ಸರ್ಕಾರಕ್ಕೆ ಧಮ್ಕಿ ಹಾಕಲು ಡಿಕೆ ಶಿವಕುಮಾರ ಯಾರು? ಬಿ.ಸಿ.ಪಾಟೀಲ್    ಕೃಷಿ ಮಂತ್ರಿ

Kannadanet NEWS‌ ಕೊಪ್ಪಳ
ಡಿಕೆ ಶಿವಕುಮಾರ ಗೃಹ ಮಂತ್ರಿ ಯಾರು? ಮುಖ್ಯಮಂತ್ರಿ ಯಾರು ಎಂಬುದು ಗೊತ್ತಿಲ್ಲದ ಅಜ್ಞಾನಿಯಾ ಎಂದು ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಪ್ರಶ್ನಿಸಿದ್ದಾರೆ.
ಕೊಪ್ಪಳದ‌ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಬೆಂಗಳೂರಿನ ಡಿಜೆ ಮತ್ತು ಕೆಜೆ ಹಳ್ಳಿ ಗಲಾಟೆ ಪ್ರಕರಣ ಹಿನ್ನೆಲೆ ಶನಿವಾರ ಪ್ರತಿಕ್ರಿಯೆ ನೀಡಿದರು. ಒಬ್ಬ ಮನುಷ್ಯನ ಮಾತಿನಿಂದ ಆತನ ಸಂಸ್ಕೃತಿ ಏನು ಎಂಬುದು ಗೊತ್ತಾಗುತ್ತದೆ. ಗೃಹ ಮಂತ್ರಿಗೆ ಅವರು ಯಾರು ಎನ್ನುತ್ತಾರೆ ಎನ್ನುವುದಾದರೆ ಡಿಕೆ ಶಿವಕುಮಾರ ಸಂಸ್ಕೃತಿ ಗೊತ್ತಾಗುತ್ತದೆ. ಸರ್ಕಾರಕ್ಕೆ ಧಮ್ಕಿ ಹಾಕಲು ಡಿಕೆ ಶಿವಕುಮಾರ ಯಾರು? ಇವೆಲ್ಲ ನಡೆಯುವುದಿಲ್ಲ ಎಂದರು.
ಟ್ವಿಟ್ ಮಾಡಿರುವ ಯುವಕನೇ ನಾನು ಅಪ್ಪಟ ಕಾಂಗ್ರೆಸ್ಸಿಗ ಅಂತಾ ಹೇಳಿದ್ದಾನೆ. ಆತ ಕಾಂಗ್ರೆಸ್ ನಿಂದ ಆಯ್ಕೆಯಾದ ಶಾಸಕನ ಅಕ್ಕನ ಮಗ. ಆ ಯುವಕ ಜಮೀರ‌ ಅಹ್ಮದ್ ಸೇರಿ ವಿವಿಧ ಕಾಂಗ್ರೆಸ್ ‌ನಾಯಕರೊಂದಿಗಿನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ ಎಂದರು. ಯುವಕ ತನ್ನ ಹೇಳಿಕೆಯಲ್ಲಿ, ನಾನು ಕಾಂಗ್ರೆಸ್ಸಿಗ,‌ಆದರೆ, ನಾನು ಹಿಂದೂ ಕೂಡ ಹೌದು. ನಾನು ನನ್ನ ಭಾವನೆಗಳನ್ನು ಹೇ ಳಿಕೊಂಡಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ ಇಷ್ಟಾದರೂ ಡಿಕೆ ಶಿವಕುಮಾರ ಬಾಯಿಗೆ ಬಂದಂತೆ ಮಾತಾಡಿದ್ರೆ ಏನೂ ಮಾಡೊಕ್ಕಾಗಲ್ಲ. ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆ ಪೂರ್ವ ನಿಯೋಜಿತ ಕೃತ್ಯ. ಡಿಕೆ ಶಿವಕುಮಾರ‌ ಏನಾದ್ರೂ ಹೇಳಬಹುದು. ಅದು ವೇದ ವಾಖ್ಯವಲ್ಲ ಎಂದರು.

Please follow and like us:
error