ಶ್ರೀಗವಿಮಠದ ಕರ್ತೃ ಗದ್ದುಗೆಯ ಗೋಪುರಕ್ಕೆ ಕಳಸಾರೋಹಣ

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿರಕ್ತದಾನ ಶಿಬಿರ

ಕೊಪ್ಪಳ- ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ದಿನಾಂಕ ೩೦/೦೧/೨೦೨೧ರಿಂದ೦೧/೦೨/೨೦೨೧ರವರೆಗೆ೦೩ ದಿನಗಳ ಕಾಲ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿಬೃಹತ್‌ರಕ್ತದಾನ ಶಿಬಿರವನ್ನು ಬೆಳೆಗ್ಗೆ ೦೯:೦೦ಗಂಟೆಯಿಂದ ಸಾಯಂಕಾಲ ೦೫:೦೦ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಈಗ ನಮ್ಮಜಿಲ್ಲೆ

ಯಲ್ಲಿರಕ್ತದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು೨೦೨೦ ನೇ ವರ್ಷದಲ್ಲಿಒಟ್ಟು ನಮ್ಮಜಿಲ್ಲೆಯಲ್ಲಿ೭೮ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು, ಒಟ್ಟು೬೮೯೨ಜನ ಸ್ವಯಂ ಪ್ರೇರಿತರಾಗಿರಕ್ತದಾನ ಮಾಡಿರುತ್ತಾರೆ.ಒಟ್ಟು೧೦,೬೦೨ ಜನರುಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ.

೨೦೨೦ರಲ್ಲಿಜರುಗಿದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ೦೩ ದಿನಗಳ ಕಾಲ ಬೃಹತ್‌ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು, ಅದರಲ್ಲಿಒಟ್ಟು೬೦೨ಜನ ಸ್ವಯಂ ಪ್ರೇರಿತರಾಗಿರಕ್ತದಾನ ಮಾಡಿರುತ್ತಾರೆ. ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ, ಗವಿಮಠಇವರ ಸಹಯೋಗದಲ್ಲಿ ದಿನಾಂಕ ೩೦/೦೧/೨೦೨೧ರಿಂದ೦೧/೦೨/೨೦೨೧ ರವರೆಗೆ೦೩ ದಿನಗಳ ಕಾಲ ಜರುಗುವಬೃಹತ್‌ರಕ್ತದಾನ ಶಿಬಿರಕ್ಕೆ ೧೫ ವೈದ್ಯರತಂಡ, ೧೫ಜನ ಪ್ರಯೋಗ ಶಾಲಾ ತಂತ್ರಜ್ಞರತಂಡ, ೨೦ಜನ ಸ್ವಯಂ ಸೇವಕರತಂಡ ಹಾಗೂ ೫೦ ಕಾಟ್ ಬೆಡ್‌ಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಸದರಿರಕ್ತದಾನ ಶಿಬಿರದಲ್ಲಿ ೧೦೦೦-೧೫೦೦ಜನ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿರಕ್ತದಾನ ಮಾಡುತ್ತಾರೆಂದು ನಿರೀಕ್ಷಿಸಲಾಗಿದೆ, ಹೆಚ್ಚಿನ ಮಾಹಿತಿಗಾಗಿಡಾ|| ಶ್ರೀನಿವಾಸ ಹ್ಯಾಟಿಮೊಬೈಲ್ ಸಂಖ್ಯೆ-೯೦೦೮೯೯೬೬೪೬, ಸುಧೀರಅವರಾದಿ ಮೊಬೈಲ್ ಸಂಖ್ಯೆ-೯೪೪೮೮೧೪೧೫೬ವ್ಯಕ್ತಿಗಳನ್ನು ಸಂಪರ್ಕಿಸಬಹುದು.

ಭಕ್ತರಿಂದ ಬಸವಪಟಆರೋಹಣ

ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಇಂದುಮಂಗಳವಾರ ಸಂಜೆ ೪.೩೦ ಗಂಟೆಗೆ ‘ಬಸವ ಪಟಆರೋಹಣ’ ಧಾರ್ಮಿಕಕಾರ್ಯಕ್ರಮಜರುಗಿತು. ಶ್ರೀಗವಿಮಠದ ಜಾತ್ರಾ ಪರಂಪರೆಯಲ್ಲಿ ಬಸವಪಟಆರೋಹಣದ ಮೂಲಕಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು.ಭಕ್ತರುಶ್ರೀ ಗವಿಮಠದಕರ್ತೃಗದ್ದುಗೆಯ ಸುತ್ತ ೫ ಸುತ್ತ ಪ್ರದಕ್ಷಿಣೆ ಹಾಕುತ್ತಾ ಶ್ರೀಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಶ್ರೀ ಗವಿಮಠದಕರ್ತೃಗದ್ದುಗೆಯದ್ವಾರ ಬಾಗಿಲಿನ ಎದುರಿಗಿರುವ ಶಿಲಾಸ್ತಂಭಕ್ಕೆಕಂಭಕ್ಕೆ ಬಸವ ಪಟಕಟ್ಟುವುದರ ಮೂಲಕ ಪ್ರತಿ ವರ್ಷದ ಸಂಪ್ರದಾಯ ಮೆರೆದರು.

ಸಂಸ್ಥಾನ ಶ್ರೀ ಗವಿಮಠದ ಜಾತ್ರಾಮಹೋತ್ಸವತಾಯಂದಿರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರಾಮಹೋತ್ಸವ ದ ಅಂಗವಾಗಿ ಇಂದು ಸಂಜೆ ೫ ಕ್ಕೆ ಶ್ರೀಗವಿಮಠದ ಬೆಟ್ಟದ ಮೇಲಿರುವ ಶ್ರೀ ಅನ್ನಪೂರ್ಣೇಶ್ವರಿದೇವಿಗೆಉಡಿತುಂಬುವಕಾರ್ಯಕ್ರಮವುಜರುಗಿತು. ಶ್ರೀ ಅನ್ನಪೂರ್ಣೆಶ್ವರಿದೇವಿಗೆ ಬಾಳೆಕಂಬ, ತೆಂಗಿನಗರಿ, ಕಬ್ಬಿನಗಳ, ತಳಿರು ತೋರಣಗಳಿಂದ ಅಲಂಕೃತಗೊಂಡ ಹಂದರವನ್ನು ನಿರ್ಮಿಸಿದ್ದೂ ವಿಶೇಷವಾಗಿತ್ತು. ಅಲ್ಲದೇದೇವಿಗೆ ಸೇವಂತಿಗೆ, ಮಲ್ಲಿಗೆ, ಜಾಜಿ, ಸಂಪಿಗೆ ಬಗೆಬಗೆಯ ಹೂವುಗಳಿಂದ ಅಲಂಕೃತಗೊಳಿಸಿದ್ದು ಭಕ್ತರ ಭಕ್ತಿ ಭಾವಕ್ಕೆ ಮೆರಗು ಹೆಚ್ಚಿಸಿತು. ಆಗಮಿಸಿದ ತಾಯಂದಿರುವೀಳ್ಯೆದೆಲೆ, ಅಡಿಕೆ, ಅಕ್ಕಿ, ಕೊಬ್ಬರಿ ಬಟ್ಟಲು ,ಅರಿಷಣಕೊಂಬು, ಉತ್ತತ್ತಿ , ಹಸಿರುಬಳೆ, ಖಣ.ಹಣ್ಣು ಹಂಪಲಗಳ ಮುಖೇನ ದೇವಿಗೆಉಡಿತುಂಬಿ ಸಂಪ್ರದಾಯ ಮೆರೆದರು. ತದನಂತರ ಆಗಮಿಸಿದ ಎಲ್ಲ ತಾಯಂದಿರೂ ಪರಸ್ಪರ ಉಡಿತುಂಬಿಕೊಂಡರು.

ಕೊಪ್ಪಳ: ಶ್ರೀ ಗವಿಮಠದಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮಂಗಳವಾರ ಸಂಜೆ ೪.೨೦ ಕ್ಕೆ ಪಂಚ ಕಳಸೋತ್ಸವ ಕಾರ್ಯಕ್ರಮ ಪ್ರತಿವರ್ಷದಂತೆ ಗವಿಮಠದಲ್ಲಿಜರುಗಿತು.ಪ್ರತಿವರ್ಷದಂತೆ ಈ ಸಲವು ಕೂಡಾ ಪಂಚಕಳಸಗಳು ಶ್ರೀಗವಿಮಠಕ್ಕೆ ಆಗಮಿಸಿದವು.ಈ ಐದು ಕಳಸಗಳಲ್ಲಿ ಒಂದನೇಯದು ಕೊಪ್ಪಳದ ಬನ್ನಿಕಟ್ಟಿ ಭಾಗದ್ದು ಶ್ರೀ ಗೌರಿಶಂಕರದೇವಸ್ಥಾನದಿಂದ, ಎರಡನೆಯದು ವಿ.ಕೆ.ಸಜ್ಜನರ ಮನೆಯಿಂದ, ಮೂರನೆಯದು ಪಲ್ಲೇದವರಓಣಿಯ ಶ್ರೀ ಬಸವೇಶ್ವರದೇವಸ್ಥಾನದದೈವದವರಿಂದ, ನಾಲ್ಕನೆಯದುಕೋಟೆರಸ್ತೆಯ ಶ್ರೀ ಮಹೇಶ್ವರದೇವಸ್ಥಾನದದೈವದವರಿಂದ ಹಾಗೂ ಐದನೆಯದು ಶ್ರೀ ಪ್ಯಾಟಿಈಶ್ವರದೇವಸ್ಥಾನದದೈವದವರಿಂದ ಗವಿಮಠಕ್ಕೆಪಂಚಕಳಸಗಳು ಆಗಮಿಸಿದವು.ಭಕ್ತರುಆರಂಭದಲ್ಲಿಪಂಚಕಳಸಗಳನ್ನು ಕರ್ತೃಗದ್ದುಗೆಯ ಮುಂಭಾಗದ ಪೀಠದಲ್ಲಿವಿಧಿವಿಧಾನಗಳ ಮೂಲಕ ಪೂಜೆಗೈದು, ಶ್ರೀ ಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಕರ್ತೃಗದ್ದುಗೆಯಗೋಪುರಕ್ಕೆ ಕಳಸಾರೋಹಣ ನೆರವೇರಿಸಿದರು.

Please follow and like us:
error