ಸಿಬ್ಬಂದಿಗೆ ಕೋವಿಡ್ ದೃಢ-ಗಂಗಾವತಿ ತಹಸೀಲ್ದಾರ್ ಕಚೇರಿ ಸೀಲ್ ಡೌನ್

ಗಂಗಾವತಿ: ಇಲ್ಲಿಯ ತಹಸೀಲ್ದಾರ್ ಕಚೇರಿ ಸಿಬ್ಬಂದಿಯೊಬ್ಬರಿಗೆ‌ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು, ಇಡೀ ತಹಸೀಲ್ದಾರ್ ಕಚೇರಿಗೆ ಬೀಗ ಹಾಕಿ ಸೀಲ್ ಡೌನ್ ಮಾಡಲಾಗಿದೆ. ಇದರಿಂದ ನೋಂದಣಿ ಕಚೇರಿ, ಆಹಾರ ಇಲಾಖೆ, ಚುನಾವಣಾ ಕಚೇರಿ, ಸರ್ವೇ ಇಲಾಖೆಯ ಕಚೇರಿಯನ್ನು ಸೋಮವಾರ ಒಂದು ದಿನದ ಮಟ್ಟಿಗೆ ಮುಚ್ಚಲಾಗಿದೆ.

ಸಾರ್ವಜನಿಕ ಪರವಾನಿಗೆ ಕೊಡುವ ಪ್ರಥಮ ದರ್ಜೆ ಸಹಾಯಕನೋರ್ವನಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸೋಂಕು ಸಂದರ್ಭದಲ್ಲಿ ಪರವಾನಿಗೆ ಕೊಡುವ ವಿಭಾಗದಲ್ಲಿ ನಿತ್ಯವೂ ಹಲವು ಜನರು ಬಂದು ಹೋಗಿದ್ದು ಯಾರಿಂದ ಅಥವಾ ಯಾವಾಗ ಸೋಂಕು ತಗುಲಿದೆ ಎಂದು ತಿಳಿದಿಲ್ಲ. ಸೋಂಕಿತನಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆಯುತ್ತಿದೆ

Please follow and like us:
error