ಕೊಪ್ಪಳ ಡಿ .30 ಇಂದು ನಗರದ ಬಹಾದ್ದೂರಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಗುಲಬರ್ಗಾ ವಿಭಾಗದ ನಿರ್ದೇಶಕರಾದ ಡಾ . ಬಿ.ಕೆ.ಎಸ್ . ವರ್ಧನ್ ಆಕಸ್ಮಿಕ ಭೇಟಿ ನೀಡಿ ಜನವರಿ 1 ರಿಂದ ವಿದ್ಯಾಗಮ ಶಾಲೆಗಳು ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ತಯಾರಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದರು . ಶಾಲೆಯ ಸ್ವಚ್ಛತೆಯ ಬಗ್ಗೆ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಬಹಳ ಗಮನ ಹರಿಸಬೇಕು . ಎಲ್ಲಾ ಕೊಠಡಿಗಳಿಗೆ ತಪ್ಪದೇ ಸ್ಯಾನಿಟೈಸ್ ಮಾಡಬೇಕು . ಮಕ್ಕಳ ಸುರಕ್ಷತೆ ಬಹಳ ಮುಖ್ಯ ಇದರ ಬಗ್ಗೆ ಸಂಸ್ಥೆಯವರು ಸರಿಯಾದ ರೀತಿಯಲ್ಲಿ ತಯಾರಿ ಮಾಡಿಕೊಂಡು ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಸಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಮಾಸ್ಟ್ ಕಡ್ಡಾಯವಾಗಿ ಧರಿಸಿಕೊಂಡು ಬರಲು ಮಕ್ಕಳಿಗೆ ಮತ್ತು ಪಾಲಕರಿಗೆ ಮುಂಚಿತವಾಗಿ ತಿಳಿಸಬೇಕು ಎಂದು ಹೇಳಿದರು . ಶಾಲೆಯು ಉತ್ತಮ ರೀತಿಯ ತಯಾರಿ ಮಾಡಿಕೊಂಡಿದೆ . ಬಹಳ ಸ್ವಚ್ಛತೆ ಕಾಪಾಡಿಕೊಂಡಿದೆ . ಇದೇ ರೀತಿ ಮುಂದುವರೆಸಿಕೊಂಡು ಹೋಗಬೇಕು ಮತ್ತು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಸೂಚಿಸಿದರು . ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಉಪನಿರ್ದೇಶಕರಾದ ದೊಡ್ಡಬಸಪ್ಪ ನೀರಲಕೇರಿ , ಇ.ಓ. ಹಂಚಿನಾಳಪ್ಪ ಮೇಟಿ , ಡಯಟ್ ಪ್ರಭಾರಿ ವೆಂಕಟೇಶ ಕೊಂಕಲ್ , ಸ್ಟೇಟ್ ಮುಖ್ಯಸ್ಥರಾದ ಜಯರಾಜ್ ಭೂಸದ ಹಾಗೂ ಸಂಸ್ಥೆಯ ಕಾರ್ಯದರ್ಶಿ ಆರ್.ಹೆಚ್.ಅತ್ತನೂರ , ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಣುಕಾ ಅತ್ತನೂರ ಹಾಗೂ ಉಪನಿರ್ದೇಶಕರ ಕಛೇರಿಯ ಸಿಬ್ಬಂದಿ ಉಪಸ್ಥಿತರಿದ್ದರು .
