ಸಲಿಂಗಕಾಮಕ್ಕಾಗಿ ಬಾಲಕನ ಕಿಡ್ನಾಪ್ : ಅಪರಾಧಿಗೆ ೧೦ ವರ್ಷ ಜೈಲು

ಕೊಪ್ಪಳ : ಹಾಸ್ಟೆಲ್ ನಲ್ಲಿದ್ದ ಬಾಲಕನನ್ನು ಕಿಡ್ನಾಪ್ ಮಾಡಿ ಸಲಿಂಗಕಾಮಕ್ಕೆ ಬಳಸಿಕೊಂಡಿದ್ದ ಆರೋಪಿಗೆ ೧೦ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಶರಣಪ್ಪ ಕೆಂಬಾವಿ ೧೦ ವರ್ಷ ಜೈಲು ೨೦ ಸಾವಿರ ದಂಡಕ್ಕೆ ಗುರಿಯಾದ ಅಪರಾಧಿ. ೨೦೧೮ರಲ್ಲಿ ಕೊಪ್ಪಳದ ಗವಿಮಠ ಹಾಸ್ಟೆಲ್ ನಿಂದ ಬಾಲಕನನ್ನು ಅಪಹರಿಸಲಾಗಿತ್ತು.‌ ಬಾಲಕನ ಜೊತೆಗೆ ಇನ್ನಿಬ್ಬರು ಬಾಲಕರನ್ನೂ ಅಪಹರಿಸಲಾಗಿತ್ತು. ಒಂದು ದಿನ ಹುಲಿಗಿಯಲ್ಲಿದ್ದ ಇಬ್ಬರು ಬಾಲಕರು ಮರುದಿನ ವಾಪಸ್ಸಾಗಿದ್ದರು. ಆದರೆ ಇನ್ನೋರ್ವ ೮ನೇ ತರಗತಿಯ ವಿದ್ಯಾರ್ಥಿಯನ್ನು ಆರೋಪಿ ತನ್ನೊಂದಿಗೆ ಕರೆದೊಯ್ದಿದ್ದ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರಕರಣ ಇದಾಗಿತ್ತು. ಹೊರ ರಾಜ್ಯದ ವಿವಿದ ಊರುಗಳಿಗೆ ಕರೆದೊಯ್ದಿದ್ದ ಆರೋಪಿವ ಬಾಲಕನನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದ. ಪ್ರಕರಣದ ತನಿಖೆಗೆ ಹಾಗೂ ಬಾಲಕನ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.


ಸಿಪಿಐ ರವಿ ಉಕ್ಕುಂದ ನೇತೃತ್ವದ ತಂಡ ನಿಸಾರ್ ಅಹ್ಮದ್, ಎಎಸ್ಐ ರಾಮಣ್ಣ, , ಯಲ್ಲಪ್ಪ, ರಾಜಶೇಖರ್, ಪ್ರಕಾಶ್‌ ರಿಂದ ಕಾರ್ಯಾಚರಣೆ ನಡೆದಿತ್ತು. ಬಾಲಕನಿಗೆ ವಿವಿಧ ಆಮೀಷ ಒಡ್ಡಿ ಅಪಹರಿಸಿದ್ದ ಆರೋಪಿಯನ್ನು ಹಿಡಿದು ಬಾಲಕನ್ನು ರಕ್ಷಿಸಲಾಗಿತ್ತು.

ಕುಂಟ ಲಕ್ಷ್ಮಣ ಅಲಿಯಾಸ್ ಶರಣಪ್ಪ

ಬಾಲಕನ ಅಪಹರಣ ಮತ್ತು ಲೈಂಗಿಕ ದೌರ್ಜನ್ಯದ ಹಿನ್ನೆಲೆ ಕೇಸ್ ದಾಖಲಾಗಿತ್ತು ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪಳ ಅಡಿಷನಲ್ ಸೆಷನ್ಸ್ ಜಡ್ಜ್ ಎಸ್.ಎಂ.ಜಾಲವಾಡಿ ನಿನ್ನೆ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಎಸ್ಪಿ ಟಿ.ಶ್ರೀಧರ ಪ್ರಶಂಸೆಯ ಪತ್ರವನ್ನು ನೀಡಿದ್ದಾರೆ.

Please follow and like us:
error