ಸಿನಿಮಾ ಮಾಡೊ ಮುನ್ನ ಅದನ್ನ ಅರ್ಥ ಮಾಡಿಕೊಳ್ಳೊದು ಉತ್ತಮ

-ರಾಜು ಬಿ. ಆರ್., ಉಪನ್ಯಾಸಕರು, ಕೊಪ್ಪಳ.


ಸಿನಿಮಾ ಕ್ರೇಜ್‌ಗೆ ಬಲಿಯಾಗುವ ಮುನ್ನ ಒಳಸುಳಿ ತಿಳಿಯಲು ಹುಬ್ಬಳ್ಳಿ ಸಿನಿಮಾ ಕಾರ್ಯಾಗಾರ
ಎಸ್, ಸಿನಿಮಾ ಎಂಬ ಕ್ರೇಜ್ ಯಾರಿಗಿಲ್ಲ ಹೇಳಿ? ಸಣ್ಣ ಆಟೋ ಒಡಿಸುವ ವ್ಯಕ್ತಿಯಿಂದ ಹಿಡಿದು ಆಟೋ ನಿರ್ಮಿಸುವ ಕಂಪನಿ ಮಾಲಿಕನವರೆಗೆ, ಅಬ್ಬೆ ಪೋಲಿ ಹುಡುಗನಿಂದ ಹಿಡಿದು ಮಂತ್ರಿ ಮಹೋದಯರವರೆಗೆ ಎಲ್ಲರಿಗೂ ಸಿನಿಮಾ ಅಂದರೆ ಪ್ರೀತಿ, ಕಾರಣ ಅದು ಬಹುಬೇಗ ಜನರನ್ನು ತಲುಪುವ ಮನರಂಜನಾ ಮಾಧ್ಯಮ. ಕೋಟಿ ಖರ್ಚ್ಚು ಮಾಡಿ ವರ್ಷಗಳ ಕಾಲ ಜನಸೇವೆ ಮಾಡಿದ ಮೂರೇ ತಿಂಗಳಲ್ಲಿ ಸ್ಟಾರ್‌ಗಿರಿ ಸಿಗುತ್ತದೆ, ಆದಷ್ಟು ಪುಕ್ಕಟೆ ಪ್ರಚಾರವೂ ಸಿಗುತ್ತದೆ. ಆ ಕಾರಣಕ್ಕೆ ಜೊತೆಗೆ ರಿಯಲ್ ಎಸ್ಟೇಟ್ ದುಡ್ಡು, ಬ್ಲಾಕ್ ಮನಿಯೂ ಚಿತ್ರರಂಗಕ್ಕೆ ಹರಿದುಬರುತ್ತಿರುವ ಕಾರಣ ಸಿನಿಮಾ ಮಾಡುವವರ ಸಂಖ್ಯೆ ಅಗತ್ಯಕ್ಕಿಂತ ಜಾಸ್ತಿಯಾಗಿದ ಎನ್ನಬಹುದು.
ಬೆಂಗಳೂರು ಗಾಂಧಿ ನಗರ ಕೇಂದ್ರಿತವಾಗಿದ್ದ ಸಿನಿಮಾ ರಂಗ, ಸ್ಯಾಂಡಲ್‌ವುಡ್ ಡಿಜಿಟಲ್ ಸಿನಿಮಾ ಬಂದ ಮೇಲೆ ರಾಜ್ಯದ ಉದ್ದಗಲಕ್ಕೂ ವ್ಯಾಪಿಸುತ್ತಿದೆ. ಅದರ ಜೊತೆಗೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೆಡ್ಡು ಹೊಡೆದು ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿಯೂ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆರಂಭಗೊಂಡು ವಾರ್ತಾ ಇಲಾಖೆಯ ಮಾನ್ಯತೆಯನ್ನು ದಕ್ಕಿಸಿಕೊಂಡು ಹಲವಾರು ಚಿತ್ರಗಳನ್ನು ಅದರ ವ್ಯಾಪಿಯಲ್ಲಿ ಅನೇಕ ಸಣ್ಣ ನಿರ್ಮಾಪಕರು ನಿರ್ಮಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಡಬ್ಬಿಂಗ್ ಚಲನಚಿತ್ರ ಮಂಡಳಿ ಸೇರಿದಂತೆ ರಾಜ್ಯದ ಹಲವೆಡೆ ಮಂಡಳಿ ಸ್ಥಾಪಿಸಿಕೊಂಡಿದ್ದಾರೆ. ಆದರೂ ಚಿತ್ರರಂಗ ಉತ್ತರ ಕರ್ನಾಟಕದಲ್ಲಿ ಮೆಲೇಳ್ತಿಲ್ಲ. ಯಾಕೆ ಹಾಗೆ, ಇಲ್ಲಿನ ಅನೇಕ ಕಲಾವಿದರು, ತಂತ್ರಜ್ಞರು ಮತ್ತು ನಿರ್ಮಾಪಕರು ಬೆಂಗಳೂರು ಗಾಂಧಿ ನಗರದಲ್ಲಿ ಬೀಡುಬಿಟ್ಟಿದ್ದಾರೆ ಆದರೆ ಅವರ‍್ಯಾರು ತಾವು ಉತ್ತರ ಕರ್ನಾಟಕದ ಹೆಮ್ಮೆ ಎಂದು ಹೇಳಿಕೊಳ್ಳುವುದಿಲ್ಲ ಮತ್ತು ಸ್ಪಂದಿಸುವುದಿಲ್ಲ. ಜೊತೆಗೆ ಉತ್ತರ ಕರ್ನಾಟಕದ ಸಿನಿಮಾ ಆಸಕ್ತರು ಎಷ್ಟೇ ಕಷ್ಟಪಟ್ಟರು ಇಲ್ಲಿಯ ಭಾಷೆಯನ್ನ ಹಾಸ್ಯ ಮಾಡುತ್ತಾರೆ. ಜೊತೆಗೆ ಇಲ್ಲಿನವರೆಗೆ ಬೆಂಬಲವನ್ನು ನೀಡಿಲ್ಲ. ಹೋಸಪೇಟೆಯ ಅಜಯ್ ರಾವ್ ಹೊರತುಪಡಿಸಿದರೆ ಇಲ್ಲಿ ಯಾರೂ ದೊಡ್ಡ ಸ್ಟಾರ್ ಆಗಿ ಕಾಣುವುದೇ ಇಲ್ಲ.
ರಾಯಚೂರಿನ ಗಂಡು, ವಾಲ್ಮೀಕಿ ಸಮುದಾಯದ ರಾಜಮೌಳಿ ಬಾಹುಬಲಿ ಮೂಲಕ ವಿಶ್ವಕ್ಕೆ ಇಲ್ಲಿನ ಶಕ್ತಿಯನ್ನು ರವಾನಿಸಿದರು. ಕನ್ನಡಿಗನಾದ ರಾಜಮೌಳಿಗೆ ಕನ್ನಡ ಕರೆಯಲಿಲ್ಲ. ಆಂಧ್ರದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದು, ಹತ್ತು ಅತ್ಯದ್ಭುತ ಹಿಟ್ ಚಿತ್ರ ನೀಡಿದ್ದಾರೆ. ಇಂಥಹ ಸಂಧಿಗ್ಧ ಸ್ಥಿತಿಯಲ್ಲಿಯೂ ಚಿತ್ರ ನಿರ್ಮಿಸಬೇಕು, ನಿರ್ದೇಶಕನಾಗಬೇಕು, ಕಲಾವಿದನಾಗಬೇಕು ಎಂಬ ಹಂಬಲದಲ್ಲಿ ಶಾರ್ಟ್ ಮೂವಿ ಹೆಸರಲ್ಲಿಯೂ ಸಾವಿರಾರು, ಲಕ್ಷಾಂತರ ರುಪಾಯಿ ಹಾಳು ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯೇನು ಇಲ್ಲ. ಅಂಥಹ ಸಿನಿಮಾ ಗೀಳು ಅಂಟಿಸಿಕೊಂಡು ಹಾಳಾಗುತ್ತಿರುವ ಮತ್ತು ಮೋಸ ಹೋಗುತ್ತಿರುವ ಸಿನಿಪ್ರಿಯರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇರುವುದನ್ನು ಮನಗಂಡು ಹಿರಿಯ ಪತ್ರಕರ್ತ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಗೌರೀಶ್ ಅಕ್ಕಿ ಮತ್ತು ಅಕ್ಷರ ಇವೆಂಟ್ ಆರ್ಗನೈಸರ್ ಮುಖ್ಯಸ್ಥ, ಪತ್ರಕರ್ತ ಸಂಘಟಕ ಮಂಜುನಾಥ ಜಿ. ಗೊಂಡಬಾಳ ಜೊತೆಯಾಗಿ ಅಕ್ಟೋಬರ್ ೧೪ ಮತ್ತು ೧೫ ರಂದು ಹುಬ್ಬಳ್ಳಿಯ ಹೋಟಲ್ ತೃಪ್ತಿ ಇಂಟರ್‌ನ್ಯಾಷನಲ್‌ನಲ್ಲಿ ರಾಜ್ಯಮಟ್ಟದಲ್ಲಿ ಹುಬ್ಬಳ್ಳಿ ಚಲನಚಿತ್ರ ಕಾರ್ಯಾಗಾರ ಹಮ್ಮಿಕೊಂಡಿದ್ದಾರೆ.
ಈ ಕಾರ್ಯಾಗಾರದಿಂದ ಏನು ಲಾಭ ಎನ್ನುವವರಿಗೆ ಹೀಗೆ ಉತ್ತರ ನೀಡುತ್ತಾರೆ ಗೌರೀಶ್ ಅಕ್ಕಿ. ಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಆಸಕ್ತಿ ಇದ್ದು, ಮಾಹಿತಿಯ ಕೊರತೆ ಇದ್ದವರಿಗೆ ಹುಬ್ಬಳ್ಳಿ ಚಲನಚಿತ್ರ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ,
ಸಿನಿಮಾ ಬಗ್ಗೆ ಸಾಕಷ್ಟು ಆಸೆಗಳನ್ನು ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಾರೆ, ಹತ್ತಾರು ಕನಸು ಕಾಣುತ್ತಾರೆ ಆದರೆ, ನಿರ್ದೇಶನದ ಕನಸು ಕಂಡವರು ನಾಲ್ಕಾರು ವರ್ಷಗಳನ್ನು ಸುಮ್ಮನೆ ಗಾಂಧಿ ನಗರ ಸುತ್ತಿ ಕಳೆಯುತ್ತಾರೆ, ಕೊನೆಗೆ ಹತಾಶರಾಗಿ ಊರು ಬಿಡುತ್ತಾರೆ, ಇನ್ನು ನಿರ್ಮಾಪಕರಾಗಬೇಕು ಎಂಬ ಆಸೆಯಿಂದ ಬರುವವರು ಗೊತ್ತುಗುರಿ ಇಲ್ಲದವರ ಕೈಯಲ್ಲಿ ದುಡ್ಡು ಕೊಟ್ಟು ಹಾಳಾಗುತ್ತಿದ್ದಾರೆ, ಅದನ್ನು ತಪ್ಪಿಸಿ ಸಿನಿಮಾ ಕುರಿತು ಸಮಗ್ರವಾದ ಮಾಹಿತಿ ನೀಡುವ ಉದ್ದೇಶದಿಂದ ಹಬ್ಬಳ್ಳಿಯಲ್ಲಿ ಅಕ್ಟೋಬರ್ ೧೪ ಮತ್ತು ೧೫ ರಂದು ಹೋಟಲ್ ತೃಪ್ತಿ ಇಂಟರ್ ನ್ಯಾಷನಲ್‌ನಲ್ಲಿ ತರಬೇತಿ ಸೀಬಿರ ನಡೆಯಲಿದ್ದು ೧೦೦ ಜನ ಆಸಕ್ತರಿಗೆ ಅವಕಾಶ ಕಲ್ಪಿಸಲಾಗಿದೆ, ಮೊದಲ ಬಾರಿಗೆ ಇಂಥಹ ಶಿಬಿರವನ್ನು ಹಮ್ಮಿಕೊಂಡಿದ್ದು, ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಇಂಥಹ ಶಿಬಿರದ ಅವಶ್ಯಕತೆಯನ್ನು ಮನಗಂಡು ಚಿತ್ರರಂಗದಲ್ಲಿ ಅನುಭವ ಇರುವ ತಮ್ಮ ಸಂಸ್ಥೆಯಿಂದ ೫೦ ಸಿನೆಮಾ ನಿರ್ಮಾಣ ಮಾಡಿರೋ ಹೆಗ್ಗಳಿಕೆ ಹೊಂದಿರೋ ದ್ವಾರಕೀಶ್ ಚಿತ್ರಾಲಯದ ಖ್ಯಾತ ನಿರ್ಮಾಪಕ ಯೋಗೀಶ್ ದ್ವಾರಕೀಶ್ ಅವರು ಚಿತ್ರ ವಿತರಣೆಯ ಬಗ್ಗೆ ಪಾಠ ಮಾಡಲಿದ್ದಾರೆ. ತೂಗುದೀಪ ಡಿಸ್ಟ್ರಿಬ್ಯೂಟರ್ಸ್‌ನ ಸಾರಥ್ಯವಹಿಸಿರೋ ಖ್ಯಾತ ವಿತರಕ ಮಲ್ಲಿಕಾರ್ಜುನ್ ಸಂಕನಗೌಡರ ಸಿನಿಮಾ ವಿತರಣೆಯ ಸವಾಲುಗಳ ಕುರಿತು ಮಾತನಾಡುವರು, ಸಿಂಪಲ್ಲಾಗೊಂದು ಲವ್ ಸ್ಟೋರಿ, ಆಪರೇಶನ್ ಅಲಮೇಲಮ್ಮ ಮತ್ತಿತರ ಚಿತ್ರಗಳ ಮೂಲಕ ಯುವಜನರಲ್ಲಿ ಹೊಸ ಸಂಚಲನ ಮೂಡಿಸಿದ ಖ್ಯಾತ ನಿರ್ದೇಶಕ ಸಿಂಪಲ್ ಸುನಿ, ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ ಮತ್ತಿತರ ಚಿತ್ರಗಳ ಮೂಲಕ ಕಮರ್ಶಿಯಲ್ ಸರದಾರ ಎನ್ನಿಸಿಕೊಂಡಿರೋ ಉತ್ತರ ಕರ್ನಾಟಕದ ಪ್ರತಿಭೆ ನಿರ್ದೇಶಕ ಪವನ್ ಒಡೆಯರ್, ಮೌನಿ, ಕಾಡ ಬೆಳದಿಂಗಳು, ನಾನು ಅವನಲ್ಲ ಅವಳು ಮತ್ತಿತರ ಕಲಾತ್ಮಕ ಚಿತ್ರಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ ನಿರ್ದೇಶಕ ಬಿ. ಎಸ್. ಲಿಂಗದೇವರು, ಕಥೆ ಚಿತ್ರ ಕತೆಯ ಬಗ್ಗೆ ಸಾಕಷ್ಟು ಬರೆದಿರೋ ಸಿನೆಮಾ ವಿಮರ್ಶೆಗೊಂದು ಹೊಸ ರೂಪ ತಂದು ಕೊಟ್ಟ ಖ್ಯಾತ ಲೇಖಕ ಮತ್ತು ಕಥೆಗಾರ ಜೋಗಿ, ಚಿತ್ರ ನಿರ್ಮಾಣದಷ್ಟೆ ದೊಡ್ಡ ಸವಾಲು ಅದರ ಪ್ರಚಾರ, ಚಿತ್ರ ಪ್ರಚಾರದ ರಹಸ್ಯಗಳನ್ನು ಬಿಚ್ಚಿಡಲಿದ್ದಾರೆ ಖ್ಯಾತ ಪತ್ರಕರ್ತ, ನಿರ್ದೇಶಕ ಗೌರೀಶ್ ಅಕ್ಕಿ ಸಿನಿಮಾ ಪಬ್ಲಿಸಿಟಿ ಕುರಿತು ಮಾತನಾಡುವರು ಹಾಗೂ ಎರಡು ದಶಕ ಸಂಘಟನೆಯಲ್ಲಿ ಹೆಸರು ಮಾಡಿರುವ ಮತ್ತು ರಾಜ್ಯ ಯುವ ಪ್ರಶಸ್ತಿ ಪಡೆದಿರುವ ಮಂಜುನಾಥ ಜಿ. ಗೊಂಡಬಾಳ ಉತ್ತರ ಕರ್ನಾಟಕದಲ್ಲಿ ಸಿನಿಮಾ ಸಂಘಟನೆ ಮತ್ತು ಪ್ರೊಡಕ್ಷನ್ ಕುರಿತು ಮಾತನಾಡುವರು. ಇದರ ಜೊತೆಗೆ ಶಿಬಿರಾರ್ಥಿಗಳ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಪ್ರತಿ ಉಪನ್ಯಾಸದ ನಂತರ ಪ್ರಶ್ನೋತ್ತರ ಅವಧಿಯನ್ನು ಇಡಲಾಗಿದ್ದು, ಅವರಲ್ಲಿರುವ ಗೊಮದಲಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ಮಾಡಲಾಗುತ್ತಿದೆ.
ಶಿಬಿರದ ಉದ್ಘಾಟನೆಯನ್ನು ಸಚಿವ ವಿನಯ ಕುಲಕರ್ಣಿ ಮಾಡುವರು, ಶಾಸಕ ಬಸವರಾಜ ಹೊರಟ್ಟಿ, ಶಾಸಕ ಅಭಯ್ ಪ್ರಸಾದ, ವಿಜಯವಾಣಿ ಸ್ಥಾನಿಕ ಸಂಪಾದಕ ಮೋಹನ್ ಹೆಗಡೆ, ಪ್ರಜಾವಾಣಿ ಸ್ಥಾನಿಕ ಸಂಪಾದಕ ನಾಗರಾಜ ಎಂ., ಕನ್ನಡಪ್ರಭ ಪತ್ರಕರ್ತರಾದ ಮಲ್ಲಿಕಾರ್ಜುನ್ ಸಿದ್ದಣ್ಣನವರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ. ಡೊಳ್ಳಿನ ಆಗಮಿಸುವರು. ಸಮಾರೋಪದಲ್ಲಿ ವಿರೋಧ ಪಕ್ಷದ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ದೊಡ್ಡನಗೌಡ ಪಾಟೀಲ್, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್ ಇತರರು ಪಾಲ್ಗೊಳ್ಳುವರು. ಶಿಬಿರ ಸಿನೆಮಾದಲ್ಲಿ ಏನು ಮಾಡಬೇಕು ಎನ್ನುವದಕ್ಕಿಂತ ಏನನ್ನು ಮಾಡಬಾರದು ಎಂಬ ವಿಷಯ ತಿಳಿಸುವ ಜೊತೆಗೆ ಲಕ್ಷಾಂತರ ರೂಪಾಯಿಗಳನ್ನು ಹಾಕಿ ಸಿನೆಮಾ ಮಾಡುವ ಮುನ್ನ ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಶಿಬಿರ ಸೂಕ್ತ ಮಾರ್ಗದರ್ಶನ ಮಾಡಲಿದೆ ಇಂಥಹ ಅವಕಾಶವನ್ನು ಬಳಸಿಕೊಳ್ಳಲು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಮಂಜುನಾಥ ಜಿ. ಗೊಂಡಬಾಳ ೯೪೪೮೩ ೦೦೦೭೦ ರವರನ್ನು ಕರೆ ಮಾಡಬಹುದು.

ಚಿತ್ರ-ಬರಹ : ರಾಜು ಬಿ. ಆರ್., ಉಪನ್ಯಾಸಕರು, ಕೊಪ್ಪಳ.

Please follow and like us:
error