ಸಿಜಿಕೆ ರಂಗಭೂಮಿಗೆ ಮಾದರಿಯ ವ್ಯಕ್ತಿ-ಸಿ.ಬಿ.ಚಿಲ್ಕರಾಗಿ


ಕೊಪ್ಪಳ : ಸಿ.ಜಿ.ಕೆ. ಕವಿ,ಕಲಾವಿದ, ಬರಹಗಾರ, ಪ್ರೇಕ್ಷಕರನ್ನು ತಯಾರಿಸಿದ ವ್ಯಕ್ತಿ. ಕವಿ, ಕಲಾವಿದ. ನಾಟಕಗಳಿಗೆ ಹೊಸ ಆಯಾಮ ನೀಡಿದವರು. ನಾಟಕಕಾರ ಸಮಾಜದಲ್ಲಿ ಪ್ರಜ್ಞಾಂತಿಕೆ ಕಟ್ಟಿಕೊಡುತ್ತಾನೆ. ಕಾಸಿಂ ಅಲಿ ಮುದ್ದಾಬಳ್ಳಿ ಸಕಲಕಲಾವಲ್ಲಭ. ಸಂಗೀತಗಾರರಾಗಿ, ನಟನಾಗಿ, ಮೋಡಿಕಾರರಾಗಿ ಹಲವಾರು ಕಲೆಗಳಲ್ಲಿ ಪಾರಂಗತರು. ಅಂತವರಿಗೆ ಪ್ರಶಸ್ತಿ ನೀಡುತ್ತಿರುವುದು ಸಮಂಜಸವಾಗಿದೆ ಎಂದು ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಸಿ.ಬಿ.ಚಿಲ್ಕರಾಗಿ ಹೇಳಿದರು. ಅವರಿಂದು ಕೊಪ್ಪಳದ ಬಿ.ಟಿ.ಪಾಟೀಲ್ ನಗರದಲ್ಲಿ ಕನ್ನಡನೆಟ್.ಕಾಂ, ಕವಿಸಮೂಹ, ಬಹುತ್ವ ಭಾರತ ಬಳಗ ಕೊಪ್ಪಳ ಕರ್ನಾಟಕ ಬೀದಿನಾಟಕ ಅಕಾಡೆಮಿ ಬೆಂಗಳೂರು ಆರ್ಟ ಫೌಂಡೇಶನ್ ಸಹಯೋಗದಲ್ಲಿ ನಡೆದ ಸಿಜಿಕೆ ಬೀದಿ ರಂಗ ದಿನಾಚರಣೆ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಸಿಜಿಕೆ ರಂಗಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಂಜರ್ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಪ್ರಜ್ಞಾವಂತ ಮನಸ್ಸುಗಳು ಪ್ರಜ್ಞೆಯ ಮಿತಿಯನ್ನು ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅವಶ್ಯ. ಪ್ರಸ್ತುತ ಪ್ರಜ್ಞಾವಂತ ಮನಸ್ಸುಗಳು ಬದುಕುವುದಕ್ಕೆ, ಬರೆಯುವುದಕ್ಕೆ ಬಿಡದಿರುವ ಕೆಟ್ಟ ಸಂದರ್ಭದಲ್ಲಿದ್ದೇವೆ. ಬರಹಗಾರ,ಕವಿ ನಾಟಕಕಾರನಿಗೆ ಕಟ್ಟಳೆ ಹಾಕಲಾಗುತ್ತಿದೆ. ಇದರಿಂದ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯವಿಲ್ಲ ಎಂದರು .
ರಂಗಕರ್ಮಿ ಲಕ್ಷö್ಮಣ ಪೀರಗಾರ ಮಾತನಾಡಿ ಸಿಜಿಕೆ ಸಮುದಾದ ಸಂಘಟನೆಯೊAದಿಗೆ ಕ್ರಾಂತಿ ಮಾಡಿದವರು. ಅವರ ನಾಟಕ, ಚಿಂತನೆ ಆಲೋಚನೆಗಳು ಬಹಳಷ್ಟು ಪರಿವರ್ತನೆ ಮಾಡಿವೆ. ಸಿಜಿಕೆಯವರ ಆದರ್ಶ ನಮಗೆ ಬಹಳ ಮುಖ್ಯ. ಆ ಆದರ್ಶದೊಂದಿಗೆ ಹೊಸ ಸಮಾಜ ಕಟ್ಟೋಣ. ಬದಲಾವಣೆಗೆ ಹೊಸದೊಂದು ಕೆಲಸ ಮಾಡೋಣ ಎಂದರು.
೨೦೨೦ನೇ ಸಾಲಿನ ಸಿಜಿಕೆ ರಂಗಪುರಸ್ಕಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾಸಿಂ ಅಲಿ ಮುದ್ದಾಬಳ್ಳಿ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಮತ್ತಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದು ಹೇಳಿದರು. ಸ್ವಾಗತ ಮತ್ತು ನಿರೂಪಣೆಯನ್ನು ಆರ್.ಎಚ್.ಅತ್ತನೂರು ಮಾಡಿದರು. ಪ್ರಾಸ್ತಾವಿಕವಾಗಿ ಸಂಘಟಕ ಸಿರಾಜ್ ಬಿಸರಳ್ಳಿ ಮಾತನಾಡಿದರು. ರಂಗಗೀತೆಗಳನ್ನಾಡಿದ ವಿಸ್ತಾರ ರಂಗಶಾಲೆಯ ವಿದ್ಯಾರ್ಥಿಗಳಿಂದ ಅಪ್ಪ ಎನ್ನುವ ಕಿರು ನಾಟವನ್ನು ಪ್ರದರ್ಶನ ಮಾಡಲಾಯಿತು. ವೇದಿಕೆಯ ಮೇಲೆ ಸಂಪಾದಕ ರಾಜಾಬಕ್ಷಿ ಎಚ್.ವಿ, ಶ್ರೀಮತಿ ಆಶಾ ಮುದ್ದಾಬಳ್ಳಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಮೇಶ್ ಪಾಟೀಲ್,ಜಾಫರ್ ಫಹಿಮಾಷಿ, ಕಮಾಲ್ ಪಾಷಾ, ಇಸ್ಮಾಯಿಲ್ , ವಿಸ್ತಾರಾ ರಂಗಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಭುಕುಮಾರ ಗಾಳಿ ವಂದನಾರ್ಪಣೆ ಸಲ್ಲಿಸಿದರು.

Please follow and like us:
error