ಸಿಬಿಐ ದಾಳಿ  ಬಿಜೆಪಿಯ ಶಾಶ್ವತ ಚುನಾವಣಾ ಪ್ರಕ್ರಿಯೆ ಆಗಿದೆ- ಕಾಂಗ್ರೆಸ್ ಪಕ್ಷದ ಹೇಳಿಕೆ

ED ಸಂಸ್ಥೆಯು ಬಿಜೆಪಿ ಪಕ್ಷದ ಚುನಾವಣಾ ಮೋರ್ಚಾ ಘಟಕವಾಗಿ ಬದಲಾಗಿದೆ

ಬೆಂಗಳೂರು : CBI ಎಂಬುದು Central Bureau of Investigation ಎಂಬುದರಿಂದ BJP Bureau of Investigation ಎಂದು ಬದಲಾಗಿದೆ ಇನ್ನು ED ಸಂಸ್ಥೆಯು ಬಿಜೆಪಿ ಪಕ್ಷದ ಚುನಾವಣಾ ಮೋರ್ಚಾ ಘಟಕವಾಗಿ ಬದಲಾಗಿದೆ ಅನೇಕ ಹೋರಾಟಗಳ ಮೂಲಕ ಮಹನೀಯರು ಕಟ್ಟಿದ ಭಾರತದ ಪ್ರಜಾಪ್ರಭುತ್ವವನ್ನು ಬಿಜೆಪಿಗರು ನಾಶ ಮಾಡಲು ಹೊರಟಿದ್ದಾರೆ! ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆರೋಪಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಅವರು  ಕಾಂಗ್ರೆಸ್ ನಲ್ಲಿ ಕ್ರಿಯಾಶೀಲರಾಗಿರುವವರನ್ನು ಗುರಿಯಾಗಿಸಿ ಐಟಿ, ಇಡಿ, ಸಿಬಿಐ ದಾಳಿ ಮಾಡಲಾಗುತ್ತಿದೆ.  ಕರ್ನಾಟಕದ ಬಿಜೆಪಿ ‌ಸರ್ಕಾರ ಕೊರೊನ ಹೆಸರಲ್ಲಿ ಎಸಗಿರುವ ಭ್ರಷ್ಟಾಚಾರ, ಸಿಎಂ  ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬದ ಭ್ರಷ್ಟಾಚಾರವನ್ನು ದಾಖಲೆಗಳ ಸಮೇತ ವಿವರವಾಗಿ ಹೇಳಿದ್ದರೂ ಸಿಬಿಐ‌ನವರಿಗೆ ಈ ಅವ್ಯವಹಾರ ಕಾಣಿಸುವುದಿಲ್ಲ. ಐಟಿ, ಇಡಿ, ಸಿಬಿಐ ಈಗ‌ ಮಾತ್ರ ಇದೆಯೇ? ಕಾಂಗ್ರೆಸ್ ನವರ ವಿಚಾರದಲ್ಲಿ ಮಾತ್ರ ಇದೆಯೇ? ಬಿಜೆಪಿಯಲ್ಲಿ ಇರುವವರೆಲ್ಲ ಬಿಪಿಎಲ್ ಕಾರ್ಡುದಾರರೆ? ಚುನಾವಣೆ ಎಂದಾಕ್ಷಣ ಐಟಿ, ಇಡಿ, ಸಿಬಿಐ ಮುಗಿಬೀಳುತ್ತವೆ ಏಕೆ? ಅಧಿವೇಶನದಲ್ಲೇ @BJP4Karnataka ಭ್ರಷ್ಟಾಚಾರಗಳ ಬಗ್ಗೆ ಪ್ರಸ್ತಾಪಿಸಲಾಗಿದೆ, ಅವರ ಮನೆ ಮೇಲೆ ಏಕೆ ದಾಳಿ ಇಲ್ಲ? ಸಿಬಿಐ ದಾಳಿ ಎಂಬುದು ಬಿಜೆಪಿಯ ಶಾಶ್ವತ ಚುನಾವಣಾ ಪ್ರಕ್ರಿಯೆ ಆಗಿದೆ. ಉಪ ಚುನಾವಣೆಯ ಸೋಲುವ ಭೀತಿ ಬಿಜೆಪಿಯಿಂದ ಏನೆಲ್ಲ ಮಾಡಿಸುತ್ತಿದೆ.! ದ್ವೇಷ ರಾಜಕಾರಣದ ಸಿಬಿಐ ದಾಳಿಯನ್ನು ಖಂಡಿಸುತ್ತೇವೆ.

Please follow and like us:
error