ಶ್ರೀ ಸಂಸ್ಥಾನ ಗವಿಮಠದ ಸಂಕಲ್ಪದಂತೆ ಲಕ್ಷವೃಕ್ಷೋತ್ಸವ ಕಾರ್ಯಕ್ರಮದಡಿಯಲ್ಲಿ ಆನ್ಲೈನ್ ನಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಈ ನಾಡಿನ ಜನರ ಭಕ್ತಿಯ ನಿತ್ಯೋತ್ಸವ. ಜಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ ಪ್ರತಿವ? ವಿನೂತನ ಕಾರ್ಯಯೋಜನೆ ರೂಪಿಸಿ ಅದನ್ನು ಅನು?ನಗೂಳಿಸುತ್ತಿರುವದು ತಮಗೆಲ್ಲ ವೇದ್ಯವಾಗಿದೆ. ಬಾಲ್ಯ ವಿವಾಹ, ರಕ್ತದಾನ, ಕೃಪಾದೃಷ್ಟಿ ಹಾಗೂ ಜಲದೀಕ್ಷೆ ಕಾರ್ಯಗಳು ಸ್ಮರಣೀಯ. ೨೦೨೦ರ ಜನೇವರಿಯಲ್ಲಿ ಜರುಗಿದ ಜಾತ್ರಾಮಹೋತ್ಸವದಲ್ಲಿ ೧ಲಕ್ಷ ಸಸಿ ನೆಡುವ ಸಂಕಲ್ಪ ಮಾಡಿ -ಈಗ ಶ್ರೀ ಗವಿಸಿದ್ದೇಶ್ವರ ಮಠದ ನರ್ಸರಿ(ಸಸ್ಯಧಾಮ )ಯಲ್ಲಿ ೧ಲಕ್ಷ ಸಸಿ ಬೆಳಸಿ ಅದನ್ನು ವಿತರಿಸುವ ಕಾರ್ಯ ಅನು?ನಗೊಳ್ಳುತ್ತಿರುವದು ಸಂತಸದ ವಿ?ಯ.
ಶ್ರೀ ಮಠದ ನರ್ಸರಿಯಲ್ಲಿ ಬೆಳೆಸಿದ ಸಸಿಗಳ ವಿವರ: ಬೇವು ೩೦೦೦೦, ಹೊಂಗೆ ೧೧೦೦೦, ಬಂಬೂ ೨೦೦೦, ಸಂಪಿಗೆ ೨೦೦೦, ನೇರಳೆ ೧೦೦೦೦, ಬುಗರಿ ೧೦೦೦, ಹೊನ್ನೆ ೨೦೦೦, ಕಡಿ ಬದಾಮಿ ೨೦೦೦, ಹಿಪ್ಪಿ ೩೦೦೦, ಸೀತಾಫಲ ೨೦೦, ಹೊಳೆ ಮತ್ತಿ ೪೫೦೦, ಫೇಲ್ಟೋ ಫಾರಂ ೪೦೦೦, ಜಂಬು ನೇರಳೆ ೩೦೦೦೦, ಅರಳಿಮರ ೬೦೦, ಹತ್ತಿ ೪೦೦, ಹುಣಸೆಮರ ೨೫೦೦, ಚಳ್ಳೆ ೩೦೦, ಗುಲ್ಮೋರ್ ೫೦೦ ಒಟ್ಟು ಒಂದು ಲಕ್ಷ ಆರು ಸಾವಿರ ಸಸಿಗಳು ಶ್ರೀಮಠದ ಆವರಣದಲ್ಲಿ ಬೆಳೆಸಲಾಗಿದೆ.
ವಿಶೇ?ವಾಗಿ ಹಿರೇಹಳ್ಳದ ಎಡ -ಬಲಬದಿಗಳಲ್ಲಿ ತೆಂಗು, ಜಂಬೂ, ನೇರಳೆ ಮರಗಳನ್ನು ಹಚ್ಚಲು ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಯ ಸಹಕಾರದಲ್ಲಿ ಈಗಾಗಲೇ ಕಾರ್ಯನಡೆಯುತ್ತಿದೆ.
ಸಣ್ಣ ನೀರಾವರಿ ಇಲಾಖೆ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮತ್ತು ಪರಿಸರ ಪ್ರಿಯ ಸಂಘಟನೆಗಳ ಸಹಯೋಗದಲ್ಲಿ ಪ್ರಾರಂಭಗೊಂಡಿವೆ. ಈ ಮಹತ್ವದ ಕಾರ್ಯಕ್ಕೆ ನಾಡಿನ ರೈತ ಸಮುದಾಯ ಕೈ ಜೋಡಿಸಿದ್ದು ವಿಶೇ?.
ಸಾಮೂಹಿಕವಾಗಿ ಸಸಿ ನೆಡುವ ಉದ್ಧೇಶವಾಗಿತ್ತು ಆದರೆ ಮಹಾಮಾರಿ ಕೋವಿಡ್ -೧೯ ರೋಗದ ನಿಮಿತ್ಯ ನೇರವಾಗಿ, ಸಾಮೂಹಿಕವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಜನರ ಆರೋಗ್ಯ ಹಾಗೂ ಶ್ರೀಮಠದ ಪರಿಸರ ಸಾಮಾಜಿಕ ಕಾರ್ಯಕ್ಕೆ ಅಡ್ಡಿಯಾಗದಂತೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತರುವುದು ವಿಶೇಷ. ಪೂಜ್ಯರು, ನಾಡಿನ ಗಣ್ಯರು ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುವ ದೃಶ್ಯವನ್ನು ನೇರವಾಗಿ ಆನ್ಲೈನ್ ಮೂಲಕ
ದಿನಾಂಕ ೦೫-೦೮-೨೦೨೦ ರಂದು ಸಮಯ : ಬೆಳಗ್ಗೆ ೯:೩೦ ಗಂಟೆಗೆ ನಿಯೋಜಿತವಾಗಿರುವ ಸಂಯೋಜಕರಿಂದ ಗೂಗಲ್ ಮೀಟ್ ಲಿಂಕನಿಂದ ಕಾರ್ಯಕ್ರಮ ಚಾಲನೆ ನೀಡುವ ದೃಶ್ಯವನ್ನು ಸೆರೆಹಿಡಿದು ಯೂಟ್ಯೂಬ್ ಫೇಸ್‌ಬುಕ್‌ನಲ್ಲಿ ನೇರವಾಗಿ ಪ್ರಸಾರವಾಗುವಂತೆ ವ್ಯೆವಸ್ಥೆ ಕಲ್ಪಿಸಲಾಗಿದೆ. ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಪರೋಕ್ಷವಾಗಿ ಭಾಗವಹಿಸಿ ಪರಿಸರ ಮತ್ತು ಸಮಾಜ ಸೇವೆಗೆ ಕೈಜೋಡಿಸಬೇಕೆಂದು ಶ್ರೀಮಠವು ಕೋರುತ್ತದೆ. ಶ್ರೀ ಮಠದ YouTube Link   https://www.youtube.com/c/gavimathkoppal 2) Face book Link : https://www.facebook.com/gavimath.koppal/ ೩) ಕಿಖ ಅoಜe : ಕಿಖ ಅoಜe ಈiಟe ಂಣಣಚಿಛಿheಜ ಲಿಂಕ್‌ನಲ್ಲಿ ತಾವೂ ವಿಕ್ಷೀಸಬಹುದು.

 

Please follow and like us:
error