ಸಾಮಾಜಿಕ ಅ೦ತರವನ್ನು  ಕಾಯ್ದುಕೊಳ್ಳಲು ಜಿಲ್ಲಾಧಿಕಾರಿ ವಿನಂತಿ

ಕೊಪ್ಪಳ ಜಿಲ್ಲೆಯ ಸಾರ್ವಜನಿಕರಲ್ಲಿ ಈ ಮೂಲಕ ಸವಿನಯವಾಗಿ ಪ್ರಾರ್ಥಿಸಿಕೊಳ್ಳುವೆದೆನೆಂದರೆ  ಕೊರೊನಾ (ಕೋವಿಡ್‌-19) ವೈರಾಣು ಹರಡುವ ಭೀತಿ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. ಇದಕ್ಕೆ ತಾವುಗಳು ಸಹಕರಿಸುತ್ತಿರುವುದು ಅಭಿನ೦ದನಾರ್ಹವಾಗಿದೆ. ಆದಾಗ್ಯೂ ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ಸದರಿ ವೈರಾಣು ಸೊಂಕು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೆನೆಂದರೆ, ಕೊರೊನಾ ವೈರಾಣು ಸೊಂಕು ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಹರಡಬಾರದೆಂಬ ಕಾಳಜಿಯಿಂದ ಮತ್ತೆ ಎರಡು ವಾರಗಳ ಕಾಲ ಅಂದರೆ ದಿನಾಂಕ: 31-03-2020 ರವರೆಗೆ ಜನದಟ್ಟಣೆ ಸೇರುವಂತಹ ಸ್ಥಳಗಳಲ್ಲಿ ನಿರ್ಭಂಧ ವಿಧಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಾಗಿ ಜನಸಂದಣೆ ಸೇರಿ ಕೊರೊನಾ ವೈರಾಣು ಸೊಂಕು ಹರಡುವುದನ್ನು ತಡೆಗಟ್ಟಲು ಸ್ವಯಂ ಪ್ರೇರಿತ ಸಾಮಾಜಿಕ ಅ೦ತರ ಕಾಪಾಡುವುದು ಅವಶ್ಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ಸಭೆ, ಸಮಾರಂಭಗಳು, ಮದುವೆ, ಜಾತ್ರೆ, ಉರುಸು. ಸಂತೆ. ನಡೆಸದಂತೆ ಕೋರಲಾಗಿದೆ. ಮುಂದುವರೆದು ಚರ್ಚ್‌, ಮಸೀದಿ, ಮಂದಿರಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರುವುದನ್ನು ನಿರ್ಭ೦ಧಿಸಲಾಗಿದೆ. ಹಾಗೂ ಕ್ರೀಡಾಕೂಟ, ಮೇಳ, ವಾಕಾಥನ್‌ ಗುಂಪುವ್ಕಾಯಾಮಾ. ಟ್ಯೂಷನ್‌ ತರಗತಿಗಳು, ಚಿತ್ರಮಂದಿರಗಳು, ಬೀದಿಬದಿ ಮಾರಾಟ, ಮಾಲ್‌ಗಳು, ಶಾಪ್‌ಗಳು, ರೆಸ್ಟೋರೆಂಟಗಳು, ಎಲ್ಲಾ ಬಗೆಯ ಬಾರ್‌ಗಳು, ಕ್ಲಬ್‌ಗಳು, ರೆಸಾರ್ಟ್‌ಗಳು, ಡಾಬಾಗಳು, ಹೋಟೆಲ್‌ಗಳಲ್ಲಿ ಜನ ಸೇರುವುದನ್ನು ನಿಷೇದಿಸಲಾಗಿದೆ. ಹಾಗೂ ಸರ್ಕಾರಿ ಕಛೇರಿಗಳಿಗೂ ಕೂಡ ಸಾರ್ವಜನಿಕರು ಭೇಟಿ ನೀಡುವುದನ್ನು ಮುಂದೂಡಲಾಗಿದೆ. ಹಾಗೂ ಇನ್ನಿತರೆ ಜನಸಂದಣೆ ಆಗುವಂತಹ ಸಂದರ್ಭಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಆದುದರಿಂದ ಕೊಪ್ಪಳ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು. ಭಾರ್ಮಿಕ ಮುಖಂಡರುಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖ್ಯಸ್ಥರು, ಮಾಧ್ಯಮದವರು, ಸದರಿ ವೈರಾಣು ಸೊಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ಸ್ಹಯಂ ಪ್ರೇರಿತವಾಗಿ ಸಾಮಾಜಿಕ ಅ೦ತರವನ್ನು  ಕಾಯ್ದುಕೊಳ್ಳಲು ಹಾಗೂ ಇತರರನ್ನು
ಕಾಯ್ದುಕೊಳ್ಳುವಂತೆ ತಿಳಿಯಪಡಿಸಲು ತಾವುಗಳು ಸಾರ್ವಜನಿಕರಲ್ಲಿ ಕೋರಿಕೊಳ್ಳಲು ವಿನಂತಿಸಿಕೊಳ್ಳಲಾಗಿದೆ

ಹಾಗೂ ಜಿಲ್ಲಾಡಳಿತ ಪರವಾಗಿ ಜಿಲ್ಲಾಧಿಕಾರಿಯಾದ ನಾನು ವೈಯಕ್ತಿಕವಾಗಿ ಸಮಸ್ತ ಕೊಪ್ಪಳ ಜನತೆಯಲ್ಲಿ
ಸಹಕರಿಸುವಂತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

 

Please follow and like us:
error