ಸಿಡಿ ನಕಲಿ, ನಾನು ನಿರಪರಾಧಿ, ಅಪರಾಧಿಯಲ್ಲ-ರಮೇಶ್ ಜಾರಕಿಹೊಳಿ

ಬೆಂಗಳೂರಿನ 2 ಕಡೆಗಳಲ್ಲಿ ಷಡ್ಯಂತ್ರ ನಡೆದಿತ್ತು :

ಸಿಡಿ ಬಗ್ಗೆ ನಾಲ್ಕು ತಿಂಗಳ ಮೊದಲೇ ಗೊತ್ತಿತ್ತು: ರಮೇಶ್ ಜಾರಕಿಹೊಳಿ

ಬೆಂಗಳೂರು,  : ಲೈಂಗಿಕ‌ ಹಗರಣದ ಸಿಡಿ ಕುರಿತು ನನಗೆ ನಾಲ್ಕು ತಿಂಗಳ ಮೊದಲೇ ಗೊತ್ತಿತ್ತು. ಆದರೆ, ಈ‌ ಸಿಡಿ ನಕಲಿಯಾಗಿದ್ದು, ನಾನು ನಿರಪರಾಧಿ, ಅಪರಾಧಿಯಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಮಂಗಳವಾರ ಇಲ್ಲಿನ ಸದಾಶಿವ ನಗರದ ಸ್ವಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, 24 ಗಂಟೆ ಮೊದಲೇ ಹೈಕಮಾಂಡ್ ನನಗೆ ಸಿಡಿ ಬಿಡುಗಡೆ ಬಗ್ಗೆ ನನಗೆ ಮಾಹಿತಿ ನೀಡಿತ್ತು. ನಾನು ಧೈರ್ಯದಿಂದ ಕಾನೂನು ಹೋರಾಟಕ್ಕೆ ಹೋಗಲಿಲ್ಲ ಎಂದರು.

ತನ್ನ ವಿರುದ್ಧ ಬೆಂಗಳೂರಿನ ಯಶವಂತಪುರ ಹಾಗೂ ಹುಳಿಮಾವು ಎಂಬಲ್ಲಿರುವ ಕಟ್ಟಡದಲ್ಲಿ ಷಡ್ಯಂತ್ರ ನಡೆದಿದೆ. ಯಶವಂತಪುರ ಪೊಲೀಸ್ ಠಾಣೆಯ ಪಕ್ಕದ ಕಟ್ಟಡದ 4ನೇ ಹಾಗೂ ಒರಾಯನ್ ಮಾಲ್ ಪಕ್ಕದ ಕಟ್ಟಡವೊಂದರ 5ನೇ ಮಹಡಿಯಲ್ಲಿ ಷಡ್ಯಂತ್ರ ಹೆಣಯಲಾಗಿದೆ ಎಂದು ಆರೋಪಿಸಿದ ರಮೇಶ್ ಜಾರಕಿಹೊಳಿ, ಸಿಡಿ ವೀಡಿಯೊ ಬಿಡುಗಡೆಯ ಹಿಂದೆ ನನ್ನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರವಿದೆ. ಇದಕ್ಕಾಗಿ ನೂರಾರು ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ ಎಂದು ಆರೋಪಿಸಿದರು.

ನಾನು ಬಹಳ ದುಃಖದಲ್ಲಿದ್ದೇನೆ. ದಯವಿಟ್ಟು ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದ ಅವರು, 2020ರ ಫೆಬ್ರವರಿ 26ರಂದು ನಾನು ಸಚಿವನಾದೆ. ನಾಲ್ಕೈದು ದಿನದಿಂದ ಎಲ್ಲ ಬೆಳವಣಿಗೆಗಳನ್ನು ನೋಡಿದ್ದೇನೆ.ರಾಜೀನಾಮೆ ನೀಡಿರುವುದು ನನ್ನ ವೈಯಕ್ತಿಕ ನಿರ್ಧಾರವೇ ಆಗಿದ್ದು, ಯಾರು ಒತ್ತಡ ಹೇರಿಲ್ಲ ಎಂದು ತಿಳಿಸಿದರು.

ನನಗೆ ಮಾನಸಿಕವಾಗಿ ಧೈರ್ಯ ತುಂಬಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಸೇರಿದಂತೆ ನನ್ನ ಪರವಾಗಿ ನಿಂತ ಎಲ್ಲರಿಗೂ ಹೃದಯಪೂರ್ವಕ ವಂದನೆ ಎಂದು ರಮೇಶ್ ನುಡಿದರು.

Please follow and like us:
error