ಸಣ್ಣನೀರಾವರಿ ಇಲಾಖೆ ಇಂಜನೀಯರ್ ಅನೈತಿಕ ಸಂಬಂಧ : ಮಹಿಳೆಯರ ಮಧ್ಯೆ ಮಾರಾಮಾರಿ

 

Kannadanet  ಕೊಪ್ಪಳ  :  ಪರನಾರಿ ಜೊತೆ ನನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಸಣ್ಣನೀರಾವರಿ ಇಲಾಖೆಯ ಅಧಿಕಾರಿಯ ಪತ್ನಿ ರಂಪಾಟ ನಡೆಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

 

ನಗರದ ಕುಷ್ಟಗಿ ಸರ್ಕಲ್ ಬಳಿಯ ಸಣ್ಣನೀರಾವರಿ ಇಲಾಖೆಯಅ.ಧಿಕಾರಿ ವಿನೋದ್ ಕುಮಾರ್ ಗುಪ್ತಾ ಪರ ಸ್ತ್ರೀಯೊಂದಿಗೆ ಮನೆಯಲ್ಲಿದ್ದಾಗ ಗುಪ್ತಾಳ ಪತ್ನಿ ಹಾಗೂ ಮಕ್ಕಳು ದಾಳಿ ಮಾಡಿದ್ದಾರೆ. ಇದೇ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಬಿದ್ದ ಪರನಾರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗುಪ್ತಾಳ ಪತ್ನಿ ಹಾಗೂ ಅನೈತಿಕ ಸಂಬಂಧ ಹೊಂದಿದ ಮಹಿಳೆ ಮನೆಯೊಳಗೆ ಕೈ ಕೈ ಮಿಲಾಯಿಸಿದ್ದು, ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

 

ಕೂದಲು ಹಿಡಿದು ಕಿತ್ತಾಡಿಕೊಳ್ತಿರೋ ಈ ಮಹಿಳೆಯರಲ್ಲಿ ಹಳದಿ ಬಟ್ಟೆ ತೊಟ್ಟಿರೋ ಈ ಮಹಿಳೆ, ಸಣ್ಣ ನೀರಾವರಿ ಇಲಾಖೆಯ ಕೊಪ್ಪಳ ಉಪ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿನೋದ ಕುಮಾರ ಗುಪ್ತಾರ ಧರ್ಮ ಪತ್ನಿ. ತನ್ನ ಗಂಡನ ಮೇಲೆ ಸಂಶಯಗೊಂಡ ಈಕೆ ಇಂದು ಕೊಪ್ಪಳದ ಯಶೋದ ಆಸ್ಪತ್ರೆ ಸಮೀಪದ ಕಚೇರಿ ಕಂ ಮನೆಗೆ ತಮ್ಮ ಮಕ್ಕಳ ಸಮೇತ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲು ತನ್ನ ಪತಿ ದೇವರು ಪರ ಸ್ತ್ರೀ ಜೊತೆ ಇರೋದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿರೋ ಇವರು ಆ ಮಹಿಳೆಗೆ ಗೂಸಾ ನೀಡಿದ್ದಾರೆ. ಈ ಮೂಲಕ ಸಣ್ಣ ನೀರಾವರಿ ಇಲಾಖೆ ಹಿರಿಯ ಅಧಿಕಾರಿ ಕಳ್ಳಾಟ ಬಟಾ ಬಯಲು ಮಾಡಿದ್ದಾರೆ.

ಘಟನೆ ವಿಷಯ ತಿಳಿ

ದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣ ಇದೀಗ ಕೊಪ್ಪಳ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

Please follow and like us:
error