ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ದಿಗೆ ಸಹಕರಿಸಿ – ಮಲ್ಲಿಕಾರ್ಜುನ ಭೀಮಣ್ಣ

ಕೊಪ್ಪಳ, ೧೫- ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ನಿಮ್ಮ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ದಿಗೆ ಸಹಕರಿಸಿ ಎಂದು ಕಿನ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಮಲ್ಲಿಕಾರ್ಜುನ ಕಿ. ಭೀಮಣ್ಣ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ೫೯ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ರೈತರು ಸಹಕಾರದಿಂದ ನಮ್ಮ ಸಂಘ ರಾಜ್ಯಮಟ್ಟದ ಉತ್ತಮ ಕೃಷಿ ಸಹಕಾರ ಸಂಘಗಳಲ್ಲಿ ಒಂದಾಗಿದೆ. ರೈತರ ಮತ್ತು ಗ್ರಾಹಕರ ಸಹ ಕಾರದಿಂದ ಇದು ಸಾಧ್ಯ ವಾಗಿದ್ದು ಹೆಚ್ಚಿನ ಸಹಕಾರದ ನಿರಿಕ್ಷೆ ಇದೇ ಎಂದರು.
ಗ್ರಾಹಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನೇಕಾರರಿಗೆ ಸಬ್‌ಸಿಡಿ ಸಾಲ ನೀಡಲು ನಮ್ಮಲ್ಲಿ ಅವಕಾಶವಿಲ್ಲಿ ಸರ್ಕಾರ ಕಾನುನು ತಿದ್ದುಪಡಿ ಮಾಡಿ ಅವಕಾಶ ನೀಡಿದರೆ ಕೊಡಬಹುದು. ಸಾಮಾನ್ಯ ಬಡ್ಡಿ ಸಾಲ ಎಲ್ಲರಿಗೂ ಸಿಗಲಿದೆ ಎಂದರು.
ನಿರ್ದೇಶಕ ಅಮರೇಶ ಉಪಲಾಪುರ ಮಾತನಾಡಿ ಕೋರೊನ ದಿಂದ ವಿಶ್ವವೇ ತತ್ತರಿಸಿದ್ದು ನಮ್ಮ ಸಂಘಕ್ಕು ತಾಟ್ಟಿದೆ, ಸಲಗಾರರು ಸಕಾಲದಲ್ಲಿ ಮರು ಪಾವತಿ ಮಾಡಿ ಅಭಿವೃದ್ದಿಗೆ ಸಹಕರಿಸಿ ಎಂದರು.
ಈ ಸಂದರ್ಭದಲ್ಲಿ ವೇದಿಕೆಮೇಲೆ ಉಪಾಧ್ಯಕ್ಷ ವಿರು ಪಾಕ್ಷಪ್ಪ ಪಿತಾಮೂರ, ನಿರ್ದೇಶಕರಾದ ವೀರಭದ್ರಪ್ಪ ಗಂಜಿ, ಮಹಾದೇವಯ್ಯ ಹಿರೇಮಠ, ಬಸವರಾಜ ಚಿಲವಾಡಗಿ, ಮಾನೇಶ ಕಳ್ಳಿಮನಿ, ನಿಂಗಪ್ಪಕುಣಿ, ಈರಣ್ಣ ವಾಲ್ಮೀಕಿ, ರವೀಂದ್ರ ನಾಥ ಕೋಲ್ನಾರ, ಮಲ್ಲಮ್ಮ ಕಾರಬಾಳಿ, ಮಾಲಾ ಹಡ ಗಲಿ ಇತರರು ಇದ್ದರು.
ವಾರ್ಷಿಕ ಸಭೆಯಲ್ಲಿ ಸಂಘದ ಸಹಾಯಕ ಮುಖ್ಯ ಕಾರ್ಯ ನಿರ್ವಾಹಕ ಅಧಿ ಕಾರಿ ಸತೀಶ ಕುಲಕರ್ಣಿ ವರದಿ ವಾಚನ ಮಾಡಿದರು, ಕಾರ್ಯಕ್ರಮವನ್ನು ಭೀಮಪ್ಪ ಪರಗಿ ನಿರೂಪಿಸಿ ವಂದಿಸಿ ದರು.

ವಾರ್ಷಿಕ ಸಭೆಯಲ್ಲಿ ಸಂಘದ ಸಹಾಯಕ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸತೀಶ ಕುಲಕರ್ಣಿ ವರದಿ ವಾಚನ ಮಾಡಿದರು, ಕಾರ್ಯಕ್ರಮವನ್ನು ಭೀಮಪ್ಪ ಪರಗಿ ನಿರೂಪಿಸಿ ವಂದಿಸಿದರು.

Please follow and like us:
error