ಶ್ರೀ ಗವಿಸಿದ್ಧೇಶ್ವರರ ಸಂಕ್ಷಿಪ್ತ ಹಾಗೂ ಸರಳ ಜಾತ್ರಾ ಮಹೋತ್ಸವ

ಶಾಲಿವಾಹನ ಶಕೆ ೧೭೩೫-ಕ್ರಿ.ಶ ೧೮೧೬ ಶ್ರೀಮುಕ ನಾಮ ಸಂವತ್ಸರ ಪುಷ್ಯ ಬಹುಳ ಬಿದಗಿತಿಥಿಯಿಂದಆರಂಭಗೊಂಡಕತೃಶ್ರೀ ಗವಿಸಿದ್ಧೇಶ್ವರನ ಜಾತ್ರಾ ಮಹೋತ್ಸವ ಇಂದಿನ ಮಿತಿಗೆ ೨೦೫ನೇ ರಥೋತ್ಸವವಾಗಿ ನೆರವೇರುತ್ತದೆ.ಆದರೆಕೋವಿಡ್-೧೯ರ ಹಿನ್ನೆಲೆಯಲ್ಲಿ ಮಹಾಮಹಿಮನ ಜಾತ್ರಾ ಮಹೋತ್ಸವವನ್ನು ಮೊಟಕುಗೊಳಿಸಲು ಬಾರದು ಹಾಗೂ ಸಂಪ್ರದಾಯಕ್ಕೆಚ್ಯುತಿಯನ್ನೂಂಟು ಮಾಡಲುಬಾರದು.ಆ ಕಾರಣ ಸರಕಾರಆದೇಶ ಪಾಲಿಸುವ ಸಂದರ್ಭದಲ್ಲಿಜಾತ್ರಾ ಮಹೋತ್ಸವಅತ್ಯಂತ ಸರಳ ಹಾಗೂ ಸಂಕ್ಷಿಪ್ತವಾಗಿ ನೆರವೇರುವುದು.
ಜಾತ್ರೆಎಂದಾಕ್ಷಣಉತ್ಸವ ಮೂರ್ತಿಯನ್ನುರಥದಲ್ಲಿ ಮೂಹುರ್ತಗೊಳಿಸಿ ಪೂಜಾದಿಗಳನ್ನು ನೆರವೇರಿಸಿ ನಂತರ ಬಾಜಾ-ಭಜಂತ್ರಿಯೊಂದಿಗೆ ಹರ-ಹರ ಮಹಾದೇವಎನ್ನುವಜಯಘೋಷದೊಂದಿಗೆರಥ ಸಾಗುವುದು. ಭಕ್ತಾಧಿಗಳು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಹಾಗೂ ಕಬ್ಬಿನ ಗಳಗಳನ್ನು ಎಸೆದುಕೃತಾರ್ಥ ಭಾವನೆಯನ್ನು ಹೊಂದುವರು.ನಂತರ ಹೂ, ದವನವನ್ನುಕೊಂಡುಕೊಂಡು ಭಜಿ, ಮಿರ್ಚಿ, ಮಂಡಾಳ ತಿಂದು ಮನೆಯತ್ತ ಪಯಣಿಸುವರು.ಇದುಜಾತ್ರಾ ಮಹೋತ್ಸವದಒಂದು ಪರಂಪರಾಗತ ಪರಿಕಲ್ಪನೆಯಾಗಿದೆ.ಆದರೆ ಶ್ರೀಮಠ ಪ್ರಸ್ತುತ ಪೀಠಾಧೀಪತಿಗಳವರು ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ವಿವಿಧ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾತ್ರೆಗೆ ವಿಭಿನ್ನ ಪರಿಕಲ್ಪನೆಯನ್ನೇ ನೀಡಿದ್ದಾರೆ.ಹಿತ-ಮಿತವಾದ ಜಲಬಳಕೆ, ನೀರಿನ ಸಂಗ್ರಹಕ್ಕಾಗಿ ಮಳೆ ನೀರುಕೋಯ್ಲು, ಸಾಮಾಜದ ಸ್ವಾಸ್ಥ್ಯಾಕಾಪಾಡುವ ನಿಟ್ಟಿನಲ್ಲಿರಕ್ತದಾನ ಶಿಬಿರ ಅಂಧರ ಬಾಳಿನ ಬೆಳಕಾಗಲು ಕಣ್ಣುಗಳು ದಾನ ಮಾಡುವುದು, ಬಾಲ್ಯ ವಿವಾಹವನ್ನುತಡೆಗಟ್ಟುವುದು ಈ ಎಲ್ಲಾ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲು ಜಾತ್ರಾ ಮಹೋತ್ಸವದ ಪೂರ್ವದಲ್ಲಿಯೇಜಾಥಾಗಳನ್ನು ನೆರವೇರಿಸಿ ಸಮಾಜದಲ್ಲಿ-ಜನರಲ್ಲಿಜಾಗೃತಿಯನ್ನೂಂಟು ಮಾಡುವುದಾಗಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಖ್ಯಾತ ಸಾಹಿತಿಗಳಿಂದ ಉಪನ್ಯಾಸ ಹಾಗೂ ಕಲಾವಿದರಿಂದಸಂಗೀತ ಗೋಷ್ಠಿ ಹೀಗೆ ವೈವಿಧ್ಯಮಯಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗವೀಶನ ಜಾತ್ರೆಯನ್ನುಪೂಜ್ಯರುಸಾಮಾಜೀಕರಣಗೊಳಿಸಿದ್ದಾರೆ ಅಲ್ಲದೇಸಾಮಾಜಮುಖಿಯನ್ನಾಗಿಸಿದ್ದಾರೆ.ಹೀಗಾಗಿ ಗವೀಶನ ಜಾತ್ರಾ ಮಹೋತ್ಸವಕ್ಕೆ ಪೂಜ್ಯರು ಹೊಸ ಪರಿಭಾಷೆಯನ್ನೇಕಟ್ಟಿಕೊಟ್ಟಿರುವುದು ನಿಜವಾಗಿಅರ್ಥಪೂರ್ಣವಾಗಿದೆ.
ಕತೃಗವಿಸಿದ್ಧೇಶ್ವರ ಗವಿಮಠದ ಪರಂಪರೆಯಲ್ಲಿ ೧೧ನೇಯವರಾಗಿದ್ದಾರೆ ಆದರೆಕತೃ ಗವಿಸಿದ್ಧೇಶ್ವರ ನಾಡಿಗೆ ನೀಡಿದಅನನ್ಯ ಕಾರ್ಯಗಳ ಮೂಲಕ ಗವಿಸಿದ್ಧೇಶ್ವರರೇ ಶ್ರೀಮಠದ ಸಂಸ್ಥಾಪಕರಾಗಿದ್ದಾರೆಎನ್ನುವುದುಜನಮನದಲ್ಲಿ ಇಂದಿಗೂ ಸ್ಥಾಯಿಯಾಗಿದೆ.ಶ್ರೀ ಗವಿಸಿದ್ಧೇಶ್ವರರು ಕೊಪ್ಪಳದ ನೆರೆಯ ಮಂಗಳಾಪೂರದಲ್ಲಿ ಜನಿಸಿ ಬಂದವರು.ಅಲ್ಲಿಯ ವೀರಮಾಹೇಶ್ವರ ದಂಪತಿಗಳಾಗಿದ್ದ ಗುರುಲಿಂಗಮ್ಮ ಹಾಗೂ ಮಹಾದೇವಯ್ಯಂಗಳವರೇ ಪೂಜ್ಯರಜನುಮದಾತರು.ಮಳಲ ಮಲ್ಲೇಶನಲ್ಲಿಜಪ-ತಪೋನುಷ್ಠಾನ ಗೈದ ಅನುಷ್ಠಾನ ಯೋಗಿ ಗವಿ ಶಿವಯೋಗಿ.ಬಸನಗೌಡರ ಮೃತ ಗೋವಿಗೆ ತಮ್ಮತಪೋಬಲದಿಂದಗುರುಧ್ಯಾನಗೈಯುತ್ತಾ ಮರುಜನ್ಮ ನೀಡಿದ ಶಿವಯೋಗಿ ಕತೃ ಗವಿಸಿದ್ಧೇಶ್ವರರು.ಅಂದಿನ ಗವಿಮಠದ ಅಧಿಪತಿಗಳಾಗಿದ್ದ ಚನ್ನಬಸವ ಶಿವಯೋಗಿಗಳ ಕೃಪೆಗೆ ಪಾತ್ರರಾಗಿ ಗವಿಮಠ ಪೀಠಾಧಿಕಾರಿಗಳಾದವರು.ತ್ರಿವಿಧ ದಾಸೋಹಂಗಳನ್ನು ತಮ್ಮಕಾಯಕವೆಂದೇ ಬಗೆದುಅನನ್ಯರೀತಿಯಲ್ಲಿ ನಡೆಸಿಕೊಂಡು ಬಂದವರು.ಗುರುಚನ್ನಬಸವ ಶಿವಯೋಗಿಗಳವರು ಗವಿಸಿದ್ಧನ ಕಾರ್ಯಗಳಿಗೆ ಮೆಚ್ಚಿತಲೆದೂಗಿದವರು. ಗವಿಸಿದ್ಧಾ!ನಾವು ಬಂದಕಾರ್ಯ ಮುಗಿಯಿತುಇನ್ನೂ ನಾವು ಸದಾ ಲಿಂಗಪೂಜೆಯಲ್ಲಿಯೇ ಸಮರಸಗೊಳ್ಳುತ್ತೇವೆ. ಈ ನಾಡನ್ನು-ನಾಡವರನ್ನು ಸಂರಕ್ಷಿಸಿಸುವ ಭಾರ ನಿನ್ನದುಎಂದರು.ಗುರುಗಳ ಈ ನುಡಿಗೇಳ್ದ ಗವಿಸಿದ್ಧೇಶ ಮನನೊಂದು ಗುರುಗಳಿಗಾಗಿಯೇ ನಿರ್ಮಾಣವಾಗಿದ್ದ ಸಮಾಧಿಯನ್ನೇರಿಧ್ಯಾನಸಕ್ತರಾಗಿ ಲಿಂಗದಲ್ಲಿ ಮೈಮರೆತು ಆ ಲಿಂಗದ ಬೆಳಗಿನಲ್ಲಿಯೇ ಬೆಳಕಾಗಿ ಬಯಲಾದರು, ಲಿಂಗೈಕ್ಯರಾದರು.ಆಗ ಗುರುಚನ್ನಬಸವ ಸ್ವಾಮಿಗಳವರೇ ಮುಂದೆ ನಿಂತುಎಲ್ಲಾ ವಿಧಿ-ವಿಧಾನಗಳನ್ನು ನೆರವೇರಿಸಿದರು ಗುರುಗಳಿಂದಲೇ ಗೌರವಿಸಿಕೊಂಡ ಮಹಾಮಹಿಮ ಗವಿಸಿದ್ಧೇಶ್ವರರು.ಶಾಲಿವಾಹನ ಶಕೆ ೧೭೩೫ ಕ್ರಿ.ಶ ೧೮೧೬ ಶ್ರೀಮುಕ ನಾಮ ಸಂವತ್ಸರ ಪುಷ್ಯ ಬಹುಳ ಬಿದಗಿಯಂದು ಲಿಂಗೈಕ್ಯರಾದರು.ಅಂದಿನಿಂದಜಾತ್ರಾ ಮಹೋತ್ಸವ ನಿರಂತರವಾಗಿ-ನಿರಾತಂಕವಾಗಿಜರುಗುತ್ತಾ ಬಂದಿದೆ.ಪ್ರಸ್ತುತ ಶ್ರೀಮಠದ ಪೀಠಾದಿಪತಿಗಳು ಜಾತ್ರೆಯನ್ನು ಸಮಾಜಮುಖಿಯನ್ನಾಗಿಸಿದ್ದಾರೆ.ಅಲ್ಲದೇ ಈ ಸಾರಿ ಕೋವಿಡ್-೧೯ರ ಹಿನ್ನೆಲೆಯಲ್ಲಿಎಲ್ಲಾ ಕಾರ್ಯಕ್ರಮಗಳನ್ನು ಸಂಕ್ಷಿಪ್ತಗೊಳಿಸಿರುವರಲ್ಲದೇ ಸಿಂಹಾವಲೋಕನ ಕ್ರಮದಂತೆಯೂಆಚರಿಸುತ್ತಿರುವುದುಅನನ್ಯ ಹಾಗೂ ಅನುಕರಣೀಯ ಸಂಗತಿಯಾಗಿದೆ.

-ಎಸ್.ಎಮ್ ಕಂಬಾಳಿಮಠ

Please follow and like us:
error