ಸುಪ್ರೀಂ ತೀರ್ಪು : ಹೊಸ ಸಂಸತ್ ಸಂಕೀರ್ಣ ನಿರ್ಮಾಣ ಮಾಡಬಹುದು

ಸದಿಲ್ಲಿ: ದಿಲ್ಲಿ ಇಂಡಿಯಾ ಗೇಟ್ ಬಳಿ ಹೊಸ ಸಂಸತ್ ಸಂಕೀರ್ಣ ನಿರ್ಮಾಣ ಕಾರ್ಯ ನಡೆಸಬಹುದು ಎಂದು ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದೆ.

ಮಹತ್ವಾಕಾಂಕ್ಷೆಯ  ಸೆಂಟ್ರಲ್ ವಿಸ್ಟಾ ಯೋಜನೆಗೆ ನೀಡಲಾದ ಪರಿಸರ ಅನುಮತಿ ಸೇರಿದಂತೆ ಹಲವಾರು ಅಂಶಗಳನ್ನು ಪ್ರಶ್ನಿಸಿರುವ ಒಂದು ಗುಂಪಿನ ಮನವಿಯನ್ನು ಆಲಿಸುವಾಗ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.

 

ಅನುಮತಿಗಳಲ್ಲಿ ಯಾವುದೇ ದುರ್ಬಲತೆಗಳಿಲ್ಲ. ಭೂ ಬಳಕೆಯಲ್ಲಿ ಬದಲಾವಣೆ ಇಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಮೂವರು ನ್ಯಾಯಾಧೀಶರನ್ನು ಒಳಗೊಂಡ ಪೀಠ ತನ್ನ ಬಹುಮತದ ತೀರ್ಪಿನಲ್ಲಿ ತಿಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ನೂತನ ಸಂಸತ್ ಭವನದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ತೀರ್ಪು ಬರುವ ತನಕ ಯಾವುದೇ ನಿರ್ಮಾಣ ಕಾರ್ಯ ಆರಂಭಿಸುವುದಿಲ್ಲ ಎಂದು ಸರಕಾರವು ನ್ಯಾಯಾಲಯಕ್ಕೆ ಭರವಸೆ  ನೀಡಿತ್ತು.
ಭೂ ಬಳಕೆಯ ಬದಲಾವಣೆಗೆ ಅನುಮತಿ ನೀಡಿರುವ ಕುರಿತು ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದರು  ಹಾಗೂ ಅಂತಹ ಬದಲಾವಣೆಗೆ ಅನುಮತಿ ನೀಡುವ ಅಧಿಕಾರಿಗಳನ್ನು ಪ್ರಶ್ನಿಸಿದ್ದರು.

2019ರ ಸೆಪ್ಟಂಬರ್ ನಲ್ಲಿ ಸೆಂಟ್ರಲ್ ವಿಸ್ಟಾ ಘೋಷಿಸಿರುವ ಯೋಜನೆಯಲ್ಲಿ ಹೊಸ ತ್ರಿಕೋನ ಆಕೃತಿಯ ಸಂಸತ್ತಿನ ಕಟ್ಟಡದಲ್ಲಿ 900ರಿಂದ 1200 ಸಂಸದರಿಗೆ ಆಸನ ಸಾಮಥ್ಯವನ್ನು ಹೆಚ್ಚಿಸಲಾಗುತ್ತದೆ. ಯೋಜನೆಯು 2022ರ ಆಗಸ್ಟ್ ವೇಳೆಗೆ ಪೂರ್ಣಗೊಳಿಲಾಗುವುದು. ದೇಶವು ತನ್ನ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುವಾಗ ನೂತನ ಸಂಸತ್ ಉದ್ಘಾಟಿಸಲು ನಿರ್ಧರಿಸಲಾಗಿದೆ.

 

Please follow and like us:
error