ಶೇಖರಗೌಡ ಬಣದಿಂದ ಜಿಲ್ಲಾ ಕಸಾಪಕ್ಕೆ ಶರಣೇಗೌಡ ಪೋಲಿಸ್ ಪಾಟೀಲ್ ನಾಮಪತ್ರ ಸಲ್ಲಿಕೆ

ಕೊಪ್ಪಳ ಮುಂದಿನ ತಿಂಗಳು ಮೇ ೯ ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ , ಹಾಲಿ ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ನೇತೃತ್ವದಲ್ಲಿ ಶೇಖರಗೌಡ ಬಣದಿಂದ ಶಿಕ್ಷಕ ಶರಣಗೌಡ ಪೋಲೀಸ್ ಪಾಟೀಲ್ ಅವರು ಬುಧವಾರ ನೂರಾರು ಬೆಂಬಲಿಗರೊಂದಿಗೆ ನಗರದ ತಹಶೀಲ್ದಾರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು , ನಾಮಪತ್ರ ಸಲ್ಲಿಸುವ ಮೊದಲು ಶ್ರೀಗವಿಮಠಕ್ಕೆ ಭೇಟಿ ನೀಡಿ , ಅಜ್ಜನ ದರ್ಶನ ಪಡೆದ ಬಳಿಕ ನೇರವಾಗಿ ತಹಶೀಲ್ದಾರ ಕಚೇರಿಗೆ ಆಗಮಿಸಿ , ನಾಮಪತ್ರ ಸಲ್ಲಿಸಿದರು . ಇದೇ ವೇಳೆ ಸಾಹಿತಿ ಬಸವರಾಜ ಬಿನ್ನಾಳ ಅವರೂ ಸಹ ನಾಮಪತ್ರ ಸಲ್ಲಿಸಿದರು . ನಂತರ ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ಅಂಗಡಿ ಅವರ ಹತ್ತಿ ಮಿಲ್‌ನಲ್ಲಿ ಆಜೀವ ಸದಸ್ಯರ ಹಾಗೂ ಜಿಲ್ಲೆಯ ಹಾಲ ತಾಲೂಕು ಹಾಗೂ ಹೋಬಳಿ ಘಟಕಗಳ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಸಭೆಯನ್ನು ಏರ್ಪಡಿಸಲಾಗಿತ್ತು . ಈ ಸಭೆಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಅವರು , ಪ್ರಸ್ತುತ ಕಸಾಪ ಚುನಾವಣೆಯು , ಭಾರಿ ಜಿದ್ದಾ ಜಿದ್ದಿಯಿಂದ ಕೂಡಿದೆ . ಈಗಾಗಲೇ ಕಣದಲ್ಲಿರುವ ಅಭ್ಯರ್ಥಿಗಳು ಆಜೀವ ಸದಸ್ಯರ ಮನೆ ಬಾಗಿಲಿಗೆ ಹೋಗಿ ಮತ ಯಾಚಿಸಿದ್ದಾರೆ , ಇನ್ನೂ ನಾವುಗಳು , ಇಂದಿನಿಂದ ಕಾರ್ಯ ಪ್ರವೃತ್ತರಾಗಿ , ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶೇಖರಗೌಡ ಮಾಲ ಪಾಟೀಲ್ ಅವರಿಗೆ ಮತ್ತು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶರಣೇಗೌಡ ಅವರ ಮರವಾಗಿ ಮತಯಾಚನೆ ಮಾಡಬೇಕಿದೆ . ಈ ನಿಟ್ಟಿನಲ್ಲಿ ಗುಂಪಿನ ಎಲ್ಲಾ ಮುಖಂಡರು ಪ್ರಯತ್ನ ಮಾಡಬೇಕು ಎಂದರು . ಹಿರಿಯ ಸಾಹಿತಿ ವಿಠಪ್ಪ ಗೋರಂಟ್ಲಿ ಮಾತನಾಡಿ , ಕಳೆದ ಹಲವಾರು ವರ್ಷಗಳ ಇತಿಹಾಸದಲ್ಲಿ ಶೇಖರಗೌಡ್ರ ಗುಂಪಿನ ಅಭ್ಯರ್ಥಿಗಳು ಸತತವಾಗಿ ಗೆಲುವು ರ್ಸಾಧಿಸುತ್ತಾ ಬಂದಿದ್ದಾರೆ , ಹಿಂದು ಬಾರಿ ಮಾತ್ರ ನಾವು ಸೋತಿದ್ದೇವೆ . ಈ ಸಾರೆಯೂ ಸಹ , ನಮ್ಮ ಗುಂಪಿನ ಅಭ್ಯರ್ಥಿಯನ್ನು ಅತ್ಯಂತ ಬಹುಮತದಿಂದ ಆಯ್ಕೆ ಮಾಡಬೇಕಿದೆ . ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶೇಖರಗೌಡ ಅವರ ಪರವಾಗಿಯೂ ನಾವು ಹೆಚ್ಚಿನ ಕೆಲಸ ಮಾಡಬೇಕಿದೆ ಎಂದರು . ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ಮಾತನಾಡಿ , ಈ ಬಾಗಿ ಕಾಡಾಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಜಯಗಳಿಸುವುದು ಶತಸಿದ್ದ , ಯಾಕೆಂದರೆ , ರಾಜ್ಯಕ್ಕೆ ಶೇಖರಗೌಡ್ರು ಸ್ಪರ್ಧೆ ಮಾಡಿದ್ದಾರೆ , ಮತ್ತು ನಾವು ಕಳೆದ ಐದು ವರ್ಷಗಳ ಕಾಲ ಎಲ್ಲರನ್ನು ಒಗ್ಗೂಡಿಸಿಕೊಂಡು ಕಸಾಪ ಕಾರ್ಯ ಚಟುವಟಿಕೆಗಳನ್ನು ನಡೆಸಿದ್ದೇವೆ . ಹೀಗಾಗಿ ನಮ್ಮ ಅಭ್ಯರ್ಥಿಯ ಗೆಲುವು ನೂರಕ್ಕೆ ನೂರರಷ್ಟು ಸತ್ಯ ಎಂದರು . ಸಾಹಿತಿ ಈಶಪ್ಪ ಮಳಗಿ , ಯಲಬುರ್ಗಾ ಸರಕಾರಿ ನೌಕರ ಸಂಘದ ಅಧ್ಯಕ್ಷ ವ್ಯ.ಜಿ. ಪಾಟೀಲ್ , ಕನಕಗಿರಿ ಕಸಾಪ ಅಧ್ಯಕ್ಷ ಮೈಬೂಬು , ಹಿರಿಯ ಸಾಹಿತಿ ಬಸವರಾಜ ಚಿನ್ನಾಳ , ತೋಟಪ್ಪ ಕಾಮನೂರು ಸೇರಿದಂತೆ ಅನೇಕರು ಮಾತನಾಡಿದರು . ಈ ಸಂದರ್ಭದಲ್ಲಿ ಗಂಗಾವತಿ ತಾಲೂಕ ಕಸಾಪ ಎಸ್.ಎ.ಗೊಂಡಬಾಳ , ಕಾರಟಗಿ ತಾಲೂಕ ಅಧ್ಯಕ್ಷ ಚನಬಸಪ್ಪ ವಕ್ತಳದ , ಕುಕನೂರು ಕಸಾಪ ಅಧ್ಯಕ್ಷ ಲಕ್ಷ್ಮಣ ಹಿರೇಮನಿ , ಚನ್ನಪ್ಪ ಲ್ಯಾವಳ , ಭೀಮರೆಡ್ಡಿ ಶ್ಯಾಡ್ಲಿಗೇರಿ , ಬಸವರಾಜ ಮೇಟಿ , ಚನ್ನಪ್ಪ ಕಡ್ಡಿಪುಡಿ , ಡಾ . ಶ್ರೀನಿವಾಸ ಹ್ಯಾಟ , ರಮೇಶ ತುಪ್ಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು . ಕು . ಶಾಂಭವಿ ಆಂಗಡಿ ಪ್ರಾರ್ಥಿಸಿದರು . ಜಿಲ್ಲಾ ಕಸಾಪ ಕೋಶಾಧ್ಯಕ್ಷ ಸಂತೋಷ ದೇಶಪಾಂಡೆ ಕಾರ್ಯಕ್ರಮ ನಿರ್ವಹಿಸಿದರು , ಜಿ.ಎಸ್.ಗೋನಾಳ ಸ್ವಾಗತಿಸಿದರು , ಗವಿ ಹುಡೇದಜಾಲ ವಂದಿಸಿದರು .

Please follow and like us:
error