ಸೇವಾ ಭದ್ರತೆ ಹಾಗೂ 4 ತಿಂಗಳ ವೇತನ ನೀಡುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಹಾಗೂ 4 ತಿಂಗಳ ವೇತನ ನೀಡುವಂತೆ ಉಪನ್ಯಾಸಕರು ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದರು ಪ್ರತಿಭಟನೆ ನಡೆಸಿದ ಉಪನ್ಯಾಸಕರು ಮಾರ್ಚ್ 24 ರಿಂದ ಜುಲೈ 31 ರವರೆಗೆ ಅತಿಥಿ ಉಪನ್ಯಾಸಕರ ಸೇವಾ ಅವಧಿಯನ್ನು ಪರಿಗಣಿಸಿ ವೇತನವನ್ನು ನೀಡಬೇಕು. ಪದವಿ ಕಾಲೇಜು ಉಪನ್ಯಸಕರಿಗೆ ₹ 50000 ವೇತನ ನೀಡುವಂತೆ ಯುಜಿಸಿ ಸುತ್ತೋಲೆ ಹೊರಡಿಸಿತ್ತು. ಆದ್ರೆ ಪಿಹೆಚ್ ಡಿ ಹಾಗೂ ನೆಟ್ ಸೆಟ್ ಪೂರ್ಣಗೊಳಿಸಿದವರಿಗೆ ₹13000 ಹಾಗೂ ಸ್ನಾತಕೋತ್ತರ ಪದವಿದರರಿಗೆ ₹11000 ನೀಡಲಾಗುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಉಪನ್ಯಾಸಕರು ಪಡಬಾರದ ಕಷ್ಟವನ್ನು ಪಟ್ಟಿದ್ದಾರೆ. ಸರ್ಕಾರ ಈವರೆಗೆ ಉಪನ್ಯಾಸಕರ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ.‌ಕೂಡಲೇ ವೇತನ‌ ಹಾಗೂ ಸೇವಾಭದ್ರತೆ ಒದಗಿಸಬೇಕು ಅಂತಾ ಒತ್ತಾಯಿಸಿದರು

Please follow and like us:
error