ಸುರೇಶ್ ಅಂಗಡಿಗೆ ಸಂಸದ ಸಂಗಣ್ಣ ಕರಡಿ ಸಂತಾಪ

Koppal :  ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿಯವರು ಕ್ರಿಯಾಶಿಲರಾಗಿ ಕಾರ್ಯ ನಿರ್ವಹಿಸಿದ್ದರು. ರಾಜ್ಯದ ಅನೇಕ ಜ್ವಲಂತ ರೈಲ್ವೆ ಸಮಸ್ಯೆಗಳಿಗೆ ಕೂಡಲೆ ಸ್ಪಂದಿಸಿ ಪರಿಹರಿಸಿದ್ದರು. ಕೊಪ್ಪಳ, ಬಳ್ಳಾರಿ, ರಾಯಚೂರು ಭಾಗದ ರೈಲ್ವೆ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿ ನಮಗೆಲ್ಲ ಪ್ರೋತ್ಸಾಹಿಸಿದ್ದರು. ರಾಜ್ಯಕ್ಕೆ ಹೊಸ ಹೊಸ ಯೋಜನೆಗಳನ್ನು ಕೇಂದ್ರ ಸರ್ಕಾರದಿಂದ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರೊಬ್ಬ ಸಜ್ಜನ ರಾಜಕಾರಣಿ. ಅವರನ್ನು ಕಳೆದುಕೊಂಡ ದುಃಖಿತರಾಗಿದ್ದೇವೆ. ವೈಯಕ್ತಿಕವಾಗಿ ನನಗೆ ತೀವ್ರ ನೋವು ತರಿಸಿದೆ. ನನ್ನ ಯಾವುದೇ ಮನವಿಗೆ ಇಲ್ಲ ಎನ್ನದೇ ಎಲ್ಲಾ ರೈಲ್ವೆ ಯೋಜನೆಗಳಿಗೆ ಒಪ್ಪಿಗೆ ನೀಡಿದ ಅಭಿವೃದ್ಧಿ ಪರ ಚಿಂತಕ. ಬೇಗನ ಗುಣಮುಖರಾಗಿ ಸಂಸತ್ ಅಧಿವೇಶನಕ್ಕೆ ಆಗಮಿಸುತ್ತಾರೆ ಎಂಬ ವಿಶ್ವಾಸ ಇತ್ತು. ಆದರೆ ವಿಧಿಯ ಆಟ ಬೇರೆಯದೇ ಆಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಎಂದು ಸಂಸದ ಕರಡಿ ಸಂಗಣ್ಣ ಸಂತಾಪ ಸೂಚಿಸಿದ್ದಾರೆ
Please follow and like us:
error