ಸಮ್ಮಿಶ್ರ ಸರ್ಕಾರ ಉರುಳಿದ್ದು ಡ್ರಗ್ ಮಾಫಿಯಾದಿಂದ -ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್

 ಬೆಂಗಳೂರು :  ನನ್ನ ನೇತೃತ್ವದ ‌ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉತುಳಿದ್ದು ಡ್ರಗ್ ಮಾಫಿಯಾದಿಂದ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.  ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಸೋಮವಾರ ಮಾತನಾಡಿದರು.

ನಾನು ಸಿಎಂ ಆಗಿದ್ದಾಗ ಡ್ರಗ್ಸ್​ ದಂಧೆಗೆ ಬ್ರೇಕ್​​​​​​ ಹಾಕಲು ಯತ್ನಿಸಿದ್ದೆ. ಈ ವೇಳೆ ಕೆಲವರು ಶ್ರೀಲಂಕಾಗೆ ಓಡಿ ಹೋದರು. ನನ್ನ ಸರ್ಕಾರ ಬೀಳಿಸೋಕೆ ಡ್ರಗ್ಸ್​, ಬೆಟ್ಟಿಂಗ್​ ಹಣ ಬಳಕೆ ಆಯ್ತು ಎಂದು ಮಾಜಿ ಸಿಎಂ ಅವರು ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ. ನನ್ನ ಸರ್ಕಾರ ಬೀಳಿಸೋಕೆ ಡ್ಯಾನ್ಸ್ ಕ್ಲಬ್, ಬಾರ್​ಗಳ ಹಣ ಬಳಕೆ ಮಾಡಿಕೊಂಡಿದ್ದಾರೆ. ಕ್ರಿಕೆಟ್​ ಬೆಟ್ಟಿಂಗ್​​, ಪಬ್​​​ ಹಣ ಬಳಸಿ ಮೈತ್ರಿ ಸರ್ಕಾರ ಕೆಡವಿದ್ರು ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಈ ಕೆಟ್ಟ ಮಾಫಿಯಾಕ್ಕೆ ಚಿಕ್ಕ ಮಕ್ಕಳು ಬಲಿಯಾಗಬಾರದು. ಈ ಹಗರಣದ ಹಿಂದೆ ಯಾರೇ ಪ್ರಭಾವಿಗಳು ಅವರ ವಿರುದ್ಧ ಕಠಿಣ ಕ್ರಮ ಜರುಗಬೇಕು ಎಂದು ಎಚ್ ಡಿಕೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸ್ಯಾಂಡಲ್​​ವುಡ್​​ ನಲ್ಲಿ ಡ್ರಗ್ಸ್​​ ರೇವ್​​ ಪಾರ್ಟಿ ನಡೆಯುತ್ತದೆ. ಅನೇಕ ಸಿನಿ ತಾರೆಯರು, ರಾಜಕಾರಣಿಗಳು, ದೊಡ್ಡ ದೊಡ್ಡ ನಿರ್ದೇಶಕರ ಮಕ್ಕಳು, ಹಿರಿಯ ನಟರ ಮಕ್ಕಳು ಈ ದಂಧೆಯಲ್ಲಿದ್ದಾರೆ ಎಂಬ ಹೇಳಿಕೆ ಚಂದನವನದಲ್ಲಿ ಸ್ಫೋಟ ಎಬ್ಬಿಸಿತ್ತು. ಇದರ ಬೆನ್ನಲ್ಲೇ ಡ್ರಗ್ ಸ್ಕ್ಯಾಂಡಲ್ ಕುರಿತು ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಾತು‌ ಚರ್ಚೆಗೆ ಗ್ರಾಸವಾಗಿದೆ.

 

Please follow and like us:
error