ಶ್ರೀನಗರ ಎನ್‌ಕೌಂಟರ್‌ 3 ಭಯೋತ್ಪಾದಕರ ಹತ್ಯೆ

ನವದೆಹಲಿ: ಶ್ರೀನಗರದ ಖಾದಿಬಾಲ್ ಸೌರಾ ಪ್ರದೇಶದಲ್ಲಿ ಭದ್ರತಾ ಪಡೆಗಳಿಂದ ಮೂವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರದೇಶದ ಮನೆಯೊಳಗೆ ಭಯೋತ್ಪಾದಕರು ಅಡಗಿಕೊಂಡಿದ್ದರು ಭದ್ರತಾ ಪಡೆಗಳ ಮುಂದೆ ಶರಣಾಗುವ ಪ್ರಸ್ತಾಪವನ್ನು ಭಯೋತ್ಪಾದಕರು ನಿರಾಕರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇವರಲ್ಲಿ ಇಬ್ಬರು ಭಯೋತ್ಪಾದಕರು  2019 ರಿಂದ ಸಕ್ರಿಯರಾಗಿದ್ದರು ಎಂದು ಅವರು ಹೇಳಿದರು. “ಒಬ್ಬರು ಕಳೆದ ತಿಂಗಳು ಇಬ್ಬರು ಬಿಎಸ್ಎಫ್ ಜವಾನರ ಮೇಲೆ ದಾಳಿಯಲ್ಲಿ ಭಾಗಿಯಾಗಿದ್ದರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ದಿಷ್ಟ ಗುಪ್ತಚರ ಮಾಹಿತಿಗಳನ್ನು ಅನುಸರಿಸಿ ಭದ್ರತಾ ಪಡೆಗಳು ಇಂದು ಬೆಳಿಗ್ಗೆ ಈ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಮನೆಯ ಸಮೀಪ ಬಂದಾಗ ಭಯೋತ್ಪಾದಕರು ಸರ್ಚ್ ಪಾರ್ಟಿಗೆ ಗುಂಡು ಹಾರಿಸಿದರು, ಇದು ಗುಂಡಿನ ಕಾಳಗಕ್ಕೆ ಕಾರಣವಾಯಿತು.

 

 

 

 

Please follow and like us:
error