ಹೋಗ್ರಿ ನಮ್ ಕಡೆ ದೊಡ್ಡ ಹುಂಜನ ಬೆಟ್ಟದ ಆಂಜನೇಯನಿಗೆ ಬಲಿ ಕೊಟ್ಟು ನಾವು ತಿನ್ನೋದು…… ಏನ್ ಆಂಜನೇಯ ನಿಮ್ಮ rss ಅಥವ BJPಗೆ ಮಾತ್ರ ಸ್ವತ್ತೆ…… ರಾಜ್ಯ ನಡೆಸ್ರಿ ಜನರ ಕಷ್ಟಗಳಿಗೆ ಸ್ಪಂದಿಸಿ. ಯಾರು ಏನು ತಿಂದರೆ ನಿಮಗೇನು- ಟ್ವಿಟ್ಟಿಗರು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹುಟ್ಟೂರಿಗೆ ಮತದಾನ ಮಾಡಲು ಹೋಗಿದ್ದಾಗ ನಾಟಿಕೋಳಿ ಸಾರು-ಮುದ್ದೆ ಸವಿಯುವಾಗ ಹನುಮ ಜಯಂತಿಯ ಬಗ್ಗೆ ಮಾತನಾಡಿದ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಸಿದ್ದರಾಮಯ್ಯನವರ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡ ಟ್ವಿಟ್ಟಿಗರು ಸುರೇಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮತದಾನ ಮಾಡಿದ ನಂತರ ಸಿದ್ದರಾಮಯ್ಯ ತಮ್ಮ ಸ್ನೇಹಿತನ ಮನೆಯಲ್ಲಿ ರಾಗಿ ಮುದ್ದೆ, ನಾಟಿ ಕೋಳಿ ಸಾರು ಊಟ ಮಾಡಿದರು. ಈ ಸಂದರ್ಭದಲ್ಲಿ “ಅಣ್ಣಾ ಇಂದು ಹನುಮ ಜಯಂತಿ. ನಾನು ನಾನ್ವೆಜ್ ತಿನ್ನಲ್ಲ” ಎಂದು ಊಟದ ವೇಳೆ ಸ್ನೇಹಿತರೊಬ್ಬರು ಸಿದ್ದರಾಮಯ್ಯ ಅವರಲ್ಲಿ ಹೇಳಿದರು. ಅದಕ್ಕೆ ಉತ್ತರಿಸಿ, “ಹನುಮ ಹುಟ್ಟಿದ ತಾರೀಖು ನಿನಗೆ ಗೊತ್ತಾ? ಗೊತ್ತಿದ್ದರೆ ಆ ದಿನ ತಿನ್ನಬೇಡ. ಗೊತ್ತಿಲ್ಲ ಅಂದರೆ ಚಿಕನ್ ತಿನ್ನು, ಏನೂ ಆಗಲ್ಲ” ಎಂದು ಗದರಿಸಿದ್ದರು.
"ಅಣ್ಣಾ, ಇವತ್ತು ಹನುಮ ಜಯಂತಿ"
ಎಂದು ನೆನಪಿಸಿದ ಗ್ರಾಮಸ್ಥನಿಗೆ,
"ಯಾವ ಜಯಂತಿ? ಹನುಮ ಹುಟ್ಟಿದ ತಾರೀಕು ನಿನಗೆ ಗೊತ್ತಾ? ಏನೂ ಆಗಲ್ಲ ತಿನ್ನು. ಹನುಮ ಹುಟ್ಟಿದ ದಿನ ಗೊತ್ತಿದ್ದರೆ ಮಾಡಬೇಕು. ಗೊತ್ತಿಲ್ಲ ಅಲ್ವಾ? ಚಿಕನ್ ತಿನ್ನು"
ಎಂದು ತಮ್ಮದೇ ಧಾಟಿಯಲ್ಲಿ ಛೇಡಿಸಿದರಂತೆ ಈ ನಾಯಕರು.
— S.Suresh Kumar, Minister – Govt of Karnataka (@nimmasuresh) December 28, 2020
ಈ ಹೇಳಿಕೆಯನ್ನು ಉಲ್ಲೇಖಿಸಿ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದು, “ಅಣ್ಣಾ, ಇವತ್ತು ಹನುಮ ಜಯಂತಿ, ಎಂದು ನೆನಪಿಸಿದ ಗ್ರಾಮಸ್ಥನಿಗೆ, ‘ಯಾವ ಜಯಂತಿ? ಹನುಮ ಹುಟ್ಟಿದ ತಾರೀಕು ನಿನಗೆ ಗೊತ್ತಾ? ಏನೂ ಆಗಲ್ಲ ತಿನ್ನು. ಹನುಮ ಹುಟ್ಟಿದ ದಿನ ಗೊತ್ತಿದ್ದರೆ ಮಾಡಬೇಕು. ಗೊತ್ತಿಲ್ಲ ಅಲ್ವಾ? ಚಿಕನ್ ತಿನ್ನು’ ಎಂದು ತಮ್ಮದೇ ಧಾಟಿಯಲ್ಲಿ ಛೇಡಿಸಿದರಂತೆ ಈ ನಾಯಕರು” ಎಂದು ವ್ಯಂಗ್ಯವಾಡಿದ್ದರು.
ಮತ್ತೊಂದು ಟ್ವೀಟ್ನಲ್ಲಿ, “ಈ ನೆಲದ ನಂಬಿಕೆಗಳಿಗೆ ಈ ರೀತಿ ಅವಮಾನ ಮಾಡುವುದೇ ಜಾತ್ಯಾತೀತತೆ ಎಂದು ನಂಬಿದ್ದಾರೆ ಈ ರೀತಿಯ ನಾಯಕರುಗಳು. ಇವರಂತೆಯೆ ಮತ್ತೊಬ್ಬ ನಾಯಕರು ಈ ಹಿಂದೆ “ಶ್ರೀ ರಾಮನ birth certificate ಎಲ್ಲಿ” ಎಂದು ಕೇಳಿದ್ದು ನೆನಪಿಗೆ ಬರುತ್ತಿದೆ” ಎಂದು ಬರೆದುಕೊಂಡಿದ್ದರು.