ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ ಸಿಕ್ಕ ಹಣ,ಚಿನ್ನವೆಷ್ಟು  ಗೊತ್ತಾ ?

ನಿಮಗೆ ಆಶ್ಚರ್ಯವಾಗುತ್ತೆ

ರೂ. 54.95 ಲಕ್ಷ ಹಣ, 175 ಗ್ರಾಂ. ಕಚ್ಚಾ ಬಂಗಾರ ಮತ್ತು 7. ಕೆ.ಜಿ. ಕಚ್ಚಾ ಬೆಳ್ಳಿ
ಕೊಪ್ಪಳ,: ಕೊಪ್ಪಳ ಜಿಲ್ಲೆಯ ಸುಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿಗಳ ಎಣಿಕೆ ಮಾಡಲಾಗಿದ್ದು, ರೂ. 54.95 ಲಕ್ಷ ಹಣ, 175 ಗ್ರಾಂ. ಕಚ್ಚಾ ಬಂಗಾರ ಮತ್ತು 7 ಕೆ.ಜಿ. 400 ಗ್ರಾಂ. ಕಚ್ಚಾ ಬೆಳ್ಳಿ ಬಂದಿದೆ.
ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ  ಹುಲಿಗೆಮ್ಮ  ದೇವಿ ದೇವಸ್ಥಾನದಲ್ಲಿ ಇಡಲಾಗಿರುವ ಹುಂಡಿಗಳನ್ನು  ಬುಧವಾರ (ಡಿ.16) ತೆರೆದು ಎಣಿಕೆ ಮಾಡಲಾಗಿದ್ದು, ಹುಂಡಿಗಳಲ್ಲಿ ರೂ. 54,95,660/- ಹಣ, ಕಚ್ಚಾ ಬಂಗಾರ 175 ಗ್ರಾಂ ಮತ್ತು ಕಚ್ಚಾ ಬೆಳ್ಳಿ 7 ಕೆ.ಜಿ. 400 ಗ್ರಾಂ.ಗಳು ಬಂದಿದೆ ಎಂದು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಗಳು ತಿಳಿಸಿದ್ದಾರೆ.

Please follow and like us:
error