ಸಂಸತ್ ಮೇಲೆ ದಾಳಿ ನಡೆಸಲು ಉಗ್ರರನ್ನು ಕಳುಹಿಸುವಂತೆ ದವೀಂದರ್ ಸಿಂಗ್ ಗೆ ಹೇಳಿದ್ದು ಯಾರು?

ಹಿಜ್ಬುಲ್ ಉಗ್ರರ ಜೊತೆ ಸಿಕ್ಕಿಬಿದ್ದ ಡಿವೈಎಸ್ಪಿ ದವೀಂದರ್ ಸಿಂಗ್ ಸಂಸತ್ ಮೇಲೆ ದಾಳಿ ನಡೆಸಿದ ಉಗ್ರರಿಗೆ ಆಶ್ರಯವೊದಗಿಸಲು ತನ್ನನ್ನು ಬಲವಂತಪಡಿಸಿದ್ದರು ಎನ್ನುವ ಆರೋಪವು ದವೀಂದರ್ ಸಿಂಗ್ ಬಂಧನದೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಅಫ್ಝಲ್ ಸಂದರ್ಶನ ನಡೆಸಿದ್ದ ಹಿರಿಯ ಪತ್ರಕರ್ತ ವಿನೋದ್ ಜೋಸ್ ಅವರ ಫೇಸ್ ಬುಕ್ ಪೋಸ್ಟ್ ನ ಸಾರಾಂಶ ಈ ಕೆಳಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿಯಾಗಿದ್ದ ದವೀಂದರ್ ಸಿಂಗ್ ಶಾಮೀಲಾತಿ ಕುರಿತಾದ ಆಘಾತಕಾರಿ ಮಾಹಿತಿಯನ್ನು ಅಫ್ಝಲ್ ಗುರು ಮೊದಲ ಬಾರಿ ಸುಪ್ರೀಂ ಕೋರ್ಟ್ ವಕೀಲ ಸುಶೀಲ್ ಜೋಷಿಗೆ 2004ರಲ್ಲಿ ಬರೆದ ಪತ್ರದಲ್ಲಿ ನೀಡಿದ್ದ. ಭಾರತದ ಸಂಸತ್ತಿನ ಮೇಲೆ 2001ರಲ್ಲಿ ದಾಳಿ ನಡೆಸಿದ ಉಗ್ರರಾಗಿದ್ದ ಐವರು ಕಾಶ್ಮೀರೇತರ ಭಾಷಿಕ ವ್ಯಕ್ತಿಗಳನ್ನು  ದಿಲ್ಲಿಗೆ ಕರೆತರುವ ಜವಾಬ್ದಾರಿಯನ್ನು ದವೀಂದರ್ ಸಿಂಗ್ ತನಗೆ ವಹಿಸಿದ್ದನೆಂದು ಅಫ್ಝಲ್ ಹೇಳಿದ್ದ. ಎರಡು ವರ್ಷಗಳ ನಂತರ ನಾನು ಆತನ ಸಂದರ್ಶನವನ್ನು ತಿಹಾರ್ ಜೈಲಿನಲ್ಲಿ ನಡೆಸಿದ ಸಂದರ್ಭ ಅಫ್ಝಲ್ ಅದನ್ನೇ ಪುನರುಚ್ಛರಿಸಿದ್ದ. ಈಗ ಅಫ್ಝಲ್ ನನ್ನು ಗಲ್ಲಿಗೇರಿಸಿದ ಹಲವು ವರ್ಷಗಳ ನಂತರ ದವೀಂದರ್ ಸಿಂಗ್ ನನ್ನು ಹಿಜ್ಬುಲ್ ಮುಜಾಹಿದ್ದೀನ್‍ ನ ನಂ.2 ಎಂದೇ ತಿಳಿಯಲಾದ  ಕಮಾಂಡರ್ ಸೈಯದ್ ಮುಶ್ತಾಖ್ ಜತೆ ದಿಲ್ಲಿಗೆ ತೆರಳುತ್ತಿದ್ದಾಗ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಲಾಗಿದೆ.

ಭಾರತದ ಸಂಸತ್ತಿನ ಮೇಲಿನ ದಾಳಿಯನ್ನು ದವೀಂದರ್ ಸಿಂಗ್‍ ನಂತಹ ಅಧಿಕಾರಿಗಳ ಸಹಾಯದಿಂದ ಮಾಡಲಾಗಿತ್ತೆಂದು ಹದಿನಾರು ವರ್ಷಗಳ ಹಿಂದೆ ಅಫ್ಝಲ್ ಬಹಿರಂಗಪಡಿಸಿದ ವಿಚಾರಗಳನ್ನು ಯಾರಿಗೂ ಕೇಳುವ ವ್ಯವಧಾನವಿರಲಿಲ್ಲ. ಈಗ ದವೀಂದರ್ ಸಿಂಗ್ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಗಳ ಜತೆಗೆ ಪತ್ತೆಯಾಗಿರುವುದರಿಂದ ಹಲವಾರು ಉಗ್ರ ದಾಳಿಗಳೆಂದು ತಿಳಿಯಲಾದ ಪ್ರಕರಣಗಳನ್ನು ಮತ್ತೊಮ್ಮೆ ನೋಡುವ ಪರಿಸ್ಥಿತಿ ಎದುರಾಗಿದೆ. ಈ ದಾಳಿಗಳನ್ನು ‘ಉಗ್ರ’ ದಾಳಿಗಳೆಂದು ಸಂಗ್ರಹಿಸಲಾದ ಪುರಾವೆಗಳ ಆಧಾರದಲ್ಲಿ ಹೇಳಬಹುದೇ ಅಥವಾ ಅವುಗಳು ರಾಜಕೀಯಕ್ಕಾಗಿ ಅಪೂರ್ಣ ಹಾಗೂ ಅನುಕೂಲಕರ ತನಿಖೆಗಳ ಆಧಾರದಲ್ಲಿ ನಿಂತಿವೆಯೇ ?, ಹಾಗೂ ಇಂತಹ ಕೃತ್ಯಗಳಿಂದ ರಾಜಕೀಯ ಲಾಭ ಪಡೆಯುವವರ್ಯಾರು?

ಎರಡನೇ ವಿಚಾರವೆಂದರೆ 2001ರಿಂದ 2020ರ ತನಕ ದವೀಂದರ್ ಸಿಂಗ್‍ ನ  ನಡತೆ ಹಾಗೂ ಉಗ್ರ ಸಂಘಟನೆಗಳ ಜತೆಗೆ ಆತನಿಗಿರುವ ನಂಟು ಸ್ಪಷ್ಟವಾಗಿರುವಾಗ ದೇಶವು ಪ್ರತಿ ವರ್ಷದಿಂದ ವರ್ಷಕ್ಕೆ ತೆರಿಗೆದಾರರ ದೊಡ್ಡ ಮೊತ್ತವನ್ನೇ ವ್ಯಯಿಸುವ ರಹಸ್ಯ ಕಾರ್ಯಾಚರಣೆಗಳ ಹಿಂದಿನ ತರ್ಕದ ಕುರಿತಂತೆ ಪ್ರತಿಯೊಬ್ಬ ಭಾರತೀಯ ಪ್ರಶ್ನಿಸುವಂತಾಗಿದೆ. ರಹಸ್ಯ ಕಾರ್ಯಾಚರಣೆಗಳ ರಾಜಕೀಯ ಹಾಗೂ ಆರ್ಥಿಕ ಹೊಣೆಗಾರಿಕೆಯೇನು?

ಎಲ್ಲಕ್ಕಿಂತ ಮಿಗಿಲಾಗಿ ಯಾವ ಹಂತಗಳಲ್ಲಿ ಇಂತಹ ಕ್ರಮಗಳಿಗೆ ಅನುಮೋದನೆ ದೊರೆಯುತ್ತದೆ ?. ಉದಾಹರಣೆಗೆ 2001ರಲ್ಲಿ ದಿಲ್ಲಿಗೆ ಅಫ್ಝಲ್ ಜತೆ ಐದು ಮಂದಿ ಉಗ್ರರನ್ನು ಕಳುಹಿಸಲು ದವೀಂದರ್ ಸಿಂಗ್‍ ಗೆ ಯಾರು ಹೇಳಿದ್ದರು ಹಾಗೂ ಕಾಶ್ಮೀರದಿಂದ ಜಮ್ಮು (ಅಥವಾ ದಿಲ್ಲಿ)ಗೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್‍ ಗಳೊಂದಿಗೆ 2020ರಲ್ಲಿ ತೆರಳಲು ದವೀಂದರ್ ಗೆ ಯಾರು ಹೇಳಿದ್ದರು ?, ಅದರ ಜತೆಗೆ ಕೇಳಬೇಕಾದ ಪ್ರಶ್ನೆಯಿದೆ. ದವೀಂದರ್ ಸಿಂಗ್ ದೀರ್ಘ ಕಾಲ ಪ್ರಯೋಜನಕಾರಿಯಾಗಿದ್ದಲ್ಲಿ  ದಿಢೀರನೇ ಆತನನ್ನು ಜೈಲಿಗೆ ತಳ್ಳುವುದರಲ್ಲಿ ಆತನ ಹಿಂದೆ ಇದ್ದ ಅಧಿಕಾರಿಗಳು ಹಾಗೂ ನಾಯಕರಿಗೆ ಏನು ಲಾಭವಾಗುವುದು?.

ಅಂತರ್-ಏಜನ್ಸಿ ವೈಷಮ್ಯದಿಂದ ಅಂತಿಮವಾಗಿ ದವೀಂದರ್ ಸಿಂಗ್ ಹಿಜ್ಬುಲ್ ಕಮಾಂಡರ್ ಗಳ ಜತೆಗಿದ್ದಾಗ ಆತನ ಬಂಧನವಾಯಿತು. ಹಾಗಿದ್ದಲ್ಲಿ ಎರಡೂ ಏಜನ್ಸಿಗಳ ಸೂಪರ್ ಬಾಸ್‍ಗಳು ನಾವು ಮಾತನಾಡುತ್ತಿರುವಂತೆಯೇ ಇದರಿಂದ ಹೊರಬರುವ ಸುಲಭ ಮಾರ್ಗವನ್ನು ಕಂಡಿರಬಹುದು. ದೊಡ್ಡ ಯಂತ್ರದಲ್ಲಿ ಕೇವಲ ಒಂದು ಸಣ್ಣ ಭಾಗವಾಗಿರುವ ದವೀಂದರ್ ಸಿಂಗ್ ಅವರಂತಹವರ ಹೊರತಾಗಿ ರಹಸ್ಯ ಕಾರ್ಯಾಚರಣೆಗಳಿಗೆ ಸೂಪರ್ ಬಾಸ್‍ ಗಳು ಅನುದಾನ ಹಾಗೂ ಅಧಿಕಾರ ನೀಡುತ್ತಾರೆ. ಆದುದರಿಂದ ನಮ್ಮ ಗಮನ ಈ ನಿಟ್ಟಿನಲ್ಲಿ ಹರಿಯಬೇಕು.

ದೀರ್ಘ ಸಮಯದ ಬಳಿಕ ಭಾರತದ ರಹಸ್ಯ ಕಾರ್ಯಾಚರಣೆಗಳ ವಿಚಾರ ಮತ್ತೆ ಚರ್ಚೆಗೆ ಬರುವಂತೆ ದವೀಂದರ್ ಸಿಂಗ್ ಪ್ರಕರಣ ಮಾಡಿದೆ. ನನಗೆ ಸರಿಯಾಗಿ ನೆನಪಿದ್ದರೆ ಐ.ಕೆ. ಗುಜ್ರಾಲ್ ಪ್ರಧಾನಿಯಾಗಿದ್ದ ವೇಳೆ ರಹಸ್ಯ ಕಾರ್ಯಾಚರಣೆಗಳಿಗೆ ಅನುಮತಿ ನೀಡುವುದನ್ನು ನಿಲ್ಲಿಸಲು ನಿರ್ಧರಿಸಲಾಗಿತ್ತು. ಆದರೆ 1998ರಲ್ಲಿ ವಾಜಪೇಯಿ ಸರಕಾರ ಅಧಿಕಾರಕ್ಕೆ ಬರುವ ತನಕ ಮಾತ್ರ ಈ ಆದೇಶ ಊರ್ಜಿತದಲ್ಲಿತ್ತು. ಸರಕಾರದ ಜನರ ಹೊರತಾಗಿ ಸರಕಾರೇತರ ಗಣ್ಯರು ಹಾಗೂ ಇತರರ ಪಾತ್ರಗಳತ್ತವೂ ಗಮನ ಹರಿಸಬೇಕು. ಎಲ್ಲಾ ಪಾತ್ರಧಾರಿಗಳ ಸಹಕಾರವಿಲ್ಲದೆ ರಹಸ್ಯ ಕಾರ್ಯಾಚರಣೆಗಳು ಪೂರ್ಣಗೊಳ್ಳದು.

ಅಫ್ಝಲ್ ಕಥೆಯನ್ನು ಆತನದೇ ದನಿಯಲ್ಲಿ, ಮೊದಲು 2004ರಲ್ಲಿ ಆತ ವಕೀಲ ಸುಶೀಲ್ ಕುಮಾರ್‍ಗೆ ಬರೆದ ಪತ್ರದಲ್ಲಿ ಹಾಗೂ ಎರಡು ವರ್ಷಗಳ ನಂತರ ತಿಹಾರ್ ಒಳಗೆ ಆತ ನನಗೆ ನೀಡಿದ ಸಂದರ್ಶನದ ಮೂಲಕ ತಿಳಿಯಬೇಕು. ಈ  ಸಂದರ್ಶನವನ್ನು ಮೊದಲ ಬಾರಿ ಭಾರತದಲ್ಲೆ ತೆಹಲ್ಕಾ ಮುಖಪುಟ ಲೇಖನವಾಗಿ ಹಾಗೂ ನಂತರ ಕಾರವಾನ್‍ ನಲ್ಲಿ ಆರು ವರ್ಷಗಳ ನಂತರ ಮರುಪ್ರಕಟಗೊಂಡಿತ್ತು. https://caravanmagazine.in/reportage/mulakat-afzal?fbclid=IwAR0qgH9auyeuCj0Bm27Nt58b8SidvviPhdC47wzf4Vyb9nyhdwOAChIwBQw

ಜತೆಗೆ ಅರುಂಧತಿ ಅವರು ಅಫ್ಜಲ್ ಕುರಿತು 2006ರಲ್ಲಿ ಬರೆದ ಅದ್ಭುತ ಲೇಖನವನ್ನೂ ಮಿಸ್ ಮಾಡಿಕೊಳ್ಳಬಾರದು. https://www.outlookindia.com/magazine/story/and-his-life-should-become-extinct/232979?fbclid=IwAR0p_REIqoMdKl55CjO_28vYge-cSOTzAV706M9w3_dvQTj5b9ruhmvMuD4

Please follow and like us:
error