ಸಿ.ಪಿ.ಐ.ಎಂ.ಎಲ್ ಪಕ್ಷದ ೫೦ನೇ ವಾರ್ಷಿಕೋತ್ಸವ ಆಚರಣೆ

– ಭಾರಧ್ವಾಜ್

ಗಂಗಾವತಿ: ಗಂಗಾವತಿ ನಗರದ ಸಿ.ಪಿ.ಐ.ಎಂ.ಎಲ್ ಕಾರ್ಯಾಲಯವಾದ ಕ್ರಾಂತಿಕೇಂದ್ರದಲ್ಲಿ ಸಿ.ಪಿ.ಐ.ಎಂ.ಎಲ್ ಪಕ್ಷದ ೫೦ನೇ ವರ್ಷಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ೫೦ ವರ್ಷಗಳಿಂದ ಹುತಾತ್ಮರಾದ ೩೦ ಸಾವಿರ ಕಾರ್ಯಕರ್ತರಿಗೆ ೦೨ ನಿಮಿಷಗಳ ಕಾಲ ಮೌನಾಚರಣೆಗಳಿಂದ ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಭಾರಧ್ವಾಜ್ ೧೯೬೭ ನಕ್ಸಲ್‌ವಾದಿ ಹೋರಾಟದಿಂದ ಪ್ರಾರಂಭವಾದ ಪಕ್ಷ ೧೯೬೯ ರಲ್ಲಿ ಅಸ್ತಿತ್ವದಲ್ಲಿ ಬಂದಿದೆ. ೧೯೬೯ ರಿಂದ ಪಕ್ಷ ಸಾರ್ವಜನಿಕರ ಮಧ್ಯೆ ಬಂದು ಕಾರ್ಯಗತವಾಗಿದೆ. ಪಕ್ಷ ಪ್ರಾರಂಭದಿಂದ ಸರ್ಕಾರದಿಂದ ನಿಷೇಧಿಸಲ್ಪಟ್ಟು, ಭೂಗತವಾಗಿಯೇ ಕೆಲಸ ಮಾಡಿದೆ. ೧೯೯೨ ರಲ್ಲಿ ಕಾ|| ವಿನೋದ ಮಿಶ್ರಾ ನೇತೃತ್ವದಲ್ಲಿ ಪಕ್ಷ ಜನರ ಮಧ್ಯೆ ಬಂದು ಕೆಲಸ ಮಾಡಲಾರಂಭಿಸಿತು. ದೇಶದಲ್ಲಿಯೇ ಹೆಚ್ಚು ಜನ ಕಾರ್ಯಕರ್ತರನ್ನು ಕಳೆದುಕೊಂಡ ಪಕ್ಷ ಸಿ.ಪಿ.ಐ.ಎಂ.ಎಲ್ ಆಗಿದೆ ಎಂದು ಭಾರಧ್ವಾಜ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಬಂದ ಬಸವರಾಜ ಗಾರಲದಿನ್ನಿ ಇವರ ಸೇವೆಯನ್ನು ಗುರುತಿಸಿದ ಪಕ್ಷ ಸನ್ಮಾನಿಸಿತು. ಸನ್ಮಾನ ಸ್ವೀಕರಿಸಿ ಬಸವರಾಜರವರು ಮಾತನಾಡುತ್ತಾ, ವಿದ್ಯಾರ್ಥಿ ದೆಸೆಯಿಂದ ಪಕ್ಷದಲ್ಲಿ ತಾವು ಮಾಡಿದ ಹೋರಾಟಗಳ ಬಗ್ಗೆ ವಿಸ್ತಾರವಾಗಿ ಹೇಳಿದರು.
ಸಮಾವೇಶದ ಅಧ್ಯಕ್ಷತೆಯನ್ನು ಕಾ|| ಗಿಡ್ಡಪ್ಪ ವಹಿಸಿದ್ದರು. ವೇದಿಕೆಯ ಮೇಲೆ ಕಾ|| ಪರಶುರಾಮ, ಕಾ|| ರೇಣುಕಾ, ಕಾ|| ಕವಿತಾ, ಕಾ|| ಮಾಯಮ್ಮ ಉಪಸ್ಥಿತರಿದ್ದರು. ಸಮಾವೇಶದ ನಿರೂಪಣೆಯನ್ನು ಕಾ|| ಸಣ್ಣ ಹನುಮಂತಪ್ಪ ಮಾಡಿದರು.

Please follow and like us:
error