ಸಭೆಯಲ್ಲಿ ಗೈರು, ಟೂರ್ ನಲ್ಲಿ  ಗ್ರಾಪಂ ಸದಸ್ಯರು : ಪೆಚ್ಚಾದ ಸಚಿವೆ ಜೊಲ್ಲೆ

ಕಾರ್ಯಕರ್ತರು,ಅಭಿಮಾನಿಗಳಿಗೆ ಪಾಠ ಮಾಡಿದ ಸಚಿವರು

ಕೊಪ್ಪಳ :  ಕೊಪ್ಪಳದಲ್ಲಿಂದು ನಡೆದ ಬಿಜೆಪಿಯ ಜನಸೇವಕ ಸಮಾವೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ  ಪೆಚ್ಚಾದ ಪ್ರಸಂಗ ಜರುಗಿತು.

ಭಾಷಣದ ಜೋಷ್ ನಲ್ಲಿದ್ದ ಸಚಿವೆ  ಗ್ರಾಪಂಗೆ ಸದಸ್ಯರಾಗಿ ಆಯ್ಕೆಯಾದ ಮಹಿಳೆಯರು ಕೈ ಎತ್ತಿ, ಪುರಷರು ಕೈ ಎತ್ತಿ  ಎಂದು ಮನವಿ ಮಾಡಿಕೊಂಡಾಗ ಬೆರಳೆಣಿಕೆಯಷ್ಟು ಕೈಗಳು ಮಾತ್ರ ಕಂಡವು. ಇಷ್ಟೇ ಜನರೇ ಎಂದು ಪೆಚ್ಚಾದ ಸಚಿವೆ  ಕೇಳಿದಾಗ  ಗ್ರಾಪಂ ಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇರೋದ್ರಿಂದ ಎಲ್ರೂ ಟೂರ್‌ಗೆ ಹೋಗ್ಯಾರ್ರಿ ಮೇಡಂ ಎಂಬ ಕೂಗು ಎರಡೂ ಕಡೆಯ ಗ್ಯಾಲರಿಯಿಂದ ಕೇಳಿ ಬಂತು. ಇಂದು ಹಮ್ಮಿಕೊಂಡಿದ್ದ ಜನಸೇವಕ ಕಾರ್ಯಕ್ರಮದಲ್ಲಿ ಹಾಜರಾಗಬೇಕಾಗಿದ್ದ ಗ್ರಾಮ ಪಂಚಾಯತ್ ಸದಸ್ಯರು ಮಾಯವಾಗಿದ್ದರು. ಬೆರಳಣಿಕೆಯ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.  ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಗ್ರಾಮ ಪಂಚಾಯತ್ ನಲ್ಲಿ ಹೇಗಿರಬೇಕು ಎನ್ನುವ  ಪಾಠವನ್ನು ವೇದಿಕೆಯ ಮೇಲಿದ್ದವರು  ಮಾಡಿದರು.

Please follow and like us:
error