ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಕರೋನ ವಾರಿಯರ್ಸ ತಂಡದಿಂದ ಜಾಗೃತಿ

ಮಾಸ್ಕ ಧರಿಸಿಕೊಂಡೇ ಬರುವುದರ ಜೊತೆಗೆ ಕರೋನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಶ್ರೀ ಗವಿಮಠ

ಕೊಪ್ಪಳ- ನಗರದಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವವು ನಾಳೆ ೩೦.೦೧.೨೦೨೧ ಶನಿವಾರಜರುಗುವ ಪ್ರಯುಕ್ತ ಶ್ರೀ ಮಠದ ಒಳಆವರಣ ಹಾಗೂ ರಥಬೀದಿಯ ಮೈದಾನವನ್ನು ಸ್ವಚ್ಛಗೊಳಿಸಿ ನೀರು ಸಿಂಪಡಿಸಿ ಸಮತಟ್ಟು ಗೊಳಿಸಲಾಗಿದೆ. ಈ ಜಾತ್ರಾಮಹೋತ್ಸವಕ್ಕೆ ಆಗಮಿಸಿದ ಭಕ್ತಾಧಿಗಳಲ್ಲಿ ಕೋವಿಡ್ ೧೯ ರಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಶ್ರೀಗವಿಸಿದ್ಧೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರತಂಡ, ಸಕಲ ಸಿಬ್ಬಂಧಿಗಳು ಹಾಗೂ ವಿದ್ಯಾರ್ಥಿ ಸಮೂಹ ಭಕ್ತಾಧಿಗಳಿಗೆ ಕೈಗಳಿಗೆ ಸ್ಯಾನಿಟೈಸ್‌ರ್ ಲೇಪಿಸುವುದು ಹಾಗೂ ಮಾಸ್ಕಧರಿಸಲು ಸೂಚಿಸುತ್ತಜಾಗೃತಿಕಾರ್ಯದಲ್ಲಿ ನಿರತರಾಗಿರುವರು. ಮಹಾದಾಸೋಹಆವರಣ, ಗವಿಸಿದ್ದೇಶ್ವರ ಕಾಲೇಜುಆವರಣ, ಗವಿಸಿದ್ದೇಶ್ವರ ಫ್ರೌಢ ಶಾಲಾ ಆವರಣ, ಹಾಗೂ ಜನಸಂದಣಿಯಎಲ್ಲ ಸ್ಥಳಗಳಲ್ಲಿಯು ಕೋವಿಡ್-೧೯ ಕುರಿತುಜಾಗೃತಿಕಾರ್ಯದಲ್ಲಿ ನಿರತರಾಗಿರಾಗಿರುತ್ತಾರೆ.

ಸುದ್ದಿ ೨.ರಥ ಬೀದಿಯಲ್ಲಿರಂಗೋಲಿ ಚಿತ್ತಾರ
ಕೊಪ್ಪಳ : ನಗರದ ಶ್ರೀಗವಿಸಿದ್ಧೇಶ್ವರ ಮಹಾರಥೋತ್ಸವ ನಿಮಿತ್ಯರಥ ಸಾಗುವ ಮೈದಾನದಲ್ಲಿ ಬಣ್ಣ ಬಣ್ಣದಚುಕ್ಕೆಯರಂಗವಲ್ಲಿ ಬಿಡಿಸಿರುವುದು ಭಕ್ತರ ಗಮನಸೆಳೆಯಿತು. ಶ್ರೀಗವಿಸಿದ್ಧೇಶ್ವರ ವಿದ್ಯಾರ್ಥಿನಿಲಯದ ಸುಮಾರು ೧೫೬ ವಿದ್ಯಾರ್ಥಿನಿಯರ ೨೫ ತಂಡಗಳು ಸೇರಿರಥ ಬೀದಿಯುದ್ದಕ್ಕೂಚುಕ್ಕೆಯರಂಗವಲ್ಲಿ ಬಿಡಿಸಿರುತ್ತಾರೆ. ಕರೋನಾಜಾಗೃತಿಯ ಸಂದೇಶ ಸಾರುವ, ಸಾಮಾಜಿಕ ಜಾಲತಾಣಗಳ ಚಿತ್ರಗಳ ರಂಗೋಲಿ, ಹೆಣ್ಣುಮಕ್ಕಳನ್ನು ಉಳಿಸಿ ,ಧೂಮಪಾನದದುಷ್ಪರಿಣಾಮ ಈ ಮೊದಲಾದ ಸಂದೇಶಗಳನ್ನು ಬಿತ್ತರಿಸುವ ಈ ರಂಗೋಲಿಗಳು ಭಕ್ತರನ್ನು ಆಕರ್ಷಿಸಿದವು. ವಸತಿನಿಲಯದ ಮೇಲ್ವಿಚಾರಕಿಯರಾದ ಸರೋಜಮ್ಮ, ಸುಮಂಗಲಾ , ಶಾಂತಾಕೋರಗಲ್ ನೇತೃತ್ವದಲ್ಲಿ ಈ ಕಾರ್ಯಜರುಗಿತು.

ಹೊರಆವರಣದಲ್ಲಿ ಭಕ್ತರಆರೋಗ್ಯದ ಹಿತದೃಷ್ಟಿಯಿಂದಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಸಿಬ್ಭಂದಿಗಳು ಮತ್ತು ವಿದ್ಯಾರ್ಥಿಗಳಿಂದ ಕರೋನ ವಾರಿಯರ್ಸ ತಂಡಗಳು ಕಾರ್ಯೋನ್ಮುಖವಾಗಿದೆ. ಶ್ರೀ ಕರ್ತೃ ಗವಿಸಿದ್ಧೇಶ್ವರನ ದರ್ಶನಗೈಯ್ಯಲು ತೆರಳುವ ಪ್ರತಿಯೊಬ್ಬರ ಕೈಗಳಿಗೆ ಸ್ಯಾನಿಟೈಜರ ಸಿಂಪಡಿಸುವ ಮತ್ತು ಪ್ರತಿಯೊಬ್ಬರಿಗೂ ಮಾಸ್ಕಧರಿಸಲೆಬೇಕೆಂದು ಭಕ್ತಜನರಿಗೆ ತಿಳಿಸುವ ಕಾರ್ಯಈಗಾಗಲೇ ಶ್ರೀ ಮಠದಲ್ಲಿ ನಡೆದಿದೆ. ಈ ಮೂಲಕ ಭಕ್ತರಿಗೆಜಾಗೃತಿಯನ್ನುಮೂಡಿಸಲಾಗುತ್ತಿದೆ. ಹಾಗೆಯೇಶ್ರೀ ಮಠದ ಪ್ರವೇಶದ್ವಾರ, ಮಹಾರಥೋತ್ಸವಜರುಗುವ ಮೈದಾನ, ಮಹಾದಾಸೋಹ ಭವನ, ಶಾಲಾ ಕಾಲೇಜು, ವಸತಿನಿಲಯಗಳು ಈ ಎಲ್ಲಾ ಸ್ಥಳಗಳಲ್ಲಿ ಭಕ್ತರಲ್ಲಿಜಾಗೃತಿಯನ್ನು ಮೂಡಿಸಲು ಈ ಕರೋನ ವಾರಿಯರ್ಸ ತಂಡಗಳು ಉತ್ತಮರೀತಿಯಲ್ಲಿಕಾರ್ಯಗೈಯುತ್ತಿವೆ.ಭಕ್ತರು ಈ ಕಾರ್ಯಕ್ಕೆ ಸಹಕರಿಸುತ್ತಾ ಭಕ್ತರು ಶ್ರೀ ಮಠಕ್ಕೆ ಬರುವಂತಹ ವೃದ್ಧರು, ಮಕ್ಕಳು, ಮಹಿಳೆಯರು, ಯುವಕರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ ಧರಿಸಿಕೊಂಡೇ ಬರುವುದರ ಜೊತೆಗೆ ಕರೋನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಶ್ರೀ ಗವಿಮಠ ಪ್ರಕಟಣೆ ತಿಳಿಸಿದೆ.

Please follow and like us:
error