ಸಹಾಯಾಸ್ತ ಚಾಚುವ ಮೂಲಕ ಸರ್ಕಾರದೊಂದಿಗೆ ಕೈಜೋಡಿಸಿ : ಪಿ.ಸುನೀಲ್ ಕುಮಾರ್

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪ

ಕೊಪ್ಪಳ ಆ.  ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದು, ಇಲ್ಲಿಯ ಜನತೆಗೆ ಪರಿಹಾರ ಒದಗಿಸಲು ಸಹಾಯಾಸ್ತ ಚಾಚಲು ಕೊಪ್ಪಳ ಜಿಲ್ಲೆಯ ಸಾರ್ವಜನಿಕರು ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದ ಬೆಳಗಾವಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳನ್ನು ಒಳಗೊಂಡಂತೆ ಹದಿನೈದು ಜಿಲ್ಲೆಗಳಲ್ಲಿ ಪ್ರಕೃತಿಯ ವಿಕೋಪ  ಸಂಭವಿಸಿದ್ದು, ಜನತೆ ಮಾನವೀಯ ನೆಲೆಗಟ್ಟಿನಲ್ಲಿ ಸಹಾಯಾಸ್ತ ಚಾಚಲು ಸಾರ್ವಜನಿಕರು ಸರ್ಕಾರದೊಂದಿಗೆ ಕೈ ಜೋಡಿಸಲು ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸ್ವಪ್ರೆರಣೆಯಿಂದ ದೇಣಿಗೆ ನೀಡಬೇಕು.  ಪ್ರಕೃತಿ ವಿಕೋಪದಿಂದಾಗಿ ನೊಂದ ಸಂತ್ರಸ್ಥರಿಗೆ ದಿನ ನಿತ್ಯ ಬಳಕೆ ಮಾಡುವ ವಸ್ತುಗಳು, ಅಕ್ಕಿ, ಗೋದಿ, ಜೋಳ, ತೋಗರಿ ಬೆಳೆ, ಅಡುಗೆ ಎಣ್ಣೆ, ಸಕ್ಕರೆ, ಪಾತ್ರೆ, ಬಟ್ಟೆ ಮತ್ತು ಬೇಡ್ ಶಿಟ್‌ಗಳನ್ನು ಕೊಟ್ಟು ಸಹಕರಿಸಬೇಕು.
ದೇಣಿಗೆ ಸಲ್ಲಿಸಲು ಆಸಕ್ತಿ ಹೊಂದಿರುವ ಸಾರ್ವಜನಿಕರು ಖಾತೆಯ ಹೆಸರು  Chief Minister Relief Fund Natural Calamity  ಬ್ಯಾಂಕ್ ಹೆಸರು  SBI (State Bank of India), ಶಾಖೆ ವಿಧಾನ ಸೌಧ ಬ್ರಾöಚ್, ಖಾತೆಯ ಸಂಖ್ಯೆ-37887098605,  IFSC Code SBIN0040277, ಎಂ.ಐ.ಸಿ.ಆರ್.ಸಂಖ್ಯೆ-560002419, ಚೆಕ್‌ಗಳನ್ನು ನಂ.235-ಎ,2ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನ ಸೌಧ, ಬೆಂಗಳೂರು-560001, ಈ ವಿಳಾಸಕ್ಕೆ ಸಂಪರ್ಕಿಸಬಹುದು.  ಅಲ್ಲದೇ ದೇಣಿಗೆ, ಚೆಕ್/ ಡಿಡಿ ಗಳನ್ನು ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರರ ಮೂಲಕವೂ ಸಹ ಸಲ್ಲಿಸಬಹುದಾಗಿದೆ

Please follow and like us:
error