ಸಚಿವ ಈಶ್ವರಪ್ಪರ ಮನೆಯಲ್ಲಿ ಬೆಂಕಿ ಅವಘಡ: ಅಪಾಯದಿಂದ ಪಾರಾದ ಸಚಿವರು, ಪತ್ನಿ

ಬೆಂಗಳೂರು,  : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಸಚಿವರು ಮತ್ತು ಅವರ ಪತ್ನಿ ಪ್ರಾಣಾಪಾಯದಿಂದ ಪಾರಾದ ಘಟನೆ ಕಳೆದ ರಾತ್ರಿ ಸಂಭವಿಸಿದೆ.

ನಗರದ ಗಾಂಧಿ ಭವನದ ಸಮೀಪದ ಕುಮಾರ ಪಾರ್ಕನ 2ರಲ್ಲಿರುವ ಸಚಿವರ ವಸತಿ ಗೃಹದಲ್ಲಿ ರಾತ್ರಿ 10:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಸಚಿವರು ಮಲಗುವ ಕೋಣೆ ಸಂಪೂರ್ಣ ಬೆಂಕಿಯಿಂದ ಸಂಪೂರ್ಣ ಹಾನಿಗೊಂಡಿದೆ. ಬೆಡ್, ಎಸಿ, ಬಟ್ಟೆಗಳು, ಕಬೋರ್ಡ್, ಸೋಫಾ, ಕರ್ಟನ್ ಎಲ್ಲವೂ ಸುಟ್ಟು ಭಸ್ಮವಾಗಿವೆ.

ಸಚಿವ ಈಶ್ವರಪ್ಪ ಮಲಗಲು ಸಿದ್ಧರಾಗಿ ಎಸಿ ಸ್ವಿಚ್ ಹಾಕುತ್ತಿದ್ದಂತೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ವೇಳೆ ಸಚಿವರ ಪತ್ನಿ ಮಲಗಿದ್ದರೆನ್ನಲಾಗಿದೆ. ಕೂಡಲೇ ಸಚಿವರು ಅವರನ್ನು ಎಬ್ಬಿಸಿ ಕೋಣೆಯಿಂದ ಹೊರಬರುತ್ತಿದ್ದಂತೆ ಬೆಂಕಿ ಇಡೀ ಕೋಣೆಯನ್ನು ಆವರಿಸಿದೆ. ತಕ್ಷಣ ಸಚಿವರು ಅಳಿಯ ಸಂತೋಷ್‌ಗೆ ವಿಷಯ ತಿಳಿಸಿದ್ದು, ಅವರು ಅಗ್ನಿಶಾಮಕ ದಳವನ್ನು ಕರೆಸಿದ್ದಾರೆ. ಬಳಿಕ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದರು. ಆದರೆ ಅಷ್ಟರಲ್ಲಿ ಕೋಣೆ ಬೆಂಕಿಗಾಹುತಿಯಾಗಿತ್ತು.

Please follow and like us:
error