fbpx

ಸಿದ್ದರಾಮಯ್ಯ  ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸೋದು ಸರಿಯಲ್ಲ-ಬಿ.ಸಿ.ಪಾಟೀಲ್

ಕೊಪ್ಪಳ: ಧಮ್ಮು-ಕೆಮ್ಮು… ಏನ್ರೀ ಇವೆಲ್ಲಾ.. ಏನ್ ಭಾಷೆರಿ ಇದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಕೊಪ್ಪಳದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರಿಗೆ ಕೇಂದ್ರದಿಂದ ಬರುವ ಅನುದಾನ ತರುವ ಧಮ್ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.ಇವೆಲ್ಲ ಒಳ್ಳೇ ಭಾಷೆನಾ. ವಿರೋಧ ಪಕ್ಷದಲ್ಲಿ ಇರುವವರು ಆಡಳಿತ ಪಕ್ಷದ ತಪ್ಪುಗಳನ್ನು ತಿದ್ದಬೇಕು. ಅದನ್ನ ಬಿಟ್ಟು ಎಲ್ಲವನ್ನೂ, ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು  ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು. ಸಿಎಂ ಯಡಿಯೂರಪ್ಪ ಅವರಷ್ಟು ಸಭೆಗಳನ್ನು ಬೇರೆ ಯಾವ ಮುಖ್ಯಮಂತ್ರಿಯೂ ಮಾಡಿಲ್ಲ. ಸಿಎಂ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಕೋವಿಡ್-19 ತಡೆಗಟ್ಟುವ ವಿಚಾರದಲ್ಲಿ ಸಿಎಂ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಜುಲೈ 1ಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿದರು‌ ಜುಲೈ 6ಕ್ಕೆ ನಾವು ರಾಜೀನಾಮೆ ನೀಡಿದೇವು. ಸನಿಹದಲ್ಲೇ ವಾರ್ಷಿಕೋತ್ಸವ ಇದೆ. ನನ್ನದು ಕೃಷಿ ಇಲಾಖೆ ಆಗಿರೋದ್ರಿಂದ ಕೃಷಿ ಕಾಯಕ ಮಾಡುವ ಮೂಲಕ ವಾರ್ಷಿಕೋತ್ಸವ ಆಚರಿಸುವೆ. ಇನ್ನುಳಿದವರಿಗೆ ಅವರವರ ಖಾತೆಯೇ ಮನೆ ದೇವರು. ಆ ದೇವರ ಕೆಲಸವನ್ನು ನಿರ್ವಹಿಸುವ ಮೂಲಕ ವಾರ್ಷಿಕೋತ್ಸವ ಆಚರಿಸುತ್ತಾರೆ ಎಂದರು. ಕೊಪ್ಪಳ ತಾಲೂಕಿನ ಕಾಸನಕಂಡಿ, ಬಗನಾಳದಲ್ಲಿ ರಸ್ತೆ ಸಮಸ್ಯೆಯಾಗಿದೆ. ಕಾರ್ಖಾನೆಯವರಿಗೆ ರಸ್ತೆ ನಿರ್ಮಾಣ ಮಾಡಲು ಸೂಚಿಸಲಾಗಿದೆ. ಕೆಲವರು ಟೋಲ್ ಹಣ ಉಳಿಸಲು ಗ್ರಾಮದ ರಸ್ತೆ ಬಳಸುತ್ತಿರುವುದು ಗಮನಕ್ಕಿದೆ. ಅದನ್ನು ಸರಿಪಡಿಸಲಾಗುವುದು ಎಂದರು.

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19ಗೆ ಚಿಕಿತ್ಸೆ ನೀಡಲು ದರ ನಿಗದಿ ವಿಚಾರ ಕುರಿತು ಮಾತನಾಡಿದ ಅವರು, ಬದುಕು ಎಲ್ಲಕ್ಕಿಂತಲೂ ದೊಡ್ಡದು. ದರದ ಬಗ್ಗೆ ಮರು‌ ಪರಿಶೀಲನೆ ಮಾಡಲಾಗುವುದು ಎಂದರು. ಆರ್‌ಎಸ್‌ಕೆಗಳನ್ನು ಪ್ರಬಲ ಮಾಡಬೇಕು ಎಂಬ ಯೋಚನೆ ಇದೆ. ಕೃಷಿ ಮೊಬೈಲ್ ಹೆಲ್ತ್ ಕ್ಲಿನಿಕ್ ಕೊಪ್ಪಳದಿಂದ ಪೈಲಟ್ ಪ್ರೋಗ್ರಾಂ ಆಗಿ ಮಾಡ್ತಿವಿ. ಪ್ರತಿ ಆರ್‌ಎಸ್‌ಕೆಗೆ ಒಂದರಂತೆ ವಾಹನ ನೀಡಲಾಗುವುದು. ಒಂದು ವಾಹನಕ್ಕೆ ಸುಮಾರು 20 ಲಕ್ಷ ರೂಪಾಯಿ ಖರ್ಚಾಗಬಹುದು ಎಂದು ವಿವರಿಸಿದರು. ಈ ವೇಳೆ ಸಂಸದ ಸಂಗಣ್ಣ ಕರಡಿ ಇದ್ದರು.

Please follow and like us:
error
error: Content is protected !!