ಸರ್ವಾಧ್ಯಕ್ಷರಾಗಿ ವೀರಣ್ಣ ವಾಲಿ ನೇಮಕ

ಕೊಪ್ಪಳ,ಜು.೨೪ : ತಿರುಳುಗನ್ನಡ ಸಾಹಿತ್ಯ, ಕಲೆ & ಸಾಂಸ್ಕೃತಿಕ ಪ್ರತಿಷ್ಥಾನ, ಕೊಪ್ಪಳ ಬರುವ ಅಗಸ್ಟ್ ೨೪ ರಿಂದ ೨೮ ರವರೆಗೆ ಕೊಪ್ಪಳ ಜಿಲ್ಲಾ ಉತ್ಸವ ಸಂದರ್ಭದಲ್ಲಿ ೧೧ನೇ ತಿರುಳುಗನ್ನಡ ಸಾಹಿತ್ಯ ಸಮ್ಮೇಳನವನ್ನು ನೆಡಸಲಿದೆ. ಇದರ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ವೀರಣ್ಣ ವಾಲಿ ಅವರನ್ನು ನೇಮಕ ಮಾಡಲಾಗಿದೆ ಎಂದು ಸಮ್ಮೇಳನದ ಸಂಚಾಲಕರಾದ ಮಹೇಶಬಾಬುಸುರ್ವೆ ರವರು ತಿಳಿಸಿದ್ದಾರೆ.
ಅಗಸ್ಟ ೨೬ ರಂದು ನಡೆಯುವ ೧೧ನೇ ತಿರುಳುಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ವೀರಣ್ಣ ವಾಲಿ ರವರ ಸರ್ವಾಧ್ಯಕ್ಷತೆಯಲ್ಲಿ ತಿರುಳುಗನ್ನಡ ಕವಿಗೋಷ್ಠಿ, ತಿರುಳುಗನ್ನಡ ಸಾಂಸ್ಕೃತಿಕ ಸೌರಭ, ಸಂವಾದ, ವಿಚಾರ ಗೋಷ್ಠಿ ಹಾಗೂ ಸಾಂಸ್ಕೃತಿಕ ಕಲಾ ಪ್ರದರ್ಶನದೊಂದಿಗೆ ಕಾರ್ಯಕ್ರಮಗಳು ನಡೆಯಲಿವೆ.
ಮಂಗಳಾವಾರದಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ, ಸರ್ವಾನುಮತದಿಂದ ವೀರಣ್ಣ ವಾಲಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಮಹಾಂತೇಶ ಮಲ್ಲನಗೌಡರ್, ಎಂ.ಸಾದಿಕ್‌ಅಲಿ, ಜಿ.ಎಸ್.ಗೋನಾಳ, ಉಮೇಶ ಸುರ್ವೆ, ವೈ.ಬಿ.ಜೂಡಿ, ಫಕೀರಪ್ಪ ಗೊಟೂರು, ಶಿವಕುಮಾರ್ ಹಿರೇಮಠ, ಉಮೇಶ ಪೂಜಾರ, ಮಂಜುನಾಥ ಅಂಗಡಿ, ಶ್ರೀನಿವಾಸ ಚಿತ್ರಗಾರ, ಮೈಲಾರಪ್ಪ ಉಂಕಿ, ಮೆಹಬೂಬು ಖಾನ್, ಖಾಸೀಮ್ ಗಡಾದ, ವಿಜಯಲಕ್ಷ್ಮೀ ಕೊಟಗಿ, ಬಾಲನಾಗಮ್ಮ ಸೇರಿದಂತೆ ಇತರರು ಉಪ್ಪಸ್ಥಿತರಿದ್ದರು.

Please follow and like us:
error