ಸಾಮಾಜಿಕ ಕೆಲಸವೆಂದರೆ ಸಮಾಜದೊಂದಿಗೆ ಒಳಗೊಳ್ಳುವುದು- ಶ್ರೀ ರಾಮಕೃಷ್ಣ ಗುರೂಜಿ

Koppal ಶಿಕ್ಷಕರ ದಿನಾಚರಣೆ ಅಂಗವಾಗಿ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಭಾಗ್ಯನಗರದ ೧೫ ಶಾಲೆಗಳಿಂದ ಆಯ್ದ ೧೫ ಶಿಕ್ಷಕರನ್ನು ಉತ್ತಮ ಶಿಕ್ಷಕರೆಂದು ಗುರುತಿಸಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನ್ಯಾಷನಲ್ ಸ್ಕೂಲ್ ಸಂಸ್ಥೆಯ ಅಧ್ಯಕ್ಷರು ಆದ ಪ್ಯಹ್ಲಾದ ಅಗಳಿ ಮಾತನಾಡಿ ನಮ್ಮ ಭಾಗ್ಯನಗರ ಇನ್ನರ್‍ವೀಲ್‌ಕ್ಲಬ್ ಒಂದಲ್ಲಾ ಒಂದು ರೀತಿಯಲ್ಲಿ ವಿಶೇಷವಾಗಿ ತನ್ನ ಕಾರ್ಯವನ್ನು ವಿಸ್ತರಿಸಿಕೊಳ್ಳುತ್ತಾ ಬರುತ್ತಿದೆ. ಒಂದೇ ಬಾರಿಗೆ ೧೫ ಶಾಲೆಗಳಿಂದ ಶಿಕ್ಷಕರನ್ನು ಆಯ್ದು ಅವರಿಗೆ ಸನ್ಮಾನಿಸುತ್ತಿರುವುದು ಅತೀ ಸಂತೋಷದ ಕಾರ್ಯ. ಇವರು ಸಾಮಾಜಿಕವಾಗಿ ಅತೀ ಅವಶ್ಯಕ ವಿಷಯಗಳಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಇನ್ನರವಿಲ್ ಕ್ಲಬ್ ಅಧ್ಯಕ್ಷರಾದ ಶಾರದಾ ಪಾನಘಂಟಿಯವರು ಮಾತನಾಡುತ್ತಾ ಪ್ರತಿಯೊಬ್ಬ ಶಿಕ್ಷಕನೂ ತನ್ನ ವಿಶೇಷತೆಯ ಮೂಲಕ ಮಕ್ಕಳ ಮನಸ್ಸಿನಲ್ಲಿ ನೆಲೆಯೂರುತ್ತಾನೆ. ನಿಮ್ಮ ಸ್ಥಾನವು ಅವರ ಮನಸ್ಸಿನಲ್ಲಿ ದೇವರಿಗೆ ಸಮವಾಗಿದೆ ಎಂದರು. ಈ ಸಂಧರ್ಭದಲ್ಲಿ ಪರಮಪೂಜ್ಯ, ಶಂಕರಾಚಾರ್ಯ ಮಠ ಭಾಗ್ಯನಗರ ಇವರು ದಿವ್ಯ ಸಾನಿಧ್ಯವನ್ನು ವಹಿಸಿ, ನಾನು ಒಬ್ಬ ಶಿಕ್ಷಕನಾಗಿ ಸನ್ಮಾನಿತನಾಗುವುದೆಂದರೆ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು, ಅಂತೆಯೇ ಇನ್ನರ್‍ವೀಲ್ ಸಂಸ್ಥೆಯು ನಮಗೆ ಹೆಚ್ಚಿನ ಜವಾಬ್ದಾರಿಯನ್ನು ಇಂದು ಕೊಟ್ಟಿದ್ದಾರೆ. ಇವರೆಲ್ಲರೂ ಸಾಮಾಜಿಕವಾಗಿ ಒಳಗೊಳ್ಳುವ ಮೂಲಕ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ ತಂಡಕ್ಕೆ ಅಭಿನಂದನೆಗಳು ಎಂದರು.

ಭಾಗ್ಯನಗರ ಸರ್ಕಾರಿ ಪ್ರೌಢಶಾಲೆಯ ಪ್ರಿನ್ಸಿಪಾಲ್ ನ್ಯೂಟನ್, ಸಮಾಜಸೇವಕರಾದ ಸುಭಾಷ್ ಅಂಟಾಳಮರದ ಅತಿಥಿಗಳಾಗಿದ್ದರು. ಶೀಲಾ ಹಾಲ್ಕುರಿಕೆಯವರು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಇನ್ನರ್‌ವೀಲ್ ಕ್ಲಬ್‌ನ ಸದಸ್ಯರು, ವಿವಿಧ ಶಾಲೆಗಳ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು. ಸುನೀತಾ ಅಂಟಾಳಮರದ ವಂದನಾರ್ಪಣೆ ಮಾಡಿದರು.

 

Please follow and like us:
error