ಶ್ರೀಕ್ಷೇತ್ರ ಹುಲಿಗಿ ದೇವಸ್ಥಾನಕ್ಕೆ ಕಿರ್ಲೋಸ್ಕರ್ ಫ್ಯಾಕ್ಟರಿಯಿಂದ ಟ್ರ್ಯಾಕ್ಟರ್ ದೇಣಿಗೆ

ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಬೇವಿನಹಳ್ಳಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ವಿ.ಗುಮಾಸ್ತೆ ಕಾರ್ಖಾನೆಯ ವತಿಯಿಂದ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ ದೇವಸ್ಥಾನಕ್ಕೆ ನೂತನ ಟ್ರ್ಯಾಕ್ಟರ್ ನೀಡಿದ್ದಾರೆ.
ಇದನ್ನು ಶಾಸಕ ಕೆ.ರಾಘವೇಂದ್ರ ಹಾಗೂ ಬಜಿ ಪಂ ಅಧ್ಯಕ್ಷ ಕೆ.ರಾಜಶೇಖರ್ ಹಿಟ್ನಾಳ್ ಮೂಲಕ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು.ಈ ಹಿಂದೆ ಕಾರ್ಖಾನೆಯ ವತಿಯಿಂದ ದೇವಸ್ಥಾನಕ್ಕೆ ಸ್ವೀಪಿಂಗ್ ಮಿಷನ್ ಸಹ ನೀಡಲಾಗಿತ್ತು
ಈ ಸಂದರ್ಭದಲ್ಲಿ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಪಿ.ನಾರಾಯಣ್ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ವಿಜಯಕುಮಾರ ಶ್ರೇಷ್ಠಿ ಇದ್ದರು.

Please follow and like us:
error