ಸಾಧನೆಗಾಗಿ ಓದಿಕೊಂಡು ಜೀವನದಲ್ಲಿ ಮುಂದೆ ಬನ್ನಿರಿ – ಪ್ರೊ ಶರಣಬಸಪ್ಪ ಬಿಳಿಯಲಿ

ಕೊಪ್ಪಳ: ಡಾರ್ವಿನ್ ವಿಜ್ಞಾನಿ ಬಲಿಷ್ಠನದೇ ಬದುಕು ಎಂದಿದ್ದರು. ಆದರೆ ಇಂದು ಬದಲಾದವನದೇ ನಿಜವಾದ ಬದುಕು . ಏಕೆಂದರೆ ಜೀವನ ನಿಂತ ನೀರಲ್ಲ. ಬದಲಾವಣೆ ಅನಿವಾರ್ಯ. ಎಷ್ಟೇ ಕಷ್ಟ ಬಂದರೂ ಹೆದರದೇ ಸಾಧನೆಯ ದಾರಿ ಹುಡುಕಿಕೊಳ್ಳಬೇಕು. ಎಂದು ಶ್ರೀಗವಿಸಿದ್ಧೇಶ್ವರ ಪದವಿ ಕಾಲೇಜಿನ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಯಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಅಂತಿಮ ಬಿ.ಕಾಂ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು. .ವಿದ್ಯಾರ್ಥಿಗಳು ಜೀವನದಲ್ಲಿ ಸಕಾರತ್ಮಕ ಚಿಂತನೆಗಳನ್ನು , ಜಾಣ್ಮೆಗಳನ್ನು ಉನ್ನತಿಕರಣ ಮತ್ತು ಮಾಹಿತಿ ಸಂಗ್ರಹ ಇವೆಲ್ಲವುಗಳನ್ನು ರೂಢಿಸಿಕೊಳ್ಳುವ ಅಗತ್ಯ ಇದೆ. ಗೌತಮ ಬುದ್ಧನು ಸಹ ನಮಗೆ ಯಾರೊಬ್ಬರ ಅನುಕರಣೆ ಬೇಡ. ನೀವು ನಿಮ್ಮ ಇಚ್ಛೆಯಂತೆ ಬದುಕಿರಿ ಎಂದಿದ್ದಾರೆ. ಯಾರದೂ ಒತ್ತಾಯಕ್ಕೆ ಓದಲಾರದೇ ಸ್ವಯಂ ಸಾಧನೆಗಾಗಿ ಓದಿಕೊಂಡು ಜೀವನದಲ್ಲಿ ಮುಂದೆ ಬನ್ನಿರಿ. ಏಕೆಂದೆರೆ ನಿಮ್ಮ ಸಾಧನೆ ಕಂಡು ತಾಯಿ ಸಂತೋಷ ಪಡುತ್ತಾಳೆ. ತಂದೆ ನಿಮ್ಮ ಏಳ್ಗೆ ಕಂಡು ಸಂಭ್ರಮಿಸುತ್ತಾನೆ. ಗುರು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾನೆ. ಸಮಾಜವು ಸಹ ನಿಮ್ಮನ್ನು ಸತ್ಕರಿಸುತ್ತದೆ ಹಾಗೂ ನಿಮ್ಮ ತ್ಯಾಗ ಕಂಡು ಭೂಮಿ ತಾಯಿ ಕಣ್ಣೀರು ಹಾಕಿ ಮಡಿಲಲ್ಲಿ ಸೇರಿಸಿಕೊಳ್ಳುತ್ತಾಳೆ. ಈ ಎಲ್ಲ ಜೀವನದ ಸಾರ್ಥಕತೆಯ ಪ್ರಯತ್ನಗಳನ್ನು ವಿದ್ಯಾರ್ಥಿಗಳು ಇಂದು ಅನುಸರಿಸಬೇಕು. ಅಂದಾಗ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬಹುದೆಂದು ಮಾತನಾಡಿದರು. ಅಧ್ಯಕ್ಷತೆ ಪ್ರಾಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ ವಹಿಸಿ ಮಾತನಾಡಿದರು.. ವೇದಿಕೆಯಲ್ಲಿ ದೈಹಿಕ ನಿರ್ದೇಶಕಿ ಶೋಭಾ ಕೆ.ಎಸ್ , .ಉಪನ್ಯಾಸಕರಾದ ಮಾರುತೇಶ, ನಟರಾಜ ಪಾಟೀಲ, ದಾರುಕಾಸ್ವಾಮಿ,, ಡಾ.ಪ್ರಕಾಶ ಬಳ್ಳಾರಿ, ಡಾ.ಮಹೇಶ ಪಾಟೀಲ ಇದ್ದರು . ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Please follow and like us:
error