ಮುಸ್ಲಿಂ ‌ ಸಮುದಾಯದ ವಿರುದ್ದ ಗರಂ ಅಗಿದ್ದರು, ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಪಕ್ಷದ ಬೆಂಬಲಿಗರ ಮಧ್ಯೆ ನಿಂತು ಮೊದಲ ಬಾರಿಗೆ ರೆಡ್ಡಿ ಸೊಕ್ಕಡಗಿಸುವ, ಮಟ್ಟಹಾಕುವ ಹಾಗೂ ಮುಸ್ಲಿಂ ಸಮುದಾಯಕ್ಕೆ ಉಳಿಗಾಲವಿಲ್ಲ ಎಂಬಂತ ಮಾತುಗಳನ್ನಾಡಿದ್ದರು. ಹಾಗೆ ಮಾತನಾಡಿದ್ದ ಸೋಮಶೇಖರರೆಡ್ಡಿ, ಮಾತುಗಳು ವೈರಲ್ ಅಗುತ್ತಿದ್ದಂತೆ, ಸಂಜೆಯಾಗುತ್ತಲೇ ಕಾಂಗ್ರೆಸ್ ಹಾಗೂ ಮುಸ್ಲಿಂ ಮುಖಂಡರು ಗಾಂಧಿನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದರು. ಸೋಮಶೇಖರ ರೆಡ್ಡಿ ಸೇರಿದಂತೆ ದೇಶಭಕ್ತ ಸಂಘಟನೆಯ ಐವರ ವಿರುದ್ದ FIR ದಾಖಲಾಗಿದೆ. ಇಂದು ಬೆಳಗಾಗುತ್ತಲೇ ಸಹಸ್ರ, ಸಹಸ್ರ, ಸಂಖ್ಯೆಯಲ್ಲಿ ಜಮಾವಣೆಯಾದ ಮುಸ್ಲಿಂ ಸಮುದಾಯದ ಜನರು ರಾಯಲ್ ವೃತ್ತದಲ್ಲಿ ಸೇರಿ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಪ್ರಚೋದನಾಕಾರಿ ಬಾಷಣ ಮಾಡುವ ಮೂಲಕ ಕೊಮು ಭಾವನೆ ಕೆರಳಿಸಿರುವ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ದಿಡೀರ್ ಪ್ರತಿಭಟನೆಗಿಳಿದರು. ಶಾಸಕರ ಪ್ರತಿಕೃತಿ ಹಾಗೂ ಟಯರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ದಿಢೀರ್  ಪ್ರತಿಭಟನೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿ ಒಂದು ರೀತಿ ಪರಿಸ್ಥಿತಿ ಕೈಮಿರುತ್ತದೆ ಎಂಬ ಹಂತದಲ್ಲಿ ಎಸ್ಪಿ ಬಾಬಾ ಸೇರಿದಂತೆ ಹಿರಿಯ ಪೊಲಿಸ್ ಅಧಿಕಾರಿಗಳು ಹೆಣಗಾಡಿದರು. ಇನ್ನೂ ನಿಯಂತ್ರಿಸಲು, ಜೀಪ್ ಮೇಲೆ ಹತ್ತಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ರೂ, ಅದ್ರೂ ಶಾಸಕರ ವಿರುದ್ದ ರೊಚ್ಚಿಗೆದ್ದಿದ್ದ ಜನರು ಗಂಟೆಗಳ ಕಾಲ ಪ್ರತಿಭಟನೆ ಮಾಡಿ ಶಾಸಕರ ವಿರುದ್ಧ ಘೋಷಣೆಗಳನ್ನ ಕೂಗಿದಲ್ಲದೆ ಮುಸ್ಲಿಂ ಸಮುದಾಯಕ್ಕೆ ಬಹಿರಂಗ ಕ್ಷಮೆ ಕೇಳುವಂತೆ, ಮತ್ತು‌ ಇಂತಹ ಶಾಸಕರನ್ನ ಉಚ್ಚಾಟನೆ ಮಾಡುವಂತೆ ಆಗ್ರಹಿಸಿದರು.

Please follow and like us:
error