ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ. ಸಾಲ: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ, ಮೇ 13: ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಉತ್ತೇಜನ ಪ್ಯಾಕೇಜ್‌ಗೆ ಸಂಬಂಧಿಸಿ ಇಂದು ವಿವರಣೆ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ. ಸಾಲ ನೀಡಲಾಗುವುದು. ಇದರಿಂದ 45 ಲಕ್ಷ ಸಣ್ಣ ಕೈಗಾರಿಕೆಗಳಿಗೆ ಲಾಭವಾಗಲಿದೆ ಎಂದರು.

ಅಕ್ಟೋಬರ್ 31ರ ತನಕ ಸಣ್ಣ ಕೈಗಾರಿಕೆಗಳು ಸಾಲ ಪಡೆಯಬಹುದು. ಬ್ಯಾಂಕ್‌ಗಳು ನೀಡುವ ಸಾಲಕ್ಕೆ ಕೇಂದ್ರ ಸರಕಾರವೇ ಗ್ಯಾರಂಟಿ ನೀಡಲಿದೆ. 25ರಿಂದ 100 ಕೋ.ರೂ. ವ್ಯವಹಾರ ಇರುವ ಕೈಗಾರಿಕೆಗಳಿಗೆ ಇದರಿಂದ ಅನುಕೂಲವಾಗಲಿದೆ. ಸಾಲ ಮರು ಪಾವತಿಗೆ 4 ವರ್ಷದವರೆಗೆ ಕಾಲಾವಕಾಶವಿದೆ. ಸಾಲಕ್ಕೆ ಮೊದಲ 12 ತಿಂಗಳು ಮರು ಪಾವತಿಯ ಅಗತ್ಯವಿಲ್ಲ. ಸಣ್ಣ ಕೈಗಾರಿಕೆಗಳಿಗೆ ಸಂಬಳ ಪಾವತಿಗೆ ಹಣ ಅವಶ್ಯವಿದ್ದರೆ ಸಾಲ ನೀಡಲಾಗುವುದು ಎಂದು ನಿರ್ಮಲಾ ತಿಳಿಸಿದರು.

ಸುದ್ದಿಗೋಷ್ಠಿಯ ಮುಖ್ಯಾಂಶಗಳು
►ಆತ್ಮ ನಿರ್ಭರ್ ಭಾರತ್ ಅಭಿಯಾನ ಉಪಕ್ರಮ ಭಾರತ ಸ್ವಾವಲಂಬಿಯಾಗಲು ನೆರವಾಗಲಿದೆ
►ಸ್ಥಳೀಯ ಬ್ರಾಂಡ್‌ನ್ನು ಜಾಗತಿಕವಾಗಿ ಬೆಳೆಸುತ್ತೇವೆ
►ಪ್ರಧಾನಿ ಹೇಳಿದಂತೆ ದೇಶ ಕಟ್ಟಲು ಕ್ರಮ ಕೈಗೊಂಡಿದ್ದೇವೆ
►ಕೃಷಿ ಸಿಂಚಾಯಿ, ಕಿಸಾನ್ ಸಮ್ಮಾನ್ ಯೋಜನೆ ಜಾರಿ
►ಜಿಎಸ್‌ಟಿ ಜಾರಿ, ವಿದ್ಯುತ್ ವಲಯದಲ್ಲಿ ಭಾರೀ ಬದಲಾವಣೆ

►ಲಾಕ್‌ಡೌನ್ ವೇಳೆಯೂ ನೇರ ಹಣ ವರ್ಗಾವಣೆ ಲಾಕ್‌ಡೌನ್ ಬಳಿಕ ಪಿಎಂ ಗರೀಬ್ ಕಲ್ಯಾಣ್ ಯೋಜನೆ ಘೋಷಣೆ
►52 ಸಾವಿರ ಕೋಟಿ ರೂ. ಹಣವನ್ನು ಜನಧನ ಖಾತೆಗೆ ವರ್ಗಾಯಿಸಲಾಗಿದೆ. 41 ಕೋಟಿ ಜನಧನ ಖಾತೆಗೆ ಹಣ ವರ್ಗಾಯಿಸಲಾಗಿದೆ.

Please follow and like us:
error