ಸಂವಿಧಾನ ಅಭಿಯಾನದ ಧ್ಯೇಯೋದ್ದೇಶಗಳನ್ನು ನಾವೆಲ್ಲರೂ ಸಾರ್ಥಕ ಪಡಿಸಬೇಕು: ಎ.ವಿ.ಕಣವಿ

ಕೊಪ್ಪಳ ಡಿ. 20 (ಕರ್ನಾಟಕ ವಾರ್ತೆ): ಮಹಿಳಾ ಸುರಕ್ಷತೆ, ಶೈಕ್ಷಣಿಕ ಹಕ್ಕುಗಳು ಮತ್ತು ಕರ್ತವ್ಯಗಳು, ರಾಷ್ಟç ಭಕ್ತಿ, ರಾಷ್ಟಿçÃಯ ಪ್ರಜ್ಞೆ ಬಗ್ಗೆ ಅರಿತುಕೊಂಡು ಸಂವಿಧಾನ ಅಭಿಯಾನದ ಧ್ಯೇಯೋದ್ದೇಶಗಳನ್ನು ನಾವೆಲ್ಲರೂ ಸಾರ್ಥಕ ಪಡಿಸಬೇಕು ಎಂದು ಹಿರಿಯ ವಕೀಲರು ಹಾಗೂ ಸಂವಿಧಾನ ಜಾಗೃತಿ ಅಭಿಯಾನದ ನೋಡಲ್ ಅಧಿಕಾರಿಯಾದ ಎ.ವಿ ಕಣವಿ ಹೇಳಿದರು.
ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಶಿಕ್ಷಣ ಇಲಾಖೆ, ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಭಾರತ ಸಂವಿಧಾನವನ್ನು ಅಂಗೀಕರಿಸಿದ 70ನೇ ವರ್ಷಾಚರಣೆಯ ನೆನಪಿಗಾಗಿ ಭಾರತೀಯ ಸಂವಿಧಾನದ ಅನುಚ್ಚೇದ 51ಎ ರಂತೆ ಪ್ರತಿಪಾದಿಸಿದ ಮೂಲಭೂತ ಕರ್ತವ್ಯಗಳ ಅರಿವು ಕುರಿತು ಕಾನೂನು ಜಾಗೃತಿ ಅಭಿಯಾನ ಹಾಗೂ ಭಾರತೀಯ ಸಂವಿಧಾನದ ಮಹತ್ವ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಂವಿಧಾನ ಸ್ವೀಕರಿಸಿ 70 ವರ್ಷಗಳಾದವು. ಸಂವಿಧಾನ ಮತ್ತು ಅದರ ಇತಿಹಾಸವನ್ನು ವೈಜ್ಞಾನಿಕ ಚಿಂತನೆಗಳಿAದ ಅರ್ಥೈಸಿಕೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತ ಸಹಾಯಕರಾದ ಶಿವಕುಮಾರ ಗೋನಾಳ ಮಾತನಾಡಿ ಜಿಲ್ಲಾದ್ಯಂತ ಸಂವಿಧಾನದ ಮೂಲಭೂತ ಕರ್ತವ್ಯಗಳ ಕುರಿತು ಕಾನೂನು ಜಾಗೃತಿ ಕಾರ್ಯಕ್ರಮವು 2020 ರ ಏಪ್ರಿಲ್ 14 ರವರೆಗೆ ನಡೆಯಲಿದ್ದು, ಈ ಅಭಿಯಾನವು ಸಂವಿಧಾನದ ಮಹತ್ವವನ್ನು ತಿಳಿಸುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಪ್ರಾಚಾರ್ಯರಾದ ಸರಿತಾ ಜಿ ವಹಿಸಿದ್ದರು. ಆನಂದ ಆಶ್ರಿತ ಅವರು ಕಾಯಕ್ರಮ ನಿರೂಪಿಸಿದರು. ದೇವಪ್ಪ ಕೆ. ಸ್ವಾಗತಿಸಿದರು. ಅನಸೂಯ ಜಹಗೀರದಾರ ವಂದಿಸಿದರು. ಶಿಕ್ಷಣ ಸಂಯೋಜಕರಾದ  ಶರಣಪ್ಪ ರಡ್ಡೇರ್, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Please follow and like us:
error