ಸಿದ್ದರಾಮಯ್ಯ– ಎಚ್.ಕೆ.ಪಾಟೀಲ  ಯಾರು ವಿರೋಧ ಪಕ್ಷದ ನಾಯಕ ?

ಬೆಂಗಳೂರು:  ಕಾಂಗ್ರೆಸ್  ಶಾಸಕಾಂಗ ಸಭೆ ಇಂದು ಸಂಜೆ  ನಡೆಯಲಿದ್ದು ಅಧಿವೇಶನದಲ್ಲಿ ಸರಕಾರದ ವಿರುದ್ದ ಪ್ರಸ್ತಾಪಿಸಬೇಕಾದ ವಿಚಾರಗಳು , ವಿಷಯಗಳ ಕುರಿತು ಚರ್ಚಿಸಲಾಗುವ ಸಂಭವ ಇದೆ.  ವಿದಾನ ಮಂಡಲ  ಅದಿವೇಶನಕ್ಕೆ ಕೇವಲ ಒಂದೆ ದಿನ ಉಳಿದಿದ್ದು ಇದುವರೆಗೆ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲಗದೇ ಕಾಂಗ್ರೆಸ್ ಗೊಂದಲದಲ್ಲಿಯೇ ಮುಳುಗಿದೆ.

ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬುಧವಾರ ಬೆಂಗಳೂರಿಗೆ ಬಂದು ಹೆಸರು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ  ಆದರೆ, ಅವರು ಬರುವುದು ಖಚಿತವಾಗಿಲ್ಲ. ಕೊನೆ ಗಳಿಗೆಯಲ್ಲಿ ದೆಹಲಿಯಲ್ಲೇ ಪಟ್ಟಿ ಪ್ರಕಟವಾಗಬಹುದು ಎನ್ನುವ ಮಾತನ್ನು ಕೆಲವರು ಆಡುತ್ತಿದ್ದಾರೆ. ಪಕ್ಷದಲ್ಲಿ ಬಣ ರಾಜಕೀಯ ಬಿರುಸುಗೊಂಡಿದ್ದು, ಯಾರಿಗೆ ಅಧಿಕಾರ ಕೈಗೆ ಸಿಗಬಹುದು ಎಂಬ ಲೆಕ್ಕಾಚಾರ ನಡೆದಿದೆ. ಇದರಿಂದ ಎಲ್ಲರ ದೃಷ್ಟಿ ಹೈಕಮಾಂಡ್‌ನತ್ತ ನೆಟ್ಟಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ  ಬೆಂಗಳೂರಿನಲ್ಲಿ ಪಕ್ಷದ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.   ಪಟ್ಟಿ ಸಿದ್ಧಪಡಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಲಾಗಿದ್ದು  ಅವರ ಒಪ್ಪಿಗೆಗಾಗಿ ಎದುರು ನೋಡಲಾಗುತ್ತಿದೆ. ಸಿದ್ದರಾಮಯ್ಯ ಮತ್ತು ಎಚ್.ಕೆ.ಪಾಟೀಲ್ ಮದ್ಯೆ ತೀವ್ರ ಪೈಪೋಟಿ ನಡೆದಿದ್ದು ಹೈಕಮಾಂಡ್ ಯಾರಿಗೆನಾಯಕತ್ವ ನೀಡಲಿದೆ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ.

Please follow and like us:
error