ಸನಾತನ ಪ್ರಗತಿಪರ -ಬಸವಣ್ಣನವರಿಗೆ ಮಾಡಿದ ದೊಡ್ಡ ಅವಮಾನ : ಮರುಸೃಷ್ಟಿ ಜಾಹೀರಾತಿಗೆ ತೀವ್ರ ಆಕ್ರೋಶ

ಬೆಂಗಳೂರು : ಇಂದು ಬಸವಕಲ್ಯಾಣದಲ್ಲಿ ನಡೆಯುತ್ತಿರುವ ನೂತನ ಅನುಭವ ಮಂಟಪಕ್ಕೆ ಭೂಮಿ ಪೂಜೆ ಕಾರ್ಯಕ್ರಮದ ಜಾಹೀರಾತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿವಿಧ ಗಣ್ಯರು, ಶರಣರು, ಶರಣ ಪರಂಪರೆಯವರು, ಪ್ರಗತಿಪರರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಹರಿಹಾಯ್ದಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜನತೆ  ಸನಾತನ ಪ್ರಗತಿಪರ  -ಬಸವಣ್ಣನವರಿಗೆ ಮಾಡಿದ ದೊಡ್ಡ ಅವಮಾನ ಎಂದು ಹೇಳಿದ್ದಾರೆ.

ಹೋರಾಟಗಾರ ಬಸೂ –  ಸನಾತನ ಪರಂಪರೆಯ ವಿರುದ್ದ ಹೋರಾಡಿದ ಬಸವಣ್ಣ  ಮಠಾದೀಶರ  ಸ್ಥಾವರ ಪ್ರೇಮ ಮತ್ತು  ಅವಕಾಶವಾದಿ ಗುಣಗಳಿಂದಾಗಿ  ಸನಾತನ ಪ್ರಗತಿಪರ ಪುನರುತ್ಥಾನ ಪಡೆಯುತ್ತಿದ್ಧಾನೆ. ಪ್ರಗತಿಪರ ಎನ್ನುವುದು ಸನಾತನದ ವಿರುದ್ದ ಪದ.  ಜಾಹೀರಾತು ತಯಾರಕರಿಗೆ ಅಷ್ಟೂ ಪರಿಜ್ಞಾನ ಬೇಡವೆ?  ಬಸವ ತತ್ವ ವಿರೋಧಿ ಮಠಾಧಿಶರಿಂದ  ನಮ್ಮ ಕಾಲದಲ್ಲಿ ಬಸವಣ್ಣ ಎಲ್ಲಿ ತಲುಪುವನೋ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಉಮೇಶ ಕಬ್ಬಾಳು ಎನ್ನುವವರು – ಬಸವಣ್ಣ ಕಟ್ಟಿದ್ದು ಅನುಭವ ಮಂಟಪ  ಯಡಿಯೂರಪ್ಪ ಮತ್ತು ಮೋದಿ ಕಟ್ಟುತ್ತಿದ್ದಾರೆ ಸಾನಾತನ ಕೇಸರಿ  ಮಂಟಪ ಲಿಂಗಾಯಿತರೆ ನಿಮಗಿದು ಸರಿ ಅನ್ನಿಸುತ್ತ ಎಂದು ಪ್ರಶ್ನೆ ಮಾಡಿದ್ದಾರೆ.

ಸಿ.ಜಿ.ಪಾಟೀಲರು  ಬಸವಣ್ಣನವರ ಸನಾತನ  ಪ್ರಗತಿಪರ ಚಿಂತನೆಯ  ಮರಸೃಷ್ಟಿ ಮಾಡಲಿಲ್ಲ. ಸನಾತನ ಪರಂಪರೆಯ ಚಿಂತನೆಗಳನ್ನು  ಧ್ವಂಸಗೊಳಿಸಿ ಲಿಂಗಾಯತ ಧರ್ಮವನ್ನು ಸ್ಥಾಪನೆ  ಮಾಡಿದರು ಎಂದಿದ್ದಾರೆ.

ಅಂಗದ ಮೇಲಿನ
ಲಿಂಗ ಸತ್ತು ನಾರುವಾಗ
ಶರಣರ ಸಂಗ ಎಂಬುದು
ಭಂಗವಾಗದೆ?

ಜಂಗಮವ ಜರಿದು ಜಡ ಸನಾತನವ
ದಬ್ಬಿದೊಡೆ ಶರಣರೆಂಬ ನಿಮ್ಮ
ಶಿರ ಹೋಳಾದೀತು
ಒರೆಯೊಳಗಿನ ಕತ್ತಿಯೇ
ಒಡೆಯನ ಎದೆ ಇರಿದಂತೆ
ಇರಿಯುವ ಖೂಳರೇ ಕಾಣುತಿಹರು

ಕೂಡಲಸಂಗನ ಬಗೆದು
ಹಾರುವರ ಕೂಟವ ನಡೆಸಿದೊಡೆ
ನಿಮ್ಮನೆಂತು ಮೆಚ್ಚನು
ನೆಚ್ಚನು…..
– N.Ravikumar telex

Please follow and like us:
error