ಸಾಂತ್ವನ ಕೇಂದ್ರ ಮಹಿಳೆಯರ ತವರು ಮನೆ: ಪ್ರಮೀಳಾ ನಾಯ್ಡು

ಕೊಪ್ಪಳ, ಸೆ.11: ಮಹಿಳಾ ಸಾಂತ್ವನ ಕೇಂದ್ರ ಮಹಿಳೆಯರ ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಮುಂಚುಣಿಯಲ್ಲಿದ್ದು, ಮಹಿಳೆಯರ ಕೌಟುಂಬಿಕ, ಅತ್ಯಾಚಾರ, ಬಹುಪತ್ನಿತ್ವ, ವರದಕ್ಷಿಣೆ, ವಿಚ್ಛೇದನ ಹಾಗೂ ಇತರೆ ಪ್ರಕರಣಗಳು ದಾಖಲು ಮಾಡಿ ಸಂತ್ರಸ್ತ ಮಹಿಳೆಗೆ ಆಶ್ರಯ ಉಚಿತ ಕಾನೂನು ನೆರವು ನೀಡಿ ಮಹಿಳೆಯರ ತವರು ಮನೆಯಂತಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಹೇಳಿದರು.

ಅವರು ನಗರದ ಅಂಬೇಡ್ಕರ್ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ಬೇಟಿ ನೀಡಿ ವ್ಯವಸ್ಥೆ ಪರೀಶಿಸಿ ಮಾತನಾಡಿದ ಅವರು ನಗರ ಮತ್ತು ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸಾಂತ್ವನ ಯೋಜನೆ ಜಾರಿಗೊಳಿಸಿದ್ದು, ಈ ಕೇಂದ್ರವು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ, ಪ್ರಸಕ್ತ ಸಾಲಿನಲ್ಲಿ ಸಾಂತ್ವನ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗುವಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪನಿರ್ದೇಶಕಿ ಅಕ್ಕಮಹಾದೇವಿ ಗಿರಡ್ದಿ, ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ, ರೋಹಿಣಿ ಕೋಟಗಾರ, ಜಯಶ್ರೀ, ವಿರುಪಾಕ್ಷಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ, ಸದಸ್ಯೆ ಮಧುರಾ ಕರಣಂ, ಸಾಂತ್ವನ ಕೇಂದ್ರದ ಅಧ್ಯಕ್ಷ  ಡಾ. ಬಿ.ಜ್ಞಾನಸುಂದರ, ಕಾರ್ಯದರ್ಶಿ ಬಿ.ಗಿರೀಶಾನಂದ, ಆಪ್ತ ಸಮಾಲೋಚಕಿ ಶಶಿಕಲಾಸ್ವಾಮಿ, ಸಮಾಜಸೇವಾ ಕಾರ್ಯಕರ್ತೆಯರಾದ ಗೀತಾ ಅಂಕಲಿ, ಭಾರತಿ ಸುಣಗಾರ, ವಿನೂತನ ಶಿಕ್ಷಣ ಸೇವಾ ಸಂಸ್ಥೆ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ, ಪೋಲಿಸ್ ಇಲಾಖೆ ಸಿಬ್ಬಂದಿಗಳು ಹಾಗೂ ಅನೇಕರು ಉಪಸ್ಥಿತರಿದ್ದರು.

Please follow and like us:
error