ಶ್ರೀರಾಮನಗರ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ : ಅವಿರೋಧ ಆಯ್ಕೆ

ಪತ್ರಕರ್ತ ವೈ.ನಾಗರಾಜ್ ಸೇರಿದಂತೆ 11 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ.

ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 11 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪತ್ರಕರ್ತರು, ರೈತರು ಆದ ವೈ. ನಾಗರಾಜ್, ಮಲ್ಲಿಕಾರ್ಜುನ ನಾಯಕ ಸೇರಿದಂತೆ 11 ಜನ ರೈತರು ಅವಿರೋಧವಾಗಿ ಚುನಾವಣೆ ಆಯ್ಕೆಯಾಗಿದ್ದಾರೆ. ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ವೈ ನಾಗರಾಜ್ ಆಯ್ಕೆಯಾದ್ರೆ, ಸಾಲಗಾರರ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಮಲ್ಲಿಕಾರ್ಜುನ ನಾಯಕ ಆಯ್ಕೆಯಾಗಿದ್ದಾರೆ. ಇನ್ನುಳಿದ ಸಾಮಾನ್ಯ ಕ್ಷೇತ್ರದಿಂದ ಪಿ.ವೆಂಕಟೆಶ್ವರಾವ್, ಜಿ. ಸುರೇಶ್, ಸಿಂಹಾದ್ರಿ ಶ್ರೀನಿವಾಸ್, ಎಮ್ ರಮೇಶ ಆಯ್ಕೆಯಾದ್ರೆ, ಸಾಲಗಾರರ ಹಿಂದುಳಿದ ಕ್ಷೇತ್ರದಿಂದ ಎ.ರಾಮಕೃಷ್ಣರಾಜು,ಮಹಮ್ಮದ್ ಅಲಿ,ಸಾಲಗಾರರ ಪರಿಶಿಷ್ಟ ಕ್ಷೇತ್ರದಿಂದ ಆನಂದ್ ಕುಮಾರ್, ಸಾಲಗಾರರ ಮಹಿಳಾ ಕ್ಷೇತ್ರಗಳಿಂದ ಬಿ.ವಿಜಯಲಕ್ಷ್ಮಿ,ಎಮ್ .ವನಾಜಾಕ್ಷಿ ಅವಿರೋಧವಾಗಿ ಆಯ್ಕೆಯಾಗಿದ್ದು, ರಿಟರ್ನಿಂಗ್ ಆಫಿಸರ್ ಪರಶುರಾಮ ಗಡ್ಡಿ ಆದೇಶ ಹೊರಡಿಸಿದ್ದಾರೆ. ಇನ್ನೂ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ ಶ್ರೀರಾಮನಗರ ಸೇರಿದಂತೆ ವಿವಿಧ ಗ್ರಾಮಗಳ ರೈತರಿಗೂ, ಹಿರಿಯರಿಗೂ ಮುಖಂಡರಿಗೂ ನೂತನ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ

Please follow and like us:
error