ಷೇರು ಪೇಟೆಯ ಮೇಲೂ ಕೊರೋನ ಎಫೆಕ್ಟ್: ನಿಫ್ಟಿ-ರೂಪಾಯಿ ಮೌಲ್ಯದಲ್ಲಿ ಭಾರೀ ಕುಸಿತ

ಹೊಸದಿಲ್ಲಿ, ಮಾ.12: ಮಾರಣಾಂತಿಕ ಕೊರೋನ ವೈರಸ್ ಸಾಂಕ್ರಾಮಿಕ ರೋಗ ಎಂದು ಘೋಷಿಸಲ್ಪಟ್ಟಿದ್ದಲ್ಲದೆ ಅಮೆರಿಕ ಹಾಗೂ ಯುರೋಪ್‌ನಿಂದ ಭಾರತಕ್ಕೆ ವಿಮಾನ ಯಾನ ಸಂಪೂರ್ಣ ಸ್ಥಗಿತಗೊಳಿಸಿರುವ ಪರಿಣಾಮ ಗುರುವಾರ ಷೇರು ಮಾರುಕಟ್ಟೆಯಲ್ಲಿ ನಿಫ್ಟಿ ಹಾಗೂ ರೂಪಾಯಿ ಮೌಲ್ಯದಲ್ಲಿ ಭಾರೀ ಕುಸಿತವಾಗಿದೆ.

ಬ್ಲೂ ಚಿಫ್ ನಿಫ್ಟಿ 50 ಕಳೆದ ಎರಡು ವರ್ಷಗಳಲ್ಲಿ ಮೊದಲ ಬಾರಿ 10,000ಕ್ಕಿಂತಲೂ ಕಡಿಮೆಯಾಗಿದೆ. ಇಂದಿನ ಮಾರುಕಟ್ಟೆ ವಹಿವಾಟು ಆರಂಭವಾದಾಗಲೇ ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂತ ಶೇ.5.2ರಷ್ಟು ಕುಸಿತಕಂಡಿದ್ದು, 9,916.55ಕ್ಕೆ ತಲುಪಿದ್ದರೆ, ಬೆಂಚ್‌ಮಾರ್ಕ್ ಎಸ್ ಹಾಗೂ ಪಿಬಿಎಸ್‌ಇ ಸೆನ್ಸೆಕ್ಸ್ 1,821.27 ಅಂಕಗಳಿಗೆ ಕುಸಿತ ಕಂಡಿದೆ. ಇವೆಲ್ಲದರ ಪರಿಣಾಮ ಡಾಲರ್ ಎದುರು ರೂಪಾಯಿ ಮೌಲ್ಯವು ಶೇ.08ರಷ್ಟು ಕುಸಿದಿದ್ದು, 74.35ಕ್ಕೆ ಇಳಿದಿದೆ. 2018ರ ಅಕ್ಟೋಬರ್‌ನ ನಂತರ ಭಾರತದ ರೂಪಾಯಿಯು ಡಾಲರ್ ಎದುರು ದಾಖಲಿಸಿದ ಅತ್ಯಂತ ಕಳಪೆ ಸಾಧನೆ ಇದಾಗಿದೆ ಎನ್ನಲಾಗಿದೆ.

Please follow and like us:
error