ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’ ಬಗ್ಗೆ ಸರಕಾರ ಸ್ಪಷ್ಟನೆ ನೀಡಲಿ: ಎಸ್.ಎಂ.ಜಾಮದಾರ್

ಬೆಂಗಳೂರು  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಸರಕಾರದ ವತಿಯಿಂದ ಎಲ್ಲ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಜಾಹೀರಾತಿನ ಮೊದಲ ಸಾಲಿನಲ್ಲಿರುವ ‘ಸನಾತನ ಪ್ರಗತಿಪರ ಚಿಂತನೆಯ ಮರು ಸೃಷ್ಟಿ’ ವಾಕ್ಯ ವಿಚಿತ್ರವಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ್ ತಿಳಿಸಿದ್ದಾರೆ.

 

‘ , ಬಸವಣ್ಣ, ನೂರಾರು ಶರಣರು ಅನುಭವ ಮಂಟಪವನ್ನು ಸ್ಥಾಪಿಸಿ ಸನಾತನ ಸಂಸ್ಕೃತಿಯ ಮೂಲ ತತ್ವಗಳಿಗೆ ವಿರುದ್ಧವಾದ ಕೆಲಸ ಮಾಡಿದರು. ಆ ಮೂಲಕ ಕ್ರಾಂತಿಕಾರಿ ಬದಲಾವಣೆ ತರಲು ಅನುಭವ ಮಂಟಪ ಪ್ರಾರಂಭಿಸಿದ್ದು, ನಿರ್ಮಾಣ ಮಾಡಿದ್ದು ಎಂದರು.

 

ಸರಕಾರದ ಜಾಹೀರಾತಿನಲ್ಲಿ ಸನಾತನ ಚಿಂತನೆಯನ್ನು ಅನುಭವ ಮಂಪಟದ ಮೂಲಕ ಮತ್ತೆ ಮರುಸೃಷ್ಟಿ ಮಾಡುವುದಾಗಿ ಹೇಳಲಾಗಿದೆ. ಯಾವುದರ ಮರುಸೃಷ್ಟಿ? ಬಸವೇಶ್ವರರು ಬೋಧಿಸಿದ ತತ್ವಗಳ ಮರುಸೃಷ್ಟಿಯೇ? ಅಥವಾ ಸನಾತನ ಪರಂಪರೆಯ ಮರುಸೃಷ್ಟಿಯೆ? ಎಂಬುದರ ಬಗ್ಗೆ ಸರಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಅವರು, ಸನಾತನ ಸಂಸ್ಕೃತಿಯನ್ನು ಬಸವಣ್ಣನ ಅನುಭವ ಮಂಟಪದ ಮೂಲಕ ಮತ್ತೆ ಮರು ಸೃಷ್ಟಿ ಮಾಡುತ್ತಾರೆ ಅಂದರೆ ಅದು ಪೂರ್ವ, ಪಶ್ಚಿಮವನ್ನು ಒಂದು ಮಾಡಿದಂತೆ ಎಂದರು.

ಈ ಜಾಹೀರಾತಿನಲ್ಲಿರುವ ವಾಕ್ಯವನ್ನು ಬರೆದ ವ್ಯಕ್ತಿಯಾಗಲಿ, ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ವಾರ್ತಾ ಇಲಾಖೆಯಾಗಲಿ ಅಥವಾ ಅದನ್ನು ಪ್ರಕಟಿಸಿದ ಪತ್ರಿಕೆಗಳಾಗಿ ಯಾರೊಬ್ಬರೂ ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ನಾವು ಅದನ್ನು ಖಂಡಿಸುತ್ತೇವೆ ಎಂದು ಜಾಮದಾರ್ ಹೇಳಿದರು.

ಟೆಂಡರ್ ಆಗದೆ ಅಡಿಗಲ್ಲು ಸಮಾರಂಭ ಸರಿಯಲ್ಲ: ಸರಕಾರದ ವತಿಯಿಂದ ಯಾವುದೇ ಕೆಲಸಕ್ಕೆ ಅಡಿಗಲ್ಲು ಹಾಕುವ ಪೂರ್ವದಲ್ಲಿ ಆ ಕಾಮಗಾರಿಗೆ ಟೆಂಡರ್ ಆಗಿ, ಸರಕಾರದ ಒಪ್ಪಿಗೆ ಸಿಕ್ಕಿರಬೇಕು. ಹಣಕಾಸಿನ ವ್ಯವಸ್ಥೆ ಆಗಿರಬೇಕು. ಟೆಂಡರ್ ಆಗದೆ, ಕಾಮಗಾರಿಗೆ ಒಪ್ಪಿಗೆಯೂ ಸಿಗದೆ ಇವತ್ತು ಅನುಭವ ಮಂಟಪ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿದೆ ಎಂದು ಅವರು ಟೀಕಿಸಿದರು.

Please follow and like us:
error