ಸರಕಾರ ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಕೊರೊನಾ ಪರೀಕ್ಷೆಯ ಸಂಖ್ಯೆ ಕಡಿಮೆ ಮಾಡುತ್ತಿರುವುದು ಜನದ್ರೋಹ- ಸಿದ್ದರಾಮಯ್ಯ

ದಯವಿಟ್ಟು ರಾಜೀನಾಮೆ ನೀಡಿ, ನಾವು ಪ್ರವಾಸನೂ ಮಾಡ್ತೇವೆ, ಒಂದು ಆಸ್ಪತ್ರೆಯದ್ದಲ್ಲ, ಇಡೀ ರಾಜ್ಯದ ಹೊಣೆಯನ್ನೂ ಹೊರುತ್ತೇವೆ

ಬೆಂಗಳೂರು : ತಮ್ಮ ಆರೋಪಕ್ಕೆ ಉತ್ತರವಾಗಿ ತಮ್ಮೊಡನೆ ಪ್ರವಾಸಕ್ಕೆ ಬರಲು ಹೇಳಿದ್ದ  ಬಿ.ಶ್ರೀರಾಮುಲುರವರಿಗೆ ತಿರುಗೇಟು ನೀಡಿದ  ಮಾಜಿ ಸಿಎಂ ಸಿದ್ದರಾಮಯ್ಯ  ಕೊರೊನಾ ಚಿಕಿತ್ಸೆಯಲ್ಲಿನ ಅವ್ಯವಹಾರದ ಆರೋಪಕ್ಕೆ ಒಬ್ಬ ಸಚಿವರು ಜತೆಯಲ್ಲಿ ಪ್ರವಾಸಕ್ಕೆ ಕರೆದಿದ್ದಾರೆ, ಇನ್ನೊಬ್ಬರು ಆಸ್ಪತ್ರೆಯ ಹೊಣೆ ಹೊರಲು ಹೇಳಿದ್ದಾರೆ. ಇವರಿಬ್ಬರಿಗೂ ಒಂದೇ ಉತ್ತರ: ದಯವಿಟ್ಟು ರಾಜೀನಾಮೆ ನೀಡಿ, ನಾವು ಪ್ರವಾಸನೂ ಮಾಡ್ತೇವೆ, ಒಂದು ಆಸ್ಪತ್ರೆಯದ್ದಲ್ಲ, ಇಡೀ ರಾಜ್ಯದ ಹೊಣೆಯನ್ನೂ ಹೊರುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಕೊರೊನಾ‌ ನಿಯಂತ್ರಣದ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ, ದಾಖಲೆಗಳಿವೆ ಎಂದು ಹೇಳಿದರಷ್ಟೆ ಸಾಲದು. ಅದನ್ನು ಬಿಡುಗಡೆ‌ ಮಾಡಿ ಸಚಿವ ಸುಧಾಕರ . ಮಾಹಿತಿ ಇದ್ದರೆ ಮುಚ್ಚಿಡುತ್ತಿರುವುದು ಯಾಕೆ ಎಂದು

ಮುಖ್ಯಮಂತ್ರಿಯವರನ್ನು  ಕೇಳಿ. ಮಾಹಿತಿ ಕೇಳಿದ ನನ್ನ ಪತ್ರಕ್ಕೆ ಉತ್ತರಿಸಲು ಹೇಳಿ.

ಕೊರೊನಾ ನಿಯಂತ್ರಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗದ ಕರ್ನಾಟಕದ ಮುಖ್ಯಮಂತ್ರಿ , ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಕೊರೊನಾ ಪರೀಕ್ಷೆಯ ಸಂಖ್ಯೆ ಕಡಿಮೆ ಮಾಡುತ್ತಿರುವುದು ಜನದ್ರೋಹ. ಸೋಂಕಿನ ಲಕ್ಷಣಗಳೇ ಇಲ್ಲದಿರುವ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲು ಹೆಚ್ಚು ಹೆಚ್ಚು ಪರೀಕ್ಷೆ ನಡೆಸುವುದೊಂದೇ ದಾರಿ. ಖಾಸಗಿ ಆಸ್ಪತ್ರೆಗಳು ರಾಜ್ಯ ಸರ್ಕಾರದ ಮಾತಿಗೆ ಕವಡೆಕಾಸಿನ ಬೆಲೆಯನ್ನೂ ಕೊಡದೆ ಬಡರೋಗಿಗಳ ಸುಲಿಗೆ ನಡೆಸುತ್ತಿವೆ. ಖಾಸಗಿ ಆಸ್ಪತ್ರೆಗಳು ಸೋಂಕಿತರನ್ನು ಸೇರಿಸಿಕೊಳ್ಳುತ್ತಿಲ್ಲ,‌ ಸೇರಿಸಿಕೊಂಡರೂ ದುಬಾರಿ ಶುಲ್ಕ ವಸೂಲಿ‌‌ ಮಾಡುತ್ತಿವೆ. ಇವುಗಳ ವಿರುದ್ಧ ಕ್ರಮಕ್ಕೆ ಹಿಂಜರಿಕೆ ಯಾಕೆ ಮುಖ್ಯಮಂತ್ರಿಗಳೇ? ಕೊರೊನಾ‌‌‌ ಸೋಂಕಿತರಿಗೆ‌ ಆಸ್ಪತ್ರೆಗಳಲ್ಲಿ‌ ಹಾಸಿಗೆಗಳನ್ನು‌‌ ಹೊಂದಿಸುವುದೇ ಸಮಸ್ಯೆಯಾಗಿದೆ.  ಮುಖ್ಯಮಂತ್ರಿಯವರೆ , ಅಧಿಕಾರದ ಕುರ್ಚಿ‌ ಖರೀದಿಗೆ ಸಂಗ್ರಹಿಸಿದ ದುಡ್ಡಲ್ಲಿ ಶಿಲ್ಕು ಉಳಿಸಿದ್ದರೆ ಅದನ್ನಾದರೂ ಬಳಸಿಕೊಂಡು‌ ಹಾಸಿಗೆ-ಸಲಕರಣೆ ಖರೀದಿಸಿ‌‌‌ ಜನರನ್ನು ಬದುಕಿಸಿ‌‌, ನಿಮ್ಮ ಪಾಪ ತೊಳ್ಕೊಳ್ಳಿ ಎಂದು ರಾಜ್ಯ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Please follow and like us:
error