ಸಬ್ಸಿಡಿ ರಹಿತ ಎಲ್‍ಪಿಜಿ ದರ ಏರಿಕೆ

ಹೊಸದಿಲ್ಲಿ : ಸಬ್ಸಿಡಿ ರಹಿತ ಅಡುಗೆ ಅನಿಲ (ಎಲ್‍ಪಿಜಿ) ಬೆಲೆಗಳನ್ನು ಇಂದಿನಿಂದ ಜಾರಿಗೆ ಬರುವಂತೆ ಏರಿಕೆ ಮಾಡಲಾಗಿದೆ. ಪರಿಷ್ಕೃತ ದರಗಳಂತೆ ಸಬ್ಸಿಡಿ ರಹಿತ ಎಲ್‍ಪಿಜಿ ಬೆಲೆ ದಿಲ್ಲಿಯಲ್ಲಿ ಪ್ರತಿ ಸಿಲಿಂಡರ್ ಗೆ ರೂ. 714 ಆದರೆ ಮುಂಬೈಯಲ್ಲಿ ರೂ. 684.50 ಆಗಿದೆ. ಈ ರೀತಿ ದಿಲ್ಲಿ ಹಾಗೂ ಮುಂಬೈಯಲ್ಲಿ ಪ್ರತಿ ಸಿಲಿಂಡರ್ ಬೆಲೆಯಲ್ಲಿ ಕ್ರಮವಾಗಿ ರೂ. 19 ಹಾಗೂ ರೂ. 19.5ರಷ್ಟು ಏರಿಕೆಯಾಗಿದೆ. ಏರಿಕೆಗೆ ಮುನ್ನ ಬೆಲೆಗಳು ಸಿಲಿಂಡರ್‍ಗೆ ಕ್ರಮವಾಗಿ ರೂ. 695 ಹಾಗೂ ರೂ. 665 ಆಗಿತ್ತು.

ಕೊಲ್ಕತ್ತಾ ಹಾಗೂ ಚೆನ್ನೈನಲ್ಲಿ ಬೆಲೆಗಳು ಕ್ರಮವಾಗಿ ರೂ. 21.5 ಹಾಗೂ ರೂ. 20ರಷ್ಟು ಏರಿಕೆಯಾಗಿ ರೂ. 747 ಹಾಗೂ ರೂ. 734 ಆಗಿದೆ.

ಈ  ಎಲ್‍ಪಿಜಿ ದರ ಏರಿಕೆಯಿಂದಾಗಿ ಕಳೆದ ಐದು ತಿಂಗಳಿಂದ ಎಲ್‍ಪಿಜಿ ದರಗಳು ಸತತ ಏರಿಕೆಯಾದಂತಾಗಿದೆ.

Please follow and like us:
error