ಸಸಿ ನೆಡುವ ಕಾರ್ಯಕ್ರಮ : ಮೇ. 17 ರಂದು ಕೊಪ್ಪಳದಲ್ಲಿ ಚಾಲನೆ

ಕೊಪ್ಪಳ ಮೇ. 16   ಅರಣ್ಯ ಇಲಾಖೆಯಿಂದ ಕೊಪ್ಪಳ ಜಿಲ್ಲೆಯಾದ್ಯಂತ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮೇ. 17 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಮುಂದೆ ಮುಖ್ಯ ರಸ್ತೆಯ ಹತ್ತಿರ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
2019-20ನೇ ಸಾಲಿನಲ್ಲಿ ಅರಣ್ಯ ಇಲಾಖೆಯಿಂದ ವಿವಿಧ ಯೋಜನೆಗಳಡಿಯಲ್ಲಿ ಕೊಪ್ಪಳ ಅರಣ್ಯ ವಿಭಾಗದ ವ್ಯಾಪ್ತಿಯ ಕೊಪ್ಪಳ ವಲಯ, ಮುನಿರಾಬಾದ್, ಗಂಗಾವತಿ ಮತ್ತು ಕುಷ್ಟಗಿ ವಲಯಗಳಲ್ಲಿ ಬ್ಲಾಕ್ ನಡೆತೋಪು ರಚನೆ, ಸಾರ್ವಜನಿಕರಿಗೆ, ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಬ್ಲಾಕ ನಡೆತೋಪು 236 ಹೆಕ್ಟರ್ ಪ್ರದೇಶದಲ್ಲಿ 10/16 ಗಾತ್ರದ 51920 ಸಸಿಗಳನ್ನು ನಾಡಿ ಮಾಡಿ ನಡೆತೋಪು ರಚನೆ, ಕೆಎಫ್‌ಡಿಎಫ್ ನಗರ ಹಸಿರೀಕರಣ ಯೋಜನೆಯಡಿ ಮಾನ್‌ಸೂನ್ ನಡೆತೋಪು 12.12 ಹೆ ಪ್ರದೇಶಗಳಲ್ಲಿ 14/20 ಗಾತ್ರದ 4000 ಸಸಿಗಳ ನಡೆತೋಪು ನಿರ್ಮಾಣ, ಕೆಎಫ್‌ಡಿಎಫ್ ರಸ್ತೆ ಬದಿ ನಡೆತೋಪು, ಯೋಜನೆಯಡಿ 7.12 ಕಿ.ಮೀ. ಪ್ರದೇಶದಲ್ಲಿ 14/20 ಗಾತ್ರದ 2350 ಸಸಿಗಳ ನಡೆತೋಪು ನಿರ್ಮಾಣ, ಸಾರ್ವಜನಿಕ ವಿತರಣೆಗಾಗಿ ಸಸಿ ಬೆಳಸುವ ಯೋಜನೆಯಡಿ 6/9 ಗಾತ್ರದ 18300 ಸಸಿ ಮತ್ತು 8/12 ಗಾತ್ರದ 3500 ಸಸಿ, ಸಿರಿ ಚಂದನವನ ಯೋಜನೆ 8/12 ಗಾತ್ರದ 8400 ಸಸಿ ಮತ್ತು ಹಸಿರು ಕರ್ನಾಟಕ ಯೋಜನೆಯಡಿ 6/9 ಗಾತ್ರದ 70000 ಹಾಗೂ 8/12 ಗಾತ್ರದ 1500 ಸಸಿಗಳನ್ನು ಕ್ರಮವಾಗಿ ರೂ. 1.00 ಮತ್ತು 3.00 ಗಳಂತೆ ಪ್ರತಿ ಸಸಿಗೆ ರಿಯಾಯಿತಿ ದರಗಳ ಮಾರಾಟ ಮಾಡಲಾಗುವುದು.  ಈ ಎಲ್ಲಾ ಸಸಿ ನೆಡುವ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮತ್ತು ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್‌ಪಾಲ ಕ್ಷಿÃರಸಾಗರ, ಅವರು ಮೇ. 17 ರಂದು ಚಾಲನೆ ನೀಡುವರು.
ನಡೆತೋಪು ಒಟ್ಟು 255.24 ಹೆಕ್ಟರ್ ಆಗಿದ್ದು, 58,260 ಸಸಿಗಳನ್ನು ನೆಡಲಾಗುವುದು.  1,14,00 ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು.  ಎಲ್ಲಾ ಸೇರಿದಂತೆ ಒಟ್ಟು ಸಸಿಗಳು 1,72,260 ಸಸಿಗಳು.
Please follow and like us:
error